ಕ್ಷೇತ್ರಗಳ ವಿಶೇಷ ಗ್ರಾಮಾಂತರ ಸ್ಥಳೀಯ

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ KIOSK ಸೇವಾ ಕೇಂದ್ರ ಉದ್ಘಾಟನೆ

ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿಯ ದೇವಳದ ಭಕ್ತರ ಅನುಕೂಲತೆಗಾಗಿ ಕ್ಷೇತ್ರದ ಪ್ರವಚನ ಮಂಟಪ ಹಾಗೂ ಸಹ್ಯಾದ್ರಿ ವಸತಿ ಗೃಹದಲ್ಲಿ KIOSK ಸೇವಾ ಕೇಂದ್ರ (ಸೇವಾ ರಶೀದಿ ವಿತರಿಸುವ ಯಂತ್ರ) ಉದ್ಘಾಟಿಸಲಾಯಿತು.

ಭಕ್ತರಿಗೆ ತ್ವರಿತವಾಗಿ ಸೇವಾ ರಶೀದಿ ಪಡೆಯಲು ಸಹಕಾರಿಯಾಗಲಿದೆ ಹಾಗೂ ಭಕ್ತರು ನೇರವಾಗಿ ತಮ್ಮಅಪೇಕ್ಷೆಯ ಸೇವೆಗಳ ರಶೀದಿ ಪಡೆದು ಬಳಿಕ ಸರತಿ ಸಾಲಿನಲ್ಲಿ ಬಂದು ಸ್ವಾಮಿ ದರ್ಶನ ಪಡೆಯಬಹುದು. ಇದರಿಂದ ಭಕ್ತಾದಿಗಳಿಗೆ ಸಮಯದ ಉಳಿತಾಯವಾಗಲಿದೆ. ತಂತ್ರಜ್ಞಾನ ಅಳವಡಿಕೆಯಲ್ಲಿ ಕ್ಷೇತ್ರದ ಇನ್ನೊಂದು ಹೆಜ್ಜೆ ಇದಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಡಿ.ಹರ್ಷೇಂದ್ರ ಕುಮಾರ್ ಹೇಳಿದರು.

ಈ ಸಂದರ್ಭದಲ್ಲಿ ಮಾತೃಶ್ರೀ ಹೇಮಾವತಿ ವಿ.ಹೆಗ್ಗಡೆ, ಶ್ರೀಮತಿ ಸುಪ್ರಿಯಾ ಹರ್ಷೇಂದ್ರ ಕುಮಾರ್, ಪೂರಣ್ ವರ್ಮ, ಲಕ್ಷ್ಮೀನಾರಾಯಣ್ ಪಾರ್ಶ್ವನಾಥ್, ಮಲ್ಲಿನಾಥ್, ಚಂದ್ರಕಾಂತ, ನವೀನ್, KIOSK ನ ಅಭಿವೃದ್ದಿ ತಂಡ, ಧರ್ಮಸ್ಥಳ ಬ್ಯಾಂಕ್ ಆಫ್ ಬರೋಡದ ವಿಜಯಪಾಟೀಲ್, ಕಿರಣ್ ರೆಡ್ಡಿ ಮೊದಲಾದವರು ಉಪಸ್ಥಿತರಿದ್ದರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ನರೇಗಾ: ಎಡಮಂಗಲ ಗ್ರಾ.ಪಂ. ವ್ಯಾಪ್ತಿಯಲ್ಲಿ ದ್ರವ ತ್ಯಾಜ್ಯ ಗುಂಡಿ ನಿರ್ಮಾಣಕ್ಕೆ ಚಾಲನೆ

Upayuktha

ಪೇಜಾವರ ಶ್ರೀಗಳನ್ನು ಭೇಟಿ ಮಾಡಿದ ಎಂಎಲ್‌ಸಿ ಶಾಂತಾರಾಮ ಸಿದ್ದಿ

Upayuktha

ದ.ಕ ಜಿಲ್ಲಾ ಗೃಹರಕ್ಷಕರ ಜಿಲ್ಲಾ ಮಟ್ಟದ ಕ್ರೀಡಾಕೂಟ

Upayuktha

Leave a Comment