ಚಂದನವನ- ಸ್ಯಾಂಡಲ್‌ವುಡ್ ನಿಧನ ಸುದ್ದಿ

ಹಿರಿಯ ನಟಿ ಪ್ರತಿಮಾದೇವಿ ನಿಧನ

ಬೆಂಗಳೂರು: ಹಿರಿಯ ನಟಿ ಪ್ರತಿಮಾದೇವಿ(88) ನಿಧನರಾಗಿದ್ದಾರೆ. ನಿರ್ದೇಶಕ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಅವರ ತಾಯಿ ಪ್ರತಿಮಾದೇವಿ ಅವರು ಹಲವು ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ.

ಸುಮಾರು 60 ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ಅವರು ಅಭಿನಯಿಸಿದ್ದಾರೆ.

ಕನ್ನಡ ಚಿತ್ರರಂಗ ಮತ್ತು ರಂಗಭೂಮಿ ನಟಿಯಾಗಿದ್ದ ಪ್ರತಿಮಾದೇವಿ ಏಪ್ರಿಲ್ 9, 1932 ರಲ್ಲಿ ಜನಿಸಿದ್ದರು.

ನಿರ್ದೇಶಕ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಮತ್ತು ನಟಿ, ನಿರ್ಮಾಪಕಿ, ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್ ಅವರ ಮಕ್ಕಳಾಗಿದ್ದಾರೆ.

ಮೈಸೂರಿನ ಸರಸ್ವತಿಪುರಂನ ನಿವಾಸದಲ್ಲಿ ನಾಳೆ ಮಧ್ಯಾಹ್ನದವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನದ ನಂತರ ಅಂತ್ಯಕ್ರಿಯೆ ನೆರವೇರಲಿದೆ.

Related posts

ಮುದ್ದು ಮಗುವಿನ ಮೊದಲ ಫೋಟೋ ಶೇರ್ ಮಾಡಿದ ನಿರ್ದೇಶಕ ಪವನ್ ಒಡೆಯರ್

Harshitha Harish

ಅರ್ಜೆಂಟೀನಾದ ಫುಟ್ ಬಾಲ್ ದಂತಕಥೆ ಡೀಗೋ ಮರಡೋನಾ ನಿಧನ

Upayuktha

ನಟ ,ನಿರ್ದೇಶಕ ,ನಿರ್ಮಾಪಕ ರಾದ ದಿನೇಶ್ ಗಾಂಧಿ ನಿಧನ

Harshitha Harish