ಜಿಲ್ಲಾ ಸುದ್ದಿಗಳು

ಅಶಾಂತಿ ಸೃಷ್ಟಿಸಲು ಎಸ್‌ಡಿಪಿಐ-ಪಿಎಫ್‌ಐ ಸಂಚು, ಎಲ್ಲಾ ಕಾರ್ಯಕರ್ತರನ್ನು ಬಂಧಿಸಿ: ಶರಣ್‌‌ ಪಂಪ್‌‌ವೆಲ್‌ ಆಗ್ರಹ

ಮಂಗಳೂರು: ಕೆಲವು ದಿನಗಳ ಹಿಂದೆ ನಗರದಲ್ಲಿ ಪೊಲೀಸರ ಕೊಲೆಗೆ ಯತ್ನ ನಡೆದಿದ್ದು, ಈ ಘಟನೆಯ ಹಿಂದೆ ಪಿಎಫ್‌‌ಐ ಹಾಗೂ ಎಸ್‌‌ಡಿಪಿಐ ಕೈವಾಡ ಇರುವುದಾಗಿ ಆರೋಪ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಸುದ್ದಿಸಂಸ್ಥೆಯೊಂದರ ಜೊತೆ ಮಾತನಾಡಿದ ವಿಶ್ವ ಹಿಂದೂ ಪರಿಷತ್‌‌‌ ವಿಭಾಗ ಕಾರ್ಯದರ್ಶಿ ಶರಣ್‌‌ ಪಂಪ್‌‌ವೆಲ್‌‌ ಅವರು, “ನಗರದಲ್ಲಿ 2019ರ ಡಿಸೆಂಬರ್‌ನಲ್ಲಿ ನಡೆದ ಗೋಲಿಬಾರ್‌ ಪ್ರಕರಣಕ್ಕೆ ಪ್ರತೀಕಾರ ತೀರಿಸಲು ಪೊಲೀಸರ ಕೊಲೆಗೆ ಯತ್ನಿಸಿದ್ದು ಎಸ್‌‌ಡಿಪಿಐ ಹಾಗೂ ಪಿಎಫ್‌‌ಐ ಕಾರ್ಯಕರ್ತರು. ಬಂಧಿತ ಆರೋಪಿಗಳೆಲ್ಲರೂ ಎಸ್‌‌ಡಿಪಿಐ ಹಾಗೂ ಪಿಎಫ್‌‌ಐ ಸಂಘಟನೆಗೆ ಸೇರಿದವರಾಗಿದ್ದಾರೆ” ಎಂದು ಹೇಳಿದ್ದಾರೆ.

“ಕುದ್ರೋಳಿಯ ನಾಲ್ಕು ಮಂದಿ, ಬಜ್ಪೆ ಹಾಗೂ ಬಂಟ್ವಾಳದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಈ ಮೂರು ಸ್ಥಳಗಳೂ ಕೂಡಾ ಪಿಎಫ್‌ಐ ಹಾಗೂ ಎಸ್‌ಡಿಪಿಐ ಕೇಂದ್ರಗಳಾಗಿವೆ. ಬಂಟ್ವಾಳ ಅವರ ಮೂಲ ಕೇಂದ್ರವಾದ ಕಾರಣದಿಂದ ಇದು ಯೋಜಿತ ದಾಳಿಯಾಗಿದೆ. ಈ ಕೃತ್ಯಕ್ಕೆ ಪಿಎಫ್‌ಐ ಸಣ್ಣ ಯುವಕರನ್ನು ಬಳಸಿಕೊಂಡಿದೆ. ನೈಟ್ರೇಟ್‌‌‌‌ ‌ ಮಾತ್ರೆಯನ್ನು ಈ ಯುವಕರಿಗೆ ಕೊಡಲಾಗಿದ್ದು, ಮಾಯಾ ಗ್ಯಾಂಗ್‌ ಎನ್ನುವ ಹೆಸರಿನಲ್ಲಿ ಈ ಕೃತ್ಯವೆಸಗಿದ್ದಾರೆ” ಎಂದಿದ್ದಾರೆ.

“ಪೊಲೀಸರನ್ನು ಹತ್ಯೆಗೈಯಲು ವ್ಯವಸ್ಥಿತವಾದ ಯೋಜನೆ ಮಾಡಲಾಗಿದೆ. ಆದ್ದರಿಂದ ಪೊಲೀಸ್‌ ಇಲಾಖೆ ಈ ವಿಷಯದ ಬಗ್ಗೆ ಆಳವಾದ ತನಿಖೆ ನಡೆಸಬೇಕಾಗಿದೆ. ಈ ಕೃತ್ಯಕ್ಕೆ ಆರ್ಥಿಕ ಹಾಗೂ ಆಶ್ರಯ ನೀಡಿದವರನ್ನು ಕೂಡಾ ಬಂಧಿಸಬೇಕು. ಇದರಲ್ಲಿ ದ.ಕ ಜಿಲ್ಲೆಯ ಎಸ್‌ಡಿಪಿಐ ಹಾಗೂ ಪಿಎಫ್‌ಐ ನಾಯಕರ ಶೇ.100ರಷ್ಟು ಕೈವಾಡವಿದೆ. ಅವರ ಸೂಚನೆಯಿಲ್ಲದೆ ಈ ಕೃತ್ಯ ನಡೆಸುವುದು ಅಸಾಧ್ಯ. ಎಸ್‌ಡಿಪಿಐ ಹಾಗೂ ಪಿಎಫ್‌ಐ ನಾಯಕರನ್ನು ಕೂಡಲೇ ಬಂಧಿಸಬೇಕು” ಎಂದು ಒತ್ತಾಯಿಸಿದ್ದಾರೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

 

Related posts

ಕೋವಿಡ್ 19 ಅಪ್‌ಡೇಟ್ಸ್: ದ.ಕ. ಜಿಲ್ಲೆಯಲ್ಲಿ ಮೂರು, ಉಡುಪಿ, ಕಾಸರಗೋಡಿನಲ್ಲಿ ಪಾಸಿಟಿವ್ ಇಲ್ಲ

Upayuktha

ತುಳು ಅಕಾಡೆಮಿಯಿಂದ ಗೌರವ ಪ್ರಶಸ್ತಿ ಹಾಗೂ ಪುಸ್ತಕ ಬಹುಮಾನಕ್ಕೆ ಅರ್ಜಿ ಆಹ್ವಾನ

Upayuktha

ಇಲ್ಲಿಯ ವಿದ್ಯಾರ್ಥಿಗಳಿಗೆ ಕಾಡುವ ನೆಟ್ವರ್ಕ್ ಸಮಸ್ಯೆ

Harshitha Harish