ನಗರ ಸ್ಥಳೀಯ

ಮೋದಿ ಜನ್ಮ ದಿನದ ಸೇವಾ ಸಪ್ತಾಹ: ನೀಲಾವರ ಗೋಶಾಲೆಯಲ್ಲಿ ಗೋಪಾಲಕರಿಗೆ ಸಂಮಾನ

ಉಡುಪಿ: ‘ನನ್ನ ಭಕ್ತರ ಸೇವೆ ಮಾಡಿ; ಅದೇ ನನಗೆ ಸಲ್ಲುವ ದೊಡ್ಡ ಸೇವೆ’ ಎಂಬುದು ಭಗವಂತ ಶ್ರೀ ಕೃಷ್ಣನ ಸಂದೇಶ. ಈ ಮಾತನ್ನು ಯಥಾವತ್ ಪಾಲಿಸುವ ಅರ್ಥಪೂರ್ಣ ಕಾರ್ಯಕ್ರಮ ಶನಿವಾರ ಸಂಜೆ ನೀಲಾವರ ಗೋಶಾಲೆಯಲ್ಲಿ ನಡೆಯಿತು.

ಇದೇ ಮೊದಲ ಬಾರಿಗೆ ಗೋಶಾಲೆಯಲ್ಲಿ ಸಿಬಂದಿಗಳಾಗಿ ಕಾರ್ಯನಿರ್ವಹಿಸುತ್ತಿರುವ 33 ಮಂದಿ ಗೋಪಾಲಕರನ್ನು ಆತ್ಮೀಯವಾಗಿ ಗೌರವಿಸಿ ಅಭಿನಂದಿಸುವ ಅಪೂರ್ವ ಕಾರ್ಯಕ್ರಮವು ನಡೆಯಿತು.

ಪ್ರಧಾನಿ ನರೇಂದ್ರ ಮೋದಿಯವರ 70ನೇ ಜನ್ಮ ದಿನಾಚರಣೆಯ ಪ್ರಯುಕ್ತ ಬಿಜೆಪಿಯು ದೇಶಾದ್ಯಂತ ಹಮ್ಮಿಕೊಂಡಿರುವ ಸೇವಾಸಪ್ತಾಹದ ಅಂಗವಾಗಿ ಜಿಲ್ಲಾ ಉಪಾಧ್ಯಕ್ಷ, ಯುವ ನೇತಾರ, ದಕ ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ, ಯಶ್‌ಪಾಲ್ ಸುವರ್ಣ ನೇತೃತ್ವದಲ್ಲಿ ಈ ಅರ್ಥಪೂರ್ಣ ಕಾರ್ಯಕ್ರಮ ನಡೆಯಿತು.

ಎಲ್ಲಾ 33 ಸಿಬಂದಿ ಗೋಪಾಲಕರನ್ನು ಯಶ್‌ಪಾಲ್ ಸುವರ್ಣ ಸಂಮಾನಿಸಿ, ಪೂಜ್ಯ ಪೇಜಾವರ ಶ್ರೀಗಳ ನೇತೃತ್ವದಲ್ಲಿ ನಡೆಯುತ್ತಿರುವ ಈ ಗೋಶಾಲೆಯನ್ನು ಅತ್ಯಂತ ಸುಸೂತ್ರವಾಗಿ ನಡೆಸುವಲ್ಲಿ ಶ್ರಮ ವಹಿಸುತ್ತಿರುವ ಗೋಪಾಲಕರನ್ನು ಗೌರವಿಸುವ ಅಪೂರ್ವ ಅವಕಾಶ ದೊರೆತಿರುವುದು ನಮ್ಮ ಭಾಗ್ಯ. ಈ ಸಂಮಾನದ ಮೂಲಕ ಪ್ರಧಾನಿ ಮೋದಿಯವರ ಜನ್ಮದಿನಾಚರಣೆಯ ಮೆರುಗು ಹೆಚ್ಚಿದೆ. ಅವರಿಗೆ ಮತ್ತಷ್ಟು ಕಾಲ ದೇಶವನ್ನು ಮುನ್ನಡೆಸುವ ಶಕ್ತಿ ಚೈತನ್ಯವನ್ನು ಶ್ರೀ ಕೃಷ್ಣ ಅನುಗ್ರಹಿಸಲಿ ಎಂದು ಹಾರೈಸಿದರು.

ಗೋವಿಗಾಗಿ ಮೇವು ಅಭಿಯಾನದ ಮುಖಂಡ ಯುವ ನೇತಾರ ಪೃಥ್ವಿರಾಜ್ ಶೆಟ್ಟಿ, ಹಿಂದೂ ಜಾಗರಣ ವೇದಿಕೆ ಮುಖಂಡ ಮಹೇಶ್ ಬೈಲೂರು, ಬಿಜೆಪಿ ಯುವ ಮುಖಂಡರಾದ ಸಚಿನ್ ಸುವರ್ಣ,  ಗೋಶಾಲೆಯ ವ್ಯವಸ್ಥಾಪಕರುಗಳಾದ ನರಸಿಂಹ ಭಟ್, ಸುಬ್ರಹ್ಮಣ್ಯ ರಾವ್, ಯಾದವ್ ಪೂಜಾರಿ ನೀತಾ ಪ್ರಭು ಮೊದಲಾದವರು ಉಪಸ್ಥಿತರಿದ್ದರು. ವಾಸುದೇವ ಭಟ್ ಪೆರಂಪಳ್ಳಿ ಪ್ರಸ್ತಾವನೆಗೈದರು. ಯತೀಶ್ ಕೋಟ್ಯಾನ್ ಮಟ್ಟು ಕಾರ್ಯಕ್ರಮ ನಿರೂಪಿಸಿದರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್ App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ಸ್ವಚ್ಚತೆ ಕಾಪಾಡಿಕೊಂಡು ವ್ಯಾಪಾರ ನಡೆಸಿ: ಮನಪಾ ಆಯುಕ್ತ ಅಜಿತ್ ಕುಮಾರ್ ಹೆಗ್ಡೆ

Upayuktha

ಕಾಸರಗೋಡು ನುಳ್ಳಿಪ್ಪಾಡಿಯಲ್ಲಿ ಕರಾಟೆ ತರಗತಿ ಆರಂಭ

Upayuktha

ಪಡೀಲ್‌ನ ಫಸ್ಟ್‌ ನ್ಯೂರೋ ಆಸ್ಪತ್ರೆ ಸುತ್ತಲಿನ ಪ್ರದೇಶ ಕಂಟೈನ್‌ಮೆಂಟ್ ಝೋನ್: ಜಿಲ್ಲಾಡಳಿತ ಘೋಷಣೆ

Upayuktha

Leave a Comment