ದೇಶ-ವಿದೇಶ

ಹಿರಿಯ ನಟಿ ಖುಷ್ಬೂ ಕಾಂಗ್ರೆಸ್ ಪಕ್ಷ ಗುಡ್ ಬೈ ಹೇಳಿ ಬಿಜೆಪಿ ಎಂಟ್ರಿ

ಚೆನ್ನೈ: ಹಿರಿಯ ನಟಿಯಾದ ಖುಷ್ಬೂ ಸುಂದರ್ ಅವರು ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿದ್ದಾರೆ ಎನ್ನಲಾಗಿದ್ದು, ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗುವ ಸಾಧ್ಯತೆಗಳು ಇದೆಂದು ಹೇಳಲಾಗಿದೆ.

ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ವಕ್ತಾರೆಯಾಗಿದ್ದ ಖುಷ್ಬೂ ಅವರು ಭಾನುವಾರ ರಾತ್ರಿ ಕಾಂಗ್ರೆಸ್ ಗೆ ವಿದಾಯ ಹೇಳಿ, ಬೆಳಿಗ್ಗೆ ಅವರು ಬಿಜೆಪಿಗೆ ಸೇರಲಿದ್ದಾರೆ. ಈ ಬಗ್ಗೆ ಬಿಜೆಪಿ ಮೂಲಗಳು ಮಾಹಿತಿ ನೀಡಿದೆ.

ದೆಹಲಿಗೆ ತೆರಳಲಿರುವ ಖುಷ್ಬೂ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ರವರನ್ನು ಮತ್ತು ಇತರೆ  ಹಿರಿಯ ನಾಯಕರನ್ನು ಭೇಟಿ ಮಾಡಿ ಅಧಿಕೃತವಾಗಿ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಲಾಗಿದೆ.

ಹಾಗೆಯೇ ಖುಷ್ಬೂ ಅವರೊಂದಿಗೆ ಇನ್ನೊಬ್ಬರು ಐಆರ್ ಎಸ್ ಅಧಿಕಾರಿ, ಖ್ಯಾತ ಯೂಟ್ಯೂಬರ್ ಒಬ್ಬರು ಕೂಡ ನಾಳೆ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎನ್ನಲಾಗಿದೆ.

2014ರ ಸೆಪ್ಟೆಂಬರ್ ವೇಳೆಯಲ್ಲಿ ಡಿಎಂಕೆ ಪಕ್ಷ ತೊರೆದಿದ್ದ ಖುಷ್ಬೂ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಆದರೆ ಕಳೆದೊಂದು ತಿಂಗಳಿನಿಂದ ಖುಷ್ಬೂ ಅವರು ಬಿಜೆಪಿಗೆ ಸೇರ್ಪಡೆಯಾಗುವ ಕುರಿತಾದ ವಿಚಾರಗಳ ಊಹಾಪೋಹ ಕೇಳಿಬರುತ್ತಿದ್ದವು.

ಹಾಗೆ ಕಳೆದ ವಾರ ನಟಿ ಖುಷ್ಬೂ ಅವರು ಬಿಜೆಪಿ ಸೇರ್ಪಡೆ ವಿಚಾರವನ್ನು ತಳ್ಳಿ ಹಾಕಿ , ದಿಢೀರ್ ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿದ್ದಾರೆ ಎನ್ನಲಾಗಿದೆ. ಹಾಗೆ ದೆಹಲಿಗೆ ತೆರಳಲು ವಿಮಾನ ನಿಲ್ದಾಣದಲ್ಲಿ ಕಾಯುತ್ತಿದ್ದ ನಟಿ ಖುಷ್ಬೂ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

Related posts

ಕೇರಳದಲ್ಲಿ ಕೊರೊನಾಗೆ ಮೊದಲ ಪೊಲೀಸ್ ಅಧಿಕಾರಿ ಬಲಿ

Harshitha Harish

ಕೊರೊನಾ: ದೇಶದಲ್ಲಿ ಒಟ್ಟಾರೆ ಸಂಖ್ಯೆ ಹೆಚ್ಚಿದರೂ ಪಾಸಿಟಿವ್‌ ಪ್ರಕರಣಗಳು ಸ್ಥಿರ: ಐಸಿಎಂಆರ್

Upayuktha

ಅ.31 ರಂದು ಆಗಸದಲ್ಲಿ ಅಪರೂಪದ ಬ್ಲೂ ಮೂನ್ ಗೋಚರ

Harshitha Harish