ನಗರ ಸ್ಥಳೀಯ

‘ಶೇಡ್ಸ್‌ ಆಫ್ ಥಿಯೇಟರ್’: ಅರವಿಂದ ಕುಡ್ಲ ಅವರ ರಂಗಭೂಮಿ ಛಾಯಾಚಿತ್ರಗಳ ಪ್ರದರ್ಶನ

ಸೆ. 26ರಿಂದ ಅ.7ರ ವರೆಗೆ ಪುತ್ತೂರಿನ ಪರ್ಪುಂಜದ ‘ಸೌಗಂಧಿಕಾ’ದಲ್ಲಿ

ಪುತ್ತೂರು: ಪ್ರಸಿದ್ಧ ಚಿತ್ರ ಕಲಾವಿದ, ರಂಗಭೂಮಿ ನಟ, ಸೃಜನಶೀಲ ಛಾಯಾಗ್ರಾಹಕ ಮತ್ತು ಶಿಕ್ಷಕರಾಗಿರುವ ಅರವಿಂದ ಕುಡ್ಲ ಅವರು ಸೆರೆ ಹಿಡಿದಿರುವ ರಂಗಭೂಮಿ ಚಿತ್ರಗಳ ಪ್ರದರ್ಶನ ಪರ್ಪುಂಜದಲ್ಲಿರುವ ‘ಸೌಗಂಧಿಕಾ’ದಲ್ಲಿ ಸೆಪ್ಟೆಂಬರ್ 26ರಿಂದ ಅಕ್ಟೋಬರ್ 7ರ ವರೆಗೆ ನಡೆಯಲಿದೆ.

ಪ್ರತಿದಿನ ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯ ವರೆಗೆ ಛಾಯಾ ಚಿತ್ರಗಳ ಪ್ರದರ್ಶನವಿರುತ್ತದೆ. ಶನಿವಾರ ಮಧ್ಯಾಹ್ನ ರಾಷ್ಟ್ರೀಯ ನಾಟಕ ಶಾಲೆಯ ಪದವೀಧರರಾದ ಪ್ರವೀಣಕುಮಾರ್ ಎಡಮಂಗಲ ಇವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಲಿದ್ದಾರೆ.

ಅರವಿಂದ ಕುಡ್ಲ ಪರಿಚಯ:
ಬಂಟ್ವಾಳ ತಾಲೂಕಿನ ಪುಣಚ ಗ್ರಾಮದ ಮೂಡಂಬೈಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ ಐದು ವರ್ಷಗಳಿಂದ ಪ್ರಭಾರ ಮುಖ್ಯ ಶಿಕ್ಷಕ. ಮೈಸೂರಿನಲ್ಲಿರುವ Regional instiute of education ಸಂಸ್ಥೆಯಿಂದ ಸ್ನಾತಕೋತ್ತರ ಪದವಿಯನ್ನು ಪಡೆದ ಇವರು ಕೆಲ ಕಾಲ ಮಂಗಳೂರಿನ ‘ಕೆನರಾ’ ದಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಸರಕಾರಿ ಶಿಕ್ಷಕರಾಗಿ ಆಯ್ಕೆಗೊಂಡು ನಾಲ್ಕು ವರ್ಷಗಳ ಕಾಲ ಮೂಡಿಗೆರೆ ತಾಲ್ಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ “ಸಂಸೆ ಯಲ್ಲಿ ಸೇವೆ ಸಲ್ಲಿಸಿದ ಇವರಿಗೆ ಈಗ ಮೂಡಂಬೈಲು ಸರಕಾರಿ ಪ್ರಾಥಮಿಕ ಶಾಲೆಯೇ ಕಾರ್ಯಕ್ಷೇತ್ರ. ಇವರೊಂದಿಗೆ ಇವರ ಪತ್ನಿ ಶ್ರುತಿಯವರು ಇಲ್ಲಿಯೇ ಶಿಕ್ಷಕಿಯಾಗಿದ್ದಾರೆ. ಇವರ ಮಗಳು ಶರಧಿಗೂ ಮೂಡಂಬೈಲು ಶಾಲೆಯೇ ಹಗಲಿನ ಮನೆ.

ಕೆನರಾ ಪ್ರೌಢಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾದ ಮೋಹನ ಕುಮಾರ ಪೆರ್ಮುದೆಯವರು ಬದುಕಿನ ಚಿತ್ರಗಳಿಗೆ ಬಣ್ಣ ಹಚ್ಚಿ ರೆಕ್ಕೆ ಕಟ್ಟಿದರು. ಚಿಂತನೆಗಳಿಗೆ ಶಿಕ್ಷಣದ ಆಶಯಗಳಿಗೆ ಹೊಸ ಆಲೋಚನೆಗಳಿಗೆ ಹಿರಿಯ ಕಲಾವಿದರಾದ ಸೃಜನಶೀಲ ಶಿಕ್ಷಕರಾದ ಸ್ವರೂಪದ ‘ಗೋಪಾಡ್ಕರ್ ಪ್ರೇರಣೆ ಎಂದು ಅರವಿಂದರು ನೆನಪಿಸಿಕೊಳ್ಳುತ್ತಾರೆ. ನನ್ನ ಅಮ್ಮ ಕೃಷ್ಣವೇಣಿ ಪ್ರಾಥಮಿಕ ಶಾಲಾ ಶಿಕ್ಷಕಿ ಮತ್ತು ಅಪ್ಪ ವಿಷ್ಣುಮೂರ್ತಿ ನನ್ನೆಲ್ಲ ಮೊದಲ ಗುರು ಮತ್ತು ಮೊದಲಿಗರು ಎನ್ನುತ್ತಾರೆ ಅರವಿಂದರು.

ಕೆನರಾ ಶಾಲೆಯಲ್ಲಿದ್ದಾಗ ಸುಂದರವಾದ ಚಿತ್ರವನ್ನು ರಚಿಸುತ್ತಿದ್ದ’ ಚಟುವಟಿಕೆಗಳಲ್ಲಿ ಕ್ರಿಯಾಶೀಲನಾಗಿದ್ದ, ವಿದ್ಯಾರ್ಥಿ ಅರವಿಂದ ಅಂತರರಾಷ್ಟ್ರೀಯ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿ, ಕೊರಿಯಾ ‘ದೇಶ ಕೂಡ ಕೊಡಮಾಡುವ ಪ್ರಥಮ ಪ್ರಶಸ್ತಿಯನ್ನು ಪಡೆದ ಹೆಮ್ಮೆಯ ವಿದ್ಯಾರ್ಥಿ’, ಎನ್ನುತ್ತಾರೆ ಕಲಾಶಿಕ್ಷಕರಾದ ಪೆರ್ಮುದೆಯವರು.

ಮೈಸೂರಿನ ರಂಗಾಯಣದ ಒಡನಾಟದಿಂದ ನನಗೆ ರಂಗಭೂಮಿಯ ಆಸಕ್ತಿ ಹೆಚ್ಚಾಯಿತು ಎನ್ನುವ ಅರವಿಂದರು ವೆನಿಸ್‌ನ ನ ವ್ಯಾಪಾರ, ಬಾಡಿಗೆ ಮನೆ, ಒಕ್ಕಲ ವನಪು, ಲಾ ಪಾಂಡು ಚರಿತೆ, ಉರುಳು’ ಆಪ್ತ ಸಲಹೆ ‘ಅನ್ವೇಷಕರು, ಮುಂತಾದ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಮಕ್ಕಳಿಗಾಗಿ ಬೇಂದ್ರೆಯವರ ಸಾಯೋ ಆಟ ‘ಮೂರ್ತಿ ದೇರಾಜೆಯವರ ‘ಮಂಗಗಳ ಉಪವಾಸ ‘ನಾಟಕಗಳನ್ನು ನಿರ್ದೇಶನ ಮಾಡಿರುತ್ತಾರೆ. ಉತ್ತಮ ಗಾಯಕರೂ ಆಗಿರುವ ಅರವಿಂದರು. ತೇಜಸ್ವಿ ಅವರ ಸಾಹಿತ್ಯಗಳ ಓದುವಿಕೆ’ ಸೈಕ್ಲಿಂಗ್, ಟ್ರೆಕ್ಕಿಂಗ್, ನನ್ನ ನೆಚ್ಚಿನ ಹವ್ಯಾಸಗಳು ಎನ್ನುತ್ತಾರೆ.

ಬಿಡುವಿನಲ್ಲಿ ಇವರು ಕುದುರೆಮುಖದತ್ತ ಚಾರಣ ಹೋಗುವುದುಂಟು. ಸಂಸೆಯಲ್ಲಿರುವ ಗೆಳೆಯ ಜಯಂತ ತೆಂಡೂಲ್ಕರ್ ರವರ ಒಡನಾಟದಿಂದಾಗಿ ನನ್ನ ಛಾಯಾಗ್ರಹಣದ ಆಸಕ್ತಿ ಮತ್ತಷ್ಟು ವೃದ್ಧಿಯಾಯಿತು ಎನ್ನುತ್ತಾರೆ ಅರವಿಂದರು. ಶೈಕ್ಷಣಿಕ ವಿಚಾರ ಮತ್ತು ಸಂಗತಿಗಳಲ್ಲಿ ಸದಾ ಹೊಸತೇನಾದರೂ ಪ್ರಯೋಗಗಳನ್ನು ಮಾಡುತ್ತಾ ಮಕ್ಕಳ ಮನಸ್ಸಿನೊಳಗೆ ಹುದುಗಿರುವ ಪ್ರತಿಭೆಯನ್ನು ಹೊರತೆಗೆದು ತಿದ್ದಿ ತೀಡಿ ರೂಪು ನೀಡಿ ಮುಂದೆ ಸಮಾಜಕ್ಕೆ ಅದರಿಂದ ಒಳಿತಾಗಲಿ ಎಂದು ಪ್ರಯೋಗಾತ್ಮಕವಾಗಿ ಶಿಕ್ಷಣವನ್ನು ನೋಡಬಲ್ಲ ಶಿಕ್ಷಕರು ಅಲ್ಲೊಬ್ಬರು ಇಲ್ಲೊಬ್ಬರು ಕಾಣ ಸಿಗುವುದು ನಮಗೆ. ಸದಾ ಅಧ್ಯಯನಶೀಲರಾದ ಅವರ ಪ್ರಯೋಗಗಳು ಹೊಸತೊಂದು ಭವಿಷ್ಯವನ್ನು ರೂಪಿಸುವಂತೆ ಇರುವುದು ವಿಶೇಷ. ಅಂಥ ಶಿಕ್ಷಕರ ಸಾಲಿನಲ್ಲಿ ಅರವಿಂದರು ಇರುತ್ತಾರೆ. ನಾಡಿನ ಹಲವೆಡೆ ನಡೆಯುತ್ತಿರುವ ರಂಗ ಚಟುವಟಿಕೆಗಳ ರಂಗಪ್ರಯೋಗಗಳ ಛಾಯಾಚಿತ್ರವನ್ನು ದಾಖಲಿಸುವುದು ಇವರ ಹವ್ಯಾಸ. ಇವರ ಸಂಗ್ರಹದಲ್ಲಿ ಕನ್ನಡ ರಂಗಭೂಮಿಯ ಅನೇಕ ಛಾಯಾ ಚಿತ್ರಗಳು ಈಗಾಗಲೇ ಸಂಗ್ರಹ ಗೊಂಡಿರುತ್ತದೆ. ರಂಗಭೂಮಿಯ ಬೆಳಕು ಸಂಗೀತ ದೃಶ್ಯ ಮತ್ತು ನಟನಾ ಕೌಶಲ್ಯದ ಸಂಯೋಜನೆಯೇ ‘ಆಹಾ’ ಎನ್ನುವ ಅದ್ಭುತ. ಈ ಸುಮಧುರ ಕ್ಷಣಗಳನ್ನು ತನ್ನ ಕೆಮರಾದಲ್ಲಿ ಸೆರೆ ಹಿಡಿದಿರುವ ಅರವಿಂದ ಕುಡ್ಲ ಅವರು “ಸೌಗಂಧಿಕಾ” ದಲ್ಲಿ 26.9 2020 ರಿಂದ 7.10.2020 ರ ವರೆಗೆ ಛಾಯಾಚಿತ್ರಗಳ ಪ್ರದರ್ಶನಕ್ಕೆ ಸಿದ್ಧರಾಗುತ್ತಿದ್ದಾರೆ.

“shades of theatre” ಎನ್ನುವ ಶೀರ್ಷಿಕೆಯೊಂದಿಗೆ 26.9.2020 ಅಪರಾಹ್ನ 3 ಗಂಟೆಗೆ ಸರಿಯಾಗಿ ಆರಂಭಗೊಳ್ಳಲಿರುವ ಈ ಛಾಯಾಚಿತ್ರ ಪ್ರದರ್ಶನಕ್ಕೆ ನಿಮ್ಮನ್ನು ನಾನು ಪ್ರೀತಿಯಿಂದ ಸ್ವಾಗತಿಸುತ್ತಿದ್ದೇನೆ. ದಯವಿಟ್ಟು ಎಲ್ಲರೂ ಕೋರೋನದ ನಿಯಮಗಳನ್ನು ಪಾಲಿಸಿಕೊಂಡು ಛಾಯಾಚಿತ್ರಗಳನ್ನು ವೀಕ್ಷಿಸಬಹುದು ಎಂದು ‘ಸೌಗಂಧಿಕಾ’ದ ಚಂದ್ರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾಹಿತಿಗಾಗಿ ಸಂಪರ್ಕ: ಚಂದ್ರ, ಸೌಗಂಧಿಕಾ- 9900409380 ಅಥವಾ ಅರವಿಂದ ಕುಡ್ಲ- 9844898124

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್ App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ಕುಂಬಳೆ ಶಾಲಾ ವಿದ್ಯಾರ್ಥಿಗಳಿಂದ ಮಳೆ ಸಂತ್ರಸ್ತರಿಗೆ ಪರಿಹಾರದ ಕಿಟ್ ವಿತರಣೆ

Upayuktha

ಮಸ್ತಕದಲ್ಲಿ ನೆನಪಿಟ್ಟುಕೊಂಡರೆ ಪುಸ್ತಕದಲ್ಲಿ ಬರೆಯಲು ಸಾಧ್ಯ: ಸಂತೋಷ್ ತಮ್ಮಯ್ಯ

Upayuktha

ಸೆ.2, 3ರಂದು ಸಂತ ಅಲೋಶಿಯಸ್ ಕಾಲೇಜಿನಲ್ಲಿ ವರ್ಚುವಲ್ ಅಂತರಾಷ್ಟ್ರೀಯ ವಿಚಾರ ಸಂಕಿರಣ

Upayuktha

Leave a Comment