ಗ್ರಾಮಾಂತರ ಸ್ಥಳೀಯ

ಡಾ ಸುರೇಶ ನೆಗಳಗುಳಿ ಅವರಿಗೆ ‘ಸೇವಾರತ್ನ’ ಪ್ರಶಸ್ತಿ

ಕಿನ್ನಿಗೋಳಿ: ಪುತ್ತೂರು ಸಾಹಿತ್ಯ ವೇದಿಕೆ, ಕಥಾ ಬಿಂದು ಪ್ರಕಾಶನ ಹಾಗೂ ಯುಗ ಪುರುಷ ಕಿನ್ನಿಗೋಳಿ ಇವರ ಸಹಯೋಗದೊಂದಿಗೆ ನಡೆದ ಸಾಹಿತ್ಯ ಸಂಭ್ರಮ 2021 ಪ್ರಯುಕ್ತ ಕಿನ್ನಿಗೋಳಿಯ ಯುಗ ಪುರುಷ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಮಂಗಳೂರಿನಲ್ಲಿರುವ ವೈದ್ಯ ಹಾಗೂ ಬರಹಗಾರ ಡಾ ಸುರೇಶ ನೆಗಳಗುಳಿ ಇವರಿಗೆ ‘ಸೇವಾ ರತ್ನ’ ಪುರಸ್ಕಾರವನ್ನು ನೀಡಿ ಸತ್ಕರಿಸಲಾಯಿತು.

ಹರಿಕೃಷ್ಣ ಪುನರೂರು ರವರು ಪ್ರದಾನ ಮಾಡಿದ ಈ ಪ್ರಶಸ್ತಿ ಸಮಾರಂಭದಲ್ಲಿ ಪುತ್ತೂರು ಸಾಹಿತ್ಯ ವೇದಿಕೆಯ ಕಟ್ಟತ್ತಿಲ ಗೋಪಾಲಕೃಷ್ಣ ಭಟ್, ಕಥಾಬಿಂದು ಪ್ರಕಾಶನದ ಪಿ.ವಿ. ಪ್ರದೀಪ್ ಕುಮಾರ್, ಯುಗ ಪುರುಷ ಮುಖ್ಯಸ್ಥ ಭುವನಾಭಿರಾಮ ಉಡುಪ, ಸಾಹಿತ್ಯ ರತ್ನ ಪುರಸ್ಕಾರ ಹೊಂದಿದ ಮೂಡಬಿದ್ರೆಯ ಡಾ ಮೋಹನ ಆಳ್ವ ಮತ್ತು ವರ್ಷದ ಪತ್ರಕರ್ತ ಪ್ರಶಸ್ತಿ ಪಡೆದ ರೇಮಂಡ್ ಡಿ‌ಕುನ್ಹಾ ಸಹಿತ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಬಳಿಕ ಹೆಸರಾಂತ ಕವಿಗಳಿಂದ ಕವಿಗೋಷ್ಠಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದುವು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ಉಪಯುಕ್ತ ನ್ಯೂಸ್ ಸಿಗ್ನಲ್‌ ಗ್ರೂಪಿಗೆ ಜಾಯಿನ್ ಆಗಲು ಈ ಲಿಂಕ್‌ ಬಳಸಿ

Related posts

ಹಿಂದೂ ಜಾಗರಣ ವೇದಿಕೆಯಿಂದ ತಡೆಬೇಲಿ ನಿರ್ಮಾಣ

Harshitha Harish

ಕವಿ ಮುದ್ದಣ ಜಯಂತಿ: ಗೌರವ ಸಮರ್ಪಣೆ

Upayuktha

ಹಿಂದುಳಿದ ವರ್ಗಗಳ ಪ್ರೋತ್ಸಾಹಧನ: ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

Upayuktha