ನಿಧನ ಸುದ್ದಿ ಪ್ರಮುಖ ರಾಜ್ಯ

ಖ್ಯಾತ ಕವಿ ಡಾ. ಎನ್ ಎಸ್‌ ಲಕ್ಷ್ಮೀನಾರಾಯಣ ಭಟ್ಟರು ವಿಧಿವಶ

ಬೆಂಗಳೂರು: ಖ್ಯಾತ ಕವಿ, ಸಾಹಿತಿ ಡಾ. ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟರು ವಿಧಿವಶರಾಗಿದ್ದಾರೆ. ಅವರಿಗೆ 85 ವರ್ಷ ವಯಸ್ಸಾಗಿತ್ತು.

ಕನ್ನಡ, ಸಂಸ್ಕೃತ ಮತ್ತು ಇಂಗ್ಲಿಷ್‌ ಭಾಷೆಗಳಲ್ಲಿ ಅಪಾರ ಸಾಹಿತ್ಯ ಕೃಷಿ ಮಾಡಿದ್ದ ಡಾ. ಎನ್‌ಎಸ್ ಲಕ್ಷ್ಮೀನಾರಾಯಣ ಭಟ್ಟರು ಇಂದು ಬೆಳಗಿನ ಜಾವ (ಮಾ.6) 4:45ರ ಸುಮಾರಿಗೆ ಬನಶಂಕರಿಯ ತಮ್ಮ ಮನೆಯಲ್ಲಿ ನಿಧನರಾದರು. ಅವರು ದೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ಎಂದು ಕುಟುಂಬ ಮೂಲಗಳು ತಿಳಿಸಿವೆ.

ಬೆಳಗ್ಗೆ 10:30ರ ವರೆಗೆ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶವಿದ್ದು, ಬಳಿಕ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಮೂಲಗಳು ಹೇಳಿವೆ.

ಕನ್ನಡ ಸಾಹಿತ್ಯ ಲೋಕದ ಅಗ್ರಗಣ್ಯ ಕವಿ, ಜನಪ್ರಿಯ ಪ್ರಾಧ್ಯಾಪಕರಾಗಿದ್ದರು. ಯೇಟ್ಸ್‌, ಎಲಿಯಟ್‌, ಷೇಕ್ಸ್‌ಪಿಯರ್‌ನಂತಹ ಇಂಗ್ಲಿಷ್‌ ಸಾಹಿತ್ಯದ ಅಗ್ರಜರ ಕಾವ್ಯಗಳನ್ನು ಕನ್ನಡಕ್ಕೆ ತಂದಿದ್ದರು.

ಎನ್‌ಎಸ್‌ ಲಕ್ಷ್ಮೀನಾರಾಯಣ ಭಟ್ಟರ ಕೆಲವು ಜನಪ್ರಿಯ ಭಾವಗೀತೆಗಳಲ್ಲಿ ಇಲ್ಲಿ ಆಲಿಸಿ:

ಭಾವಗೀತೆ, ಸಾಹಿತ್ಯ ವಿಮರ್ಶೆ, ಅನುವಾದ, ನವ್ಯ ಕವಿತೆ, ಮಕ್ಕಳ ಗೀತೆಗಳ ರಚನೆ- ಹೀಗೆ ಹಲವು ಕ್ಷೇತ್ರಗಳಲ್ಲಿ ಅವರು ಸಾಹಿತ್ಯ ರಚಿಸಿ ಅಪಾರ ಜನಪ್ರಿಯತೆ ಪಡೆದಿದ್ದರು.

ಶಿವರಾಮ ಭಟ್ಟ ಮತ್ತು ಮೂಕಾಂಬಿಕೆ ದಂಪತಿಗಳ ಮಗನಾಗಿ ಶಿವಮೊಗ್ಗದಲ್ಲಿ 1936ರ ಅಕ್ಟೋಬರ್‌ 29ರಂದು ಎನ್.ಎಸ್‌. ಲಕ್ಷ್ಮೀನಾರಾಯಣ ಭಟ್ಟರು ಜನಿಸಿದ್ದರು.

ಸ್ನಾತಕೋತ್ತರ ಪದವಿ ಪಡೆದ ಬಳಿಕ ಭಾಷಾ ಶಾಸ್ತ್ರ ಸಂಶೋಧಕರಾಗಿ ಎರಡು ವರ್ಷಗಳ ಕಾಲ ಕೆಲಸ ಮಾಡಿದ ಬಳಿಕ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದರು.

ಅನಕೃ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ-ಸಮ್ಮಾನಗಳನ್ನು ಪಡೆದಿದ್ದರು. ಅವರ ‘ಹೊರಳು ದಾರಿಯಲ್ಲಿ ಕಾವ್ಯ’ ವಿಮರ್ಶಾ ಗ್ರಂಥಕ್ಕೆ 1974ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತ್ತು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ಉಪಯುಕ್ತ ನ್ಯೂಸ್ ಸಿಗ್ನಲ್‌ ಗ್ರೂಪಿಗೆ ಜಾಯಿನ್ ಆಗಲು ಈ ಲಿಂಕ್‌ ಬಳಸಿ

Related posts

ಮಾಜಿ ಸಚಿವ ರೋಷನ್ ಬೇಗ್ ಗೆ ಸಿಬಿಐ ವಿಶೇಷ ನ್ಯಾಯಾಲಯದಿಂದ ಜಾಮೀನು

Harshitha Harish

ಗ್ರಾಮೀಣ ಪ್ರದೇಶದಲ್ಲಿ ಆಧುನಿಕ ಟೆಕ್ನಾಲಜಿ ಒದಗಿಸಿರುವುದು ಅಭಿನಂದನೀಯ: ಡಾ.ಅನುರಾಗ್ ಶೆಟ್ಟಿ

Sushmitha Jain

ಸಮುದಾಯಗಳ ಸಾಂಸ್ಕೃತಿಕ ದಾಖಲಾತಿ ಅಗತ್ಯ: ಹರಿಕೃಷ್ಣ ಪುನರೂರು

Upayuktha