ರಾಜ್ಯ ಸಿನಿಮಾ-ಮನರಂಜನೆ

“ಕಸ್ತೂರಿ ಮಹಲ್” ಸಿನಿಮಾ ಎಂಟ್ರಿ ಕೊಟ್ಟ ನಟಿ ಶಾನ್ವಿ ಶ್ರೀವಾಸ್ತವ

ಬೆಂಗಳೂರು: ಇದೀಗ ದಿನೇಶ್‌ ಬಾಬು ರವರ ನಿರ್ದೇಶನದ ಐವತ್ತನೇ ಚಿತ್ರವಾದ ‘ಕಸ್ತೂರಿ ಮಹಲ್’

ಸಿನಿಮಾದಿಂದ ‘ಡಿಂಪಲ್‌ ಕ್ವೀನ್’ ರಚಿತಾ ರಾಮ್ ರವರುಬ ಹೊರ ನಡೆದಿದ್ದಾರೆ.

ಸಮಯದ ಹೊಂದಾಣಿಕೆಯ ಸಮಸ್ಯೆಯಿಂದ ಗುಳಿಕೆನ್ನೆ ಬೆಡಗಿ ರಚಿತಾ ರಾಮ್  ಚಿತ್ರದಿಂದ ಹೊರ ನಡೆದಿದ್ದು, ಈಗ ಅವರ ಪಾತ್ರದಲ್ಲಿ ಶಾನ್ವಿ ಶ್ರೀವಾಸ್ತವ ನಟನೆ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.

ಈಗಾಗಲೇ ಈ ಚಿತ್ರಕ್ಕೆ ‘ಕಸ್ತೂರಿ ನಿವಾಸ’ ಎಂಬ ಟೈಟಲ್‌ ಇಡಲಾಗಿತ್ತು. ಇದಕ್ಕೆ ವರನಟ ರಾಜ್‌ಕುಮಾರ್‌ ಅಭಿಮಾನಿಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.

‌ಜನಮಾನಸದಲ್ಲಿ ಇಂದಿಗೂ ಅಚ್ಚಳಿಯದೆ ಉಳಿದಿರುವ ಚಿತ್ರದ ಶೀರ್ಷಿಕೆಯನ್ನು ಮರುಬಳಕೆ ಮಾಡಬಾರದು ಎಂದು ಒತ್ತಾಯಿಸಿದ್ದರು. ಹಾಗಾಗಿ, ಚಿತ್ರತಂಡ ‘ಕಸ್ತೂರಿ ಮಹಲ್‌’ ಎಂದು ಟೈಟಲ್‌ ಬದಲಾವಣೆ ಮಾಡಲಾಯಿತು.

Related posts

80 ವರ್ಷದ ಬಡ ಮಹಿಳೆಯ ಸೇವೆ: ಭಿಕ್ಷೆ ಬೇಡಿ ಉಳಿಸಿದ 1 ಲಕ್ಷ ರೂ ಸಾಲಿಗ್ರಾಮದ ದೇಗುಲಕ್ಕೆ ದಾನ

Harshitha Harish

ಕಾಲೇಜು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ

Harshitha Harish

ಮಾಜಿ ಸಚಿವ ಎಸ್.ಎ.ರಾಮದಾಸ್ ಆರೋಗ್ಯ ಸಮಸ್ಯೆ ; ಆಸ್ಪತ್ರೆ ದಾಖಲು

Harshitha Harish