ಕೊಪ್ಪಳ: ಕೊಪ್ಪಳ ಜಿಲ್ಲೆಯ ಜೇನು ಕೃಷಿ ಎಲ್ಲೆಡೆ ಪಸರಿಸುತ್ತಿರುವ ಸಮಯದಲ್ಲಿ ಜಿಲ್ಲೆಯ ಯುವತಿಯರು ಹಾಗೂ ಗೃಹಿಣಿಯರು ತಾವು ಯಾರಿಗೂ ಕಡಿಮೆ ಇಲ್ಲದಂತೆ ಜೇನು ಕೃಷಿಯಲ್ಲಿ ತೊಡಗಿಕೊಂಡಿರುವುದು ಸಂತೋಷದ ಸಂಗತಿ.
ಕೊಪ್ಪಳದ ಗವಿಸಿದ್ದೇಶ್ವರ ಮಠದ ಹಿಂದಿನ ಹಾಲವರ್ತಿ ರಸ್ತೆಯ ನಿವಾಸಿ ಶಾಹಿನ ಬೇಗಂ ಕಳೆದೊಂದು ವರ್ಷದಿಂದ ಜೇನು ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಜೇನು ಎಂದರೆ ಹೆದರಿ ದೂರ ಓಡುವ ಅನೇಕರಿಗೆ ಮಾದರಿಯಾಗಿ ಪಾಲಾಗಿರುವ ಜೇನು ಕುಟುಂಬವನ್ನು ಹಿಡಿದು ಪೆಟ್ಟಿಗೆಯಲ್ಲಿ ತುಂಬುವ ಚಾಕಚಕ್ಯತೆಯನ್ನು ಕೈಗೂಡಿಸಿ ಕೊಂಡಿದ್ದಾರೆ.
ಎಸ್ಎಸ್ಎಲ್ಸಿ ಪಾಸಾದ ನಂತರ ಸ್ವತಃ ಏನಾದರೂ ಚಟುವಟಿಕೆ ಮಾಡಬೇಕೆಂಬ ಹಂಬಲದಲ್ಲಿ ಕೈ ಹಾಕಿದ್ದು ಜೇನುಕೃಷಿಗೆ. ಇದೀಗ ಜೇನುಕೃಷಿಯು ಅವರ ಕೈ ಹಿಡಿದಿದ್ದು ಗ್ರಾಮೀಣ ಯುವತಿಯರಿಗೆ ಉದ್ಯೋಗ ಕಲ್ಪಿಸಿಕೊಳ್ಳುವ ದಾರಿದೀಪವಾಗಿದ್ದಾರೆ. ಇವರ ಮಾದರಿ ಗ್ರಾಮೀಣ ಯುವತಿಯರಿಗೆ ಹಾಗೂ ಗೃಹಿಣಿಯರಿಗೆ ಬೆಳಕಾಗಲೆಂದು ಹಾರೈಸುತ್ತೇವೆ.
– ಡಾ. ಪಿ. ಆರ್ ಬದರಿಪ್ರಸಾದ್ (9900145705)
(ಉಪಯುಕ್ತ ನ್ಯೂಸ್)
‘ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ