ಕ್ಯಾಂಪಸ್ ಸುದ್ದಿ ನಗರ ಸ್ಥಳೀಯ

ಸಂತ ಫಿಲೋಮಿನಾ ಕಾಲೇಜಿನಲ್ಲಿ ‘ಶಿಬಿರದಾಟಗಳು’ ಹೊತ್ತಿಗೆಯ ಲೋಕಾರ್ಪಣೆ

ಪುತ್ತೂರು: ಬರವಣಿಗೆಯೆನ್ನುವುದು ಹೃದಯಾಂತರಾಳದಲ್ಲಿ ಅಡಗಿರುವ ಭಾವನೆಗಳನ್ನು ಅಭಿವ್ಯಕ್ತಗೊಳಿಸಬಲ್ಲ ಒಂದು ಮೌಲ್ಯಯುತ ಪ್ರಕ್ರಿಯೆ. ವಸ್ತು ವಿಷಯ, ಭಾಷೆ ಮತ್ತು ಸಾಹಿತ್ಯವನ್ನು ಸಮರ್ಪಕವಾಗಿ ಬಳಸಿಕೊಂಡಾಗ ಪ್ರಬುದ್ಧ ಲೇಖನವು ಸೃಷ್ಠಿಗೊಳ್ಳುತ್ತದೆ ಎಂದು ಸಂತ ಫಿಲೋಮಿನಾ ಕಾಲೇಜಿನ ಪ್ರಾಚಾರ್ಯ ಪ್ರೊ. ಲಿಯೋ ನೊರೊನ್ಹಾ ಹೇಳಿದರು.

ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮುಖ್ಯಸ್ಥ ಹಾಗೂ ಕ್ಯಾಂಪಸ್ ನಿರ್ದೇಶಕ ವಂ. ಡಾ. ಆ್ಯಂಟನಿ ಪ್ರಕಾಶ್ ಮೊಂತೆರೊ ಇವರು ರಚಿಸಿರುವ ‘ಶಿಬಿರದಾಟಗಳು’ ಎಂಬ ಹೊತ್ತಿಗೆಯನ್ನು ಅವರು ಸ್ನಾತಕೋತ್ತರ ಸಭಾಂಗಣದಲ್ಲಿ ಜೂನ್ 29 ರಂದು ಲೋಕಾರ್ಪಣೆಗೊಳಿಸಿ, ಮಾತನಾಡಿದರು. ಪುಸ್ತಕ ರಚನೆಯೆಂದರೆ ವಿವಿಧ ಮೂಲಗಳಿಂದ ಕೇವಲ ಮಾಹಿತಿ ಸಂಗ್ರಹ ಮಾಡುವ ಒಂದು ಪ್ರಕ್ರಿಯೆಯಾಗಿರುವುದಿಲ್ಲ. ಅದು ಲೇಖಕನ ಸೃಜನಶೀಲತೆಯನ್ನು ಹೊರಸೂಸುವ ಮಹತ್ತರ ಕಾಯಕವನ್ನು ಕೈಗೊಳ್ಳುತ್ತದೆ. ಈ ‘ಶಿಬಿರದಾಟಗಳು’ ಅನ್ನುವ ಪುಸ್ತಕವನ್ನು ಸಮಾಜಕ್ಕೆ ಅರ್ಪಣೆ ಮಾಡುವ ಮೂಲಕ ಲೇಖಕ ಡಾ. ಆ್ಯಂಟನಿ ಪ್ರಕಾಶ್ ಮೊಂತೆರೊ ಸಾಹಿತ್ಯ ಮತ್ತು ಸಾಂಸ್ಕøತಿಕ ಚಟುವಟಿಕೆಗಳಲ್ಲಿ ತನಗಿರುವ ಜ್ಞಾನ ಮತ್ತು ಆಸಕ್ತಿಯನ್ನು ಹೊರಸೂಸಿದ್ದಾರೆ. ಈ ಪುಸ್ತಕವು ನಮ್ಮೆಲ್ಲರ ಯಾಂತ್ರಿಕ ಬದುಕಿಗೆ ಒಂದು ಸವಾಲಾಗುವುದಲ್ಲದೆ ಸಮಾಜದ ಎಲ್ಲ ವರ್ಗದವರಿಗೂ ಪ್ರಯೋಜನವನ್ನು ನೀಡಲಿದೆ. ಇದು ಜೀವನ ಪರ ಮೌಲ್ಯಗಳನ್ನು ಯುವಜನತೆಗೆ ಸಾರುವ ಪರಿಣಾಮಕಾರಿ ಮಾಧ್ಯಮವಾಗಲಿ ಪರಿಣಮಿಸಲಿ ಎಂದು ಶುಭ ಹಾರೈಸಿದರು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕಾಲೇಜಿನ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಎ ಪಿ ರಾಧಾಕೃಷ್ಣ ಮಾತನಾಡಿ, ಪುಸ್ತಕಗಳು ನಮಗೆ ಹೊಸ ಅರಿವನ್ನು ನೀಡುತ್ತವೆ. ಬಿಡುವಿನ ಸಮಯದಲ್ಲಿ ಸಕಾರಾತ್ಮಕ ಚಿಂತನೆಗಳನ್ನು ಬರವಣೆಗೆಯ ರೂಪಕ್ಕಿಳಿಸಿದಾಗ ಪುಸ್ತಕಗಳಾಗಿ ಮೂಡಿ ಬರಲು ಸಾಧ್ಯ. ಪ್ರಸ್ತುತ ಕೊರೋನಾದಂತಹ ಸಾಂಕ್ರಾಮಿಕ ರೋಗವು ವಿಶ್ವದೆಲ್ಲೆಡೆ ತಲ್ಲಣವನ್ನು ಉಂಟು ಮಾಡಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಬರವಣಿಗೆಯಂತಹ ಹವ್ಯಾಸವು ಮಾನವನ ಬದುಕನ್ನು ಸಾರ್ಥಕಗೊಳಿಸಬಲ್ಲುದು ಎಂಬುದಕ್ಕೆ ವಂ. ಡಾ. ಆ್ಯಂಟನಿ ಪ್ರಕಾಶ್ ಮೊಂತೆರೊ ಅವರು ಒಂದು ಉತ್ತಮ ಉದಾಹರಣೆಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಲೇಖಕ ಡಾ. ಆ್ಯಂಟನಿ ಪ್ರಕಾಶ್ ಮೊಂತೆರೊ ಮಾತನಾಡಿ, ಜೀವನವೆನ್ನುವುದು ನಾವೇ ಬರೆದಿರುವ ಒಂದು ಪುಸ್ತಕದಂತಿರುತ್ತದೆ. ನಮ್ಮ ಜೀವನದ ಪ್ರತಿಯೊಂದು ದಿನವೂ ಪುಸ್ತಕದ ಪುಟಗಳಂತಿರುತ್ತವೆ. ಪ್ರತಿಯೊಂದು ಪುಟದ ಗುಣಮಟ್ಟವು ಪುಸ್ತಕದ ಒಟ್ಟು ಗುಣಮಟ್ಟವನ್ನು ನಿರ್ಧರಿಸುತ್ತದೆ. ಹಾಗೆಯೇ ನಾವು ಜೀವನದ ಪ್ರತಿಯೊಂದು ದಿನವನ್ನು ಹೇಗೆ ಬಳಸಿಕೊಳ್ಳುತ್ತೇವೆಯೋ ಅದರ ಮೇಲೆ ನಮ್ಮ ಜೀವನವೆಂಬ ಪುಸ್ತಕದ ಮೌಲ್ಯವು ಅಡಗಿರುತ್ತದೆ. ಲಾಕ್ ಡೌನ್‍ನಂತಹ ಬಿಡುವಿನ ಸಂದರ್ಭವನ್ನು ವ್ಯರ್ಥಗೊಳಿಸದೆ ಬರವಣಿಗೆಯಂತಹ ಈ ಕಾಯಕದಲ್ಲಿ ತೊಡಗಿಸಿಕೊಂಡಿದ್ದೇನೆ. ‘ಶಿಬಿರದಾಟಗಳು’ ಎಂಬ ಶಿರೋನಾಮೆಯ ಈ ಪುಸ್ತಕವು ವಿವಿಧ ಶಿಬಿರಗಳಲ್ಲಿ ಪಾಲ್ಗೊಳ್ಳುವವರ ದೈಹಿಕ ಕಸರತ್ತು, ಮಾನಸಿಕ ಚಿಂತನೆ ಹಾಗೂ ಮನರಂಜನೆಯನ್ನು ಗಮನದಲ್ಲಿಟ್ಟುಕೊಂಡು ರಚಿಸಲಾಗಿದೆ. ಇದರಲ್ಲಿ ಸಂಖ್ಯೆಯಾಟಗಳು, ಮೊಬಾೈಲಿನಾಟಗಳು, ಚೆಂಡಿನಾಟಗಳು, ಸ್ಟ್ರಾ ಕೊನ್ಫೆಟ್ಟಿಯಾಟಗಳು, ವೃತ್ತದೊಳಗಿನ ಆಟಗಳು, ಪ್ರಶ್ನೋತ್ತರ ಆಟಗಳು, ಓಡುವಾಟಗಳು, ಬಲೂನಿನಾಟಗಳು, ನೀರಿನಾಟಗಳು, ನಟಿಸುವ ಆಟಗಳು, ಮನಸ್ಸಿನಾಟಗಳು, ಕೈಯಾಟಗಳು, ಕಾಲಿನಾಟಗಳು, ಬಾಯಿಯಾಟಗಳು, ಕಣ್ಣು ಮುಚ್ಚುವಾಟಗಳು, ಹಿರಿಯರಾಟಗಳು ಮತ್ತು ಇತರ ಆಟಗಳು ಎನ್ನುವ ಹದಿನೇಳು ಅಧ್ಯಾಯಗಳನ್ನೊಳಗೊಂಡಿದೆ. ಈ ಹೊತ್ತಿಗೆಯ ರಚನೆಯಲ್ಲಿ ಪ್ರೋತ್ಸಾಹ ಮತ್ತು ಸಹಕಾರ ನೀಡಿದ ಎಲ್ಲರನ್ನೂ ಹೃದಯಾಳದಿಂದ ಸ್ಮರಿಸುತ್ತೇನೆ ಎಂದರು.

ವೇದಿಕೆಯಲ್ಲಿ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ವಿಭಾಗದ ಸಂಯೋಜಕ ವಂ. ರಿತೇಶ್ ರೋಡ್ರಿಗಸ್ ಮತ್ತು ಕನ್ನಡ ವಿಭಾಗದ ಮುಖ್ಯಸ್ಥ ಡಾ. ವಿಜಯ ಕುಮಾರ್ ಮೊಳೆಯಾರ ಉಪಸ್ಥಿತರಿದ್ದರು.

ಸ್ನಾತಕೊತ್ತರ ಗಣಿತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಕಾರ್ತಿಕ್ ಪ್ರಾರ್ಥಿಸಿದರು. ಕಛೇರಿ ಅಧೀಕ್ಷಕ ಸುದೀಪ್ ಕ್ಲೀಟಸ್ ವಾಸ್ ಸ್ವಾಗತಿಸಿದರು. ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ಸಂಯೋಜಕಿ ಶ್ರೀಮಣಿ ವಂದಿಸಿದರು. ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಸಚಿನ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

 

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್  App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ಪುತ್ತೂರು: ಶಿಶು ಸಂಗಮದಲ್ಲಿ ನಲಿದಾಡಿ ಖುಷಿಪಟ್ಟ ಚಿಣ್ಣರು

Upayuktha

ಫೆ. 29, ಮಾ.2, 3ರಂದು ವಿವೇಕಾನಂದ ಕಾಲೇಜಿನ ವಾರ್ಷಿಕೋತ್ಸವ

Upayuktha

8 ಲಕ್ಷ ರೂ ಮೌಲ್ಯದ ಚಿನ್ನ ಮರಳಿಸಿ ಪ್ರಾಮಾಣಿಕತೆ ಮೆರೆದ ರತ್ನಾಕರ: ಗೃಹರಕ್ಷಕ ದಳದಿಂದ ಸನ್ಮಾನ

Upayuktha