ಕತೆ-ಕವನಗಳು

*ಶೈಲಪುತ್ರಿ*

 

ಪರ್ವತರಾಜ ಹಿಮವಂತ ಸುತೆ ವೃಷರುಧ, ಪ್ರಥಮ


ದೇವಿ ಶ್ರೀ ಶೈಲಪುತ್ರಿ..

ಹಿಂದಿನ ಜನ್ಮದೊಳು ಪ್ರಜಾಪತಿ ದಕ್ಷನ ಮಗಳಾಗಿಹಳು, ದಾಕ್ಷಾಯಿಣಿ ಎಂದೇ ಕರೆಯಲ್ಪಟ್ಟು ಶಿವನ ಸತಿಯಾಗಿಹಳು..

ತಂದೆಗಿಚ್ಛೆಯಿಲ್ಲದೆ ಶಿವನ ವರಿಸಿ ದೂರಲ್ಪಟ್ಟವಳು, ತಂದೆ ನಡೆಸಿದ ಯಜ್ಞಕ್ಕೆ ತೆರಳಿ ಶಿವನಪಮಾನವ ಸಹಿಸದೆ ಅಗ್ನಿಗರ್ಪಿಸಿಕೊಂಡವಳು..

ಪರಶಿವನ ಪ್ರೇಮಮೂರ್ತಿ ಮಗದೊಮ್ಮೆ ಹುಟ್ಟಿಬಂದಳು, ಆದಿಶಕ್ತಿ ರೂಪಿಣಿಯಾಗಿ ಶಿರದಲ್ಲಿ ಚಂದ್ರನ ಹೊತ್ತವಳಾಗಿ..

ತಮೋಗುಣದ ರೂಪವಾಗಿ ತ್ರಿಶೂಲವ ಕೈಯಲ್ಲಿ ಹಿಡಿದು, ಶ್ವೇತವಸ್ತ್ರಧಾರಿಯಾಗಿ ಮಲ್ಲಿಗೆಯ ಮುಡಿದವಳು..

ಶಾಂತಿಯ ಪ್ರತಿರೂಪದವಳು, ಪ್ರಕೃತಿಯಂತೆ ಸಕಲರಿಗೂ ಸರ್ವವ ನೀಡುವವಳು..

✍ *ನಾಗಶ್ರೀ ಎಸ್ ಭಂಡಾರಿ* *ಮೂಡುಬಿದಿರೆ*

Photo credit: *ಮಾನಸ ಫೋಟೋಗ್ರಫಿ*

Related posts

ಆಶು ಕವನ: ಯೋಗ-ಭೋಗ

Upayuktha

ಚೌತಿಯ ಸಡಗರ (ಮಕ್ಕಳ ಕವನ)

Upayuktha

ಕವನ: ಅರ್ಘ್ಯವನು ಸ್ವೀಕರಿಸಿ ಹರಸು ಶ್ರೀಕೃಷ್ಣ

Upayuktha

Leave a Comment