ನಗರ ಸ್ಥಳೀಯ

ಶರವು ದೇವಸ್ಥಾನ ಜಾತ್ರೆ: ಬದಿಯಡ್ಕ ರಂಗಸಿರಿ ಬಳಗದಿಂದ ಯಕ್ಷಗಾನ ಪ್ರದರ್ಶನ

ಮಂಗಳೂರು: ಶರವು ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ವಾರ್ಷಿಕ ಜಾತ್ರೆಯ ಅಂಗವಾಗಿ ಬದಿಯಡ್ಕದ ರಂಗಸಿರಿ ಸಾಂಸ್ಕೃತಿಕ ವೇದಿಕೆಯ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನ ನಡೆಯಿತು. ಸವ್ಯಸಾಚಿ ಯಕ್ಷಗಾನ ಗುರು ಸೂರ್ಯ ನಾರಾಯಣ ಪದಕಣ್ಣಾಯ ಬಾಯಾರು ನಿರ್ದೇಶನದಲ್ಲಿ ಸುದರ್ಶನ ವಿಜಯ ಪ್ರಸಂಗವು ಮನೋಜ್ಞವಾಗಿ ಮೂಡಿಬಂತು.

ದೇವೇಂದ್ರನಾಗಿ ಹರ್ಷಪ್ರಸಾದ ಪುತ್ತಿಗೆ, ದೇವೇಂದ್ರನ ಬಲಗಳಾಗಿ ಮನ್ವಿತ್ ನಾರಾಯಣಮಂಗಲ ಹಾಗೂ ವರ್ಷಾ ಲಕ್ಷ್ಮಣ್, ಶತ್ರುಪ್ರಸೂದನ ಪಾತ್ರದಲ್ಲಿ ಶ್ರೀಶ ಕುಮಾರ ಪಂಜಿತ್ತಡ್ಕ, ವಿಷ್ಣುವಾಗಿ ಧನೀಷ್ ಕುಂಡಂಕುಳಿ, ಲಕ್ಷ್ಮಿಯ ಪಾತ್ರದಲ್ಲಿ ಸುಪ್ರೀತಾ ಸುಧೀರ್, ಸುದರ್ಶನನಾಗಿ ವಿದ್ಯಾ ಆನಂದ ಭಟ್ ಪಾತ್ರಗಳಿಗೆ ಜೀವತುಂಬಿದರು.

ಭಾಗವತರಾಗಿ ವಾಸುದೇವ ಕಲ್ಲೂರಾಯ, ಚೆಂಡೆಯಲ್ಲಿ ಅಂಬೆಮೂಲೆ ಶಿವಶಂಕರ ಭಟ್, ಮದ್ದಳೆಯಲ್ಲಿ ಸೂರ್ಯನಾರಾಯಣ ಪದಕಣ್ಣಾಯ, ಚಕ್ರತಾಳದಲ್ಲಿ ಸುಧೀರ್ ಕುಮಾರ್ ರೈ ಹಾಗೂ ನಿಶಾಂತ್ ನೀರ್ಚಾಲು ಕುಶಲತೆ ಮೆರೆದರು. ನೇಪಥ್ಯದಲ್ಲಿ ಕೇಶವ ಕಿನ್ಯ ಹಾಗೂ ಗಿರೀಶ್ ಕುಂಪಲ ಸಹಕರಿಸಿದರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Related posts

ರೇಡಿಯೋ ಪಾಂಚಜನ್ಯ ಸಮುದಾಯ ಬಾನುಲಿ ವತಿಯಿಂದ ಅಧ್ಯಯನ ಪ್ರವಾಸ

Upayuktha

ವೈರಲ್‌ ವೀಡಿಯೋ: ಕಾಲಿನ ವೈಕಲ್ಯತೆ ಮರೆತು ಗೆಜ್ಜೆ ಕಟ್ಟಿ ಕುಣಿದ ಎಂಡೋಸಲ್ಫಾನ್ ಬಾಧಿತ ಬಾಲೆ

Upayuktha

ಜ.31ಕ್ಕೆ ಕನ್ನಡ ಪ್ರಾಧ್ಯಾಪಕ ಕ್ಯಾಪ್ಟನ್ ಡಿ ಮಹೇಶ್ ರೈ ನಿವೃತ್ತಿ

Upayuktha