ಚಂದನವನ- ಸ್ಯಾಂಡಲ್‌ವುಡ್ ನಿಧನ ಸುದ್ದಿ

ಹಿರಿಯ ನಿರ್ಮಾಪಕ ಎಚ್.ಕೆ. ಶ್ರೀನಿವಾಸ್ ನಿಧನ

ಬೆಂಗಳೂರು : ನಿರ್ಮಾಪಕರಾದ ಹೆಚ್. ಕೆ ಶ್ರೀನಿವಾಸ್ ಅವರು ನಿಧನರಾಗಿದ್ದಾರೆ. ಅವರಿಗೆ 70 ವರ್ಷ ವಯಸ್ಸಾಗಿತ್ತು.

ಮೃತರು ಇಬ್ಬರು ಮಕ್ಕಳು ಮತ್ತು ಪತ್ನಿಯನ್ನು ಅಗಲಿದ್ದಾರೆ. ಅನಾರೋಗ್ಯದ ಸಮಸ್ಯೆ ಯಿಂದ ರಂಗದೊರೆ ಆಸ್ಪತ್ರೆಗೆ ದಾಖಲಾಗಿದ್ದ ನಿರ್ಮಾಪಕ ಶ್ರೀನಿವಾಸ್ ರವರು ಹೃದಯಾಘಾತದಿಂದ ನಿಧನರಾದರು.

ಶ್ರೀನಿವಾಸ್ ಅವರು “ಮಾಯಾ ಮುಸುಕು”, “ಗುಂಡನ ಮದುವೆ”, “ಪಟ್ಟಣಕ್ಕೆ ಬಂದ ಪುಟ್ಟ”, “ಚಂದನ ಚಿಗುರು”, “ಕರುನಾಡು” ಮತ್ತು “ಗುರುಕುಲ” ಚಿತ್ರಗಳ ನಿರ್ಮಾಪಕಾರಾಗಿದ್ದ ಶ್ರೀನಿವಾಸ್ ಅವರ “ಗುರುಕುಲ” ಸಿನಿಮಾ ಕ್ಕೆ ಅತ್ಯುತ್ತಮ ಮಕ್ಕಳ ಚಿತ್ರ ಎಂದು ರಾಜ್ಯ ಪ್ರಶಸ್ತಿ ಲಭಿಸಿತ್ತು.

ಅವರ ಅಂತ್ಯಕ್ರಿಯೆ ಇಂದು ನೆರವೇರಲಿದೆ ಎಂದು ಕುಟುಂಬ ಮೂಲಗಳು ಮಾಹಿತಿ ತಿಳಿಸಿದ್ದಾರೆ.

Related posts

ಅಡಿಕೆ ಬೆಳೆಗಾರರ ಸಂಘದ ಮಾಜಿ ಅಧ್ಯಕ್ಷ ಮಂಚಿ ಶ್ರೀನಿವಾಸ ಆಚಾರ್ ನಿಧನ

Upayuktha

ಚಿತ್ರ ಕಲಾವಿದ, ಛಾಯಾಗ್ರಾಹಕ ಕೆ. ವಾಸುದೇವ ರಾವ್ ನಿಧನ

Upayuktha

ನಿವೃತ್ತ ಶಿಕ್ಷಕ ಸುಮ್ಮಗುತ್ತು ನೇಮಿರಾಜ ಕಟ್ಟಡ ನಿಧನ

Upayuktha