ಕಲೆ ಸಂಸ್ಕೃತಿ ಗ್ರಾಮಾಂತರ ಸ್ಥಳೀಯ

ಕಾರ್ಕಳದಲ್ಲಿ ಕಳೆಗಟ್ಟಿದ ‘ಶಂಕರಾಭರಣ’- ಇದು ಶಂಕರನಾಗ್ ಸ್ಮರಣೆ

ಕಾರ್ಕಳ: ಕನ್ನಡದ ಖ್ಯಾತ ಸಿನೆಮಾ ನಟ, ನಿರ್ದೇಶಕ ಮತ್ತು ನಿರ್ಮಾಪಕ ಶಂಕರನಾಗ್ ಅವರನ್ನು ಸ್ಮರಿಸುವ ಮತ್ತು ಶ್ರದ್ಧಾಂಜಲಿ ಅರ್ಪಿಸುವ “ಶಂಕರಾಭರಣ- ಇದು ಶಂಕರನಾಗ್ ಸ್ಮರಣೆ” ಎಂಬ ಶೀರ್ಷಿಕೆಯ ಕಾರ್ಯಕ್ರಮವು ನವಂಬರ್ 28ರಂದು ಕಾರ್ಕಳದ ಭುವನೇಂದ್ರ ಪ್ರೌಢಶಾಲೆಯ ಶಾಂತಾರಾಮ ಕಾಮತ್ ಸಭಾಂಗಣದಲ್ಲಿ ನೆರವೇರಿತು.

ಭುವನೇಂದ್ರ ವಿದ್ಯಾಸಂಸ್ಥೆಗಳ ಸಂಚಾಲಕ ಎಸ್. ನಿತ್ಯಾನಂದ ಪೈ ಅವರು ದೀಪ ಬೆಳಗಿಸಿ ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಅವರು ಮಾತನಾಡಿ ‘ಶಂಕರನಾಗ್ ಕ್ರಿಯಾಶೀಲತೆ ಮತ್ತು ವೇಗ ಅಸಾಧಾರಣ. ಅವರು ಕನ್ನಡದ ಸಿನೆಮಾ ರಂಗವನ್ನು ಅತ್ಯಂತ ಶ್ರೀಮಂತವಾಗಿ ಮಾಡಿದರು. ಅವರು ಮಾಡಿದ ವಿನೂತನ ಪ್ರಯೋಗಗಳು ಅನನ್ಯ ಮತ್ತು ಅನುಪಮ. ಅವರೊಬ್ಬ ಅದ್ಭುತ ನಾಟಕಕಾರ. ಕನ್ನಡ ಚಿತ್ರರಂಗ ಮತ್ತು ನಾಟಕರಂಗ ಅವರನ್ನು ಎಂದಿಗೂ ಮರೆಯಲು ಸಾಧ್ಯವೆ ಇಲ್ಲ’ ಎಂದರು.

ಶಂಕರನಾಗ್ ಬದುಕಿನ ಒಂದೊಂದು ಪುಟವನ್ನು ಕೂಡ ಹೃದಯಂಗಮವಾಗಿ ಮತ್ತು ವಿಸ್ತಾರವಾಗಿ ಬಿಚ್ಚಿಟ್ಟ ಕಾರ್ಕಳದ ಕ್ಷೇತ್ರ ಶಿಕ್ಷಣಾಧಿಕಾರಿ ಜಿ ಎಸ್ ಶಶಿಧರ ಅವರು ‘ಶಂಕರನಾಗ್ ಕೇವಲ ಸಿನೆಮಾ ನಟ ಆದರೆ ನಾವು ಅವರನ್ನು ಈ ರೀತಿ ನೆನಪಿಸುವ ಅಗತ್ಯ ಇರಲಿಲ್ಲ. ಅವರು ಒಬ್ಬ ದಾರ್ಶನಿಕ. ಕನ್ನಡದ ದೊಡ್ಡ ದೊಡ್ಡ ಕನಸು ಕಂಡವರು. ಬೆಂಗಳೂರಿನ ಮೆಟ್ರೋ, ಕಂಟ್ರಿ ಕ್ಲಬ್, ನಂದಿ ಬೆಟ್ಟ ರೋಪ್ ವೆ, ಸಂಕೇತ್ ಸ್ಟುಡಿಯೋ ಮೊದಲಾದ ಹತ್ತಾರು ಕನಸುಗಳನ್ನು ಕಂಡದ್ದು ಮಾತ್ರವಲ್ಲ ಅದನ್ನು ಸಾಕ್ಷಾತ್ಕಾರ ಮಾಡಲು ಪ್ರಯತ್ನ ಪಟ್ಟವರು. ಅವರ ಮತ್ತು ಅವರ ಅಣ್ಣ ಅನಂತನಾಗ್ ಅವರ ಸಂಬಂಧಗಳು ಕೂಡ ನಮಗೆ ಮಾದರಿ. ಅವರ ಮಾನವೀಯ ಮುಖಗಳು ಕೂಡ ಅಸದೃಶ. ತನ್ನ ಸಹನಟರ ಬಗ್ಗೆ ಅವರಿಗೆ ಇದ್ದ ಅತೀವವಾದ ಪ್ರೀತಿ ವರ್ಣನಾತೀತ. ಶಂಕರನಾಗ್ ಕನ್ನಡದ ಒಬ್ಬ ಸಾವಿರದ ಲೆಜೆಂಡ್’ ಎಂದು ನುಡಿದರು.

ಕನ್ನಡ ಸಾಹಿತ್ಯ ಪರಿಷತ್ತು ಕಾರ್ಕಳ ಮತ್ತು ಹೆಬ್ರಿಯ ಘಟಕಗಳು ಮತ್ತು ಕಾರ್ಕಳದ ಶಂಕರನ ಬಳಗ ಇವರು ಸಂಯುಕ್ತವಾಗಿ ಏರ್ಪಡಿಸಿದ್ದ ಈ ಸಂಸ್ಕರಣೆ ಕಾರ್ಯಕ್ರಮದಲ್ಲಿ ರಾಜ್ಯ ಪ್ರಶಸ್ತಿ ವಿಜೇತರಾದ ರಾಜಾಪುರ ಸಾರಸ್ವತ ಸೊಸೈಟಿಯ ಅಧ್ಯಕ್ಷರಾದ ಕಡಾರಿ ರವೀಂದ್ರ ಪ್ರಭು ಮತ್ತು ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ನಿತ್ಯಾನಂದ ಪೈ ಅವರನ್ನು ಸನ್ಮಾನಿಸಲಾಯಿತು.

ಶಿಕ್ಷಕ ಯೋಗೀಶ್ ಕಿಣಿ ಅವರು ಆಶಯದ ಗೀತೆ ಹಾಡಿದರು. ತಾಲೂಕು ಕ.ಸಾ.ಪ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ ಶೆಟ್ಟಿ ಅತಿಥಿಗಳನ್ನು ಸ್ವಾಗತ ಮಾಡಿದರು. ಹೆಬ್ರಿ ಕ. ಸಾ. ಪ. ಅಧ್ಯಕ್ಷ ಪಿ.ವಿ.ಆನಂದ ಮತ್ತು ಕಾರ್ಕಳ ತಾಲೂಕು ಸಹ ಶಿಕ್ಷಕರ ಸಂಘದ ಅಧ್ಯಕ್ಷ ನಾರಾಯಣ ಶೆಣೈ ಅವರು ಶುಭಾಶಂಸನೆ ಮಾಡಿದರು. ಕಾರ್ಯಕ್ರಮದಲ್ಲಿ ಶಂಕರನಾಗ್ ಅವರ ಸಿನೆಮಾಗಳ ದೃಶ್ಯಗಳ ದೃಶ್ಯವೈಭವ ಮತ್ತು ಕಲಾ ಪ್ರದರ್ಶನಗಳನ್ನು ಏರ್ಪಡಿಸಲಾಗಿತ್ತು.

ಮಂಗಳೂರಿನ ಖ್ಯಾತ ಮನಶ್ಶಾಸ್ತ್ರಜ್ಞ ಡಾಕ್ಟರ್ ಜಯಪ್ರಕಾಶ್ ಅವರು ಶಂಕರನಾಗ್ ಸ್ಪೂರ್ತಿಯಿಂದ ತಾನು ನಿರ್ಮಿಸಿದ್ದ ಕಿರುಚಿತ್ರ ಮತ್ತು ಸಿನೆಮಾಗಳ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸ್ಯಾಕ್ಸೋಫೋನ್ ಕಲಾವಿದ ಪ್ರಕಾಶ್ ದೇವಾಡಿಗ ಮತ್ತು ಸಂಗೀತ ನಿರ್ದೇಶಕ ರಾಜೇಶ್ ದೇವಾಡಿಗ ಅವರನ್ನು ಶಾಲು ಹೊದಿಸಿ ಗೌರವಿಸಲಾಯಿತು. ಭುವನೇಂದ್ರ ವಿದ್ಯಾಸಂಸ್ಥೆಯ ಮುಖ್ಯ ಶಿಕ್ಷಕಿಯರಾದ ವೃಂದಾ ಶೆಣೈ ಮತ್ತು ವಿದ್ಯಾ ಕಿಣಿ ಮತ್ತು ಹೆಬ್ರಿ ಸರಕಾರಿ ನೌಕರರ ಸಂಘದ ಅಧ್ಯಕ್ಷ ಹರೀಶ್ ಪೂಜಾರಿ ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ನಂತರ ಪ್ರಸಿದ್ಧ ಸಂಗೀತ ಕಲಾವಿದರಿಂದ ಶಂಕರನಾಗ್ ಸಿನೆಮಾಗಳ ಪ್ರಸಿದ್ದ ಹಾಡುಗಳ ರಸಮಂಜರಿ ಕಾರ್ಯಕ್ರಮವು ನಡೆಯಿತು. ಕನ್ನಡ ಶಿಕ್ಷಕ ಗಣೇಶ್ ಜಾಲ್ಸೂರು ಧನ್ಯವಾದ ಅರ್ಪಿಸಿದರು. ಶಿಕ್ಷಕ ರಾಜೇಂದ್ರ ಭಟ್ ಕೆ ಅವರು ಈ ಮಹೋನ್ನತವಾದ ಕಾರ್ಯಕ್ರಮದ ನಿರ್ವಹಣೆ ಮಾಡಿದರು. ಕರಾವಳಿ ಕರ್ನಾಟಕದಲ್ಲಿ ಮೊದಲ ಬಾರಿಗೆ ನಡೆದ ಶಂಕರನಾಗ್ ಸಂಸ್ಮರಣಾ ಕಾರ್ಯಕ್ರಮವು ತನ್ನ ಸಾಂಸ್ಕೃತಿಕ ವೈಭವದಿಂದ ಜನಮನ್ನಣೆ ಗಳಿಸಿತು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಬಿಜೆಪಿ ಯುವಮೋರ್ಚಾ ಕಾಸರಗೋಡು ವತಿಯಿಂದ ಸಾವಿರ ಗಿಡ ನೆಡುವ ಅಭಿಯಾನ

Upayuktha

ಕೊಡಗು: ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿ ನಾಪತ್ತೆ

Upayuktha

ಚೊಕ್ಕಾಡಿ 80: ಕವಿ ಸುಬ್ರಾಯ ಚೊಕ್ಕಾಡಿ ಬದುಕು ಬರಹ- ಅವಲೋಕನ ಇಂದು ಸಂಜೆ 5ಕ್ಕೆ

Upayuktha