ಕತೆ-ಕವನಗಳು

*ಶಾಂತಿ*

ದಿಕ್ಕು ದಿಕ್ಕಿನಲ್ಲಿ ಹಬ್ಬಿದ ಬೆಂಕಿ ಆರಲಿ


ದಿಕ್ಕು ದಿಕ್ಕಿಗೂ ಕನ್ನಡದ ಕೀರುತಿ ಹರಡಲಿ
ಹೃದಯ ಹೃದಯದಲ್ಲೂ ಸ್ನೇಹ ಭಾವ ಮೂಡಲಿ
ಮನುಜನ ನಡುವಿನ ಜಾತಿ ಗೋಡೆ ಉರುಳಲಿ

ಸಂಗೀತ ಸಾಹಿತ್ಯ ಸಂಸ್ಕೃತಿ ಕನ್ನಡಕೆ ಒಲಿದಿರೆ
ತ್ಯಾಗ ಪ್ರೀತಿ ಶೌರ್ಯವು ಈ ನೆಲದಲಿ ತುಂಬಿರೆ
ಹೊಸ ಕಾಂತಿ ಚೆಲ್ಲಿ ಬರಲಿ ಮಾನವತೆಯ ದೀಪ
ಸರ್ವ ಜನರ ಶಾಂತಿ ತೋಟ ನಮ್ಮದಾಗಲಿ

ಹಿಂದೂ ಕ್ರೈಸ್ತ ಮುಸಲ್ಮಾನ ಎನ್ನುವ ಹೆಸರಿನಲ್ಲಿ
ನಮ್ಮ ಧರ್ಮ ವಿಶ್ವ ಕರ್ಮ ಎನ್ನುವ ಸೋಗಿನಲ್ಲಿ
ಚೆಲುವಿನ ಸಿರಿ ನಿಧಿ ಕನ್ನಡದಲ್ಲಿ ಅಡಗಿರೆ
ಭುವನೇಶ್ವರಿಯ ಕೊರಳ ಮಾಲೆಯಾಗಿದೆ

ಹೃದಯದಲಿ ಹುದುಗಿಹ ಕಡುಬೇಧದ ಕತ್ತಲೆಗೆ
ಮನ ಮನಗಳ ಒಡೆದಿರುವ ವೈರತ್ವದ ಭ್ರಾಂತಿಗೆ
ಒಂದೇ ಮಾತರಂ ಸತ್ಯ ಅರ್ಥವಾಗಲಿ
ಬೇಧ ಭಾವ ಎಲ್ಲ ಮರೆತು ಕೂಡಿ ಬಾಳಲಿ

ಡಾ.ಅನಪು (ಅರವಿಂದ್ ಎನ್ ಪಿ)

Related posts

ಕವನ: ಅವಲೋಕನ

Upayuktha

ತುಳು ಕಬಿತೆ: ಬೆನ್ನಿಗ್ ಬರಡ್

Upayuktha

ಕಾಲ್ಪನಿಕ ಪ್ರೀತಿ💘❤

Harshitha Harish

Leave a Comment