ಕತೆ-ಕವನಗಳು

ಶಿವ ಪಂಚಾಕ್ಷರೀ ಸ್ತೋತ್ರ ಕನ್ನಡದಲ್ಲಿ!

[ಅಮೆರಿಕದಲ್ಲಿ ಮಹಾಶಿವರಾತ್ರಿ ಆಚರಣೆಯ ಸಂದರ್ಭದಲ್ಲಿ ಲೋಕಾರ್ಪಣೆ.]

ಶ್ರೀ ಆದಿಶಂಕರಾಚಾರ್ಯರ “ನಾಗೇಂದ್ರಹಾರಾಯ ತ್ರಿಲೋಚನಾಯ…” ಸಂಸ್ಕೃತ ರಚನೆಯ ಕನ್ನಡ ರೂಪ.
ಕನ್ನಡ ಭಾವಾನುವಾದ ಮಾಡಿ ಹಾಡಿದವರು: ಸವಿತಾ ರವಿಶಂಕರ; ನಾರ್ತ್ ಕೆರೊಲಿನಾ, ಅಮೆರಿಕ
ಅನುವಾದಕ್ಕೆ ನೆರವು: ಶ್ರೀವತ್ಸ ಜೋಶಿ; ವಾಷಿಂಗ್ಟನ್ ಡಿಸಿ, ಅಮೆರಿಕ.
* * *
ನಾಗೇಂದ್ರ ಹಾರಧಾರಿ ಮುಕ್ಕಣ್ಣ ಸ್ವಾಮಿಗೆ
ಭಸ್ಮ ಮೈಗೆ ಲೇಪಿಸಿದ ಮಹೇಶ್ವರ ಶ್ರೇಷ್ಠಗೆ
ನಿತ್ಯನಿಗೆ ಶುದ್ಧನಿಗೆ ದಿಗ್ವಸ್ತ್ರವ ಹೊದ್ದವಗೆ
‘ನ’ ಅಕ್ಷರ ಸ್ವರೂಪಗೆ ಇದೋ ನಮನ ಈಶಗೆ ||

ಮಂದಾಕಿನಿ ಜಲದ ಸುಗಂಧ ಸುಲೇಪಿತಗೆ
ನಂದೀಶ್ವರ ನಾಥಗೆ ಪ್ರಮಥ ಗಣಗಳೊಡೆಯಗೆ
ಮಂದಾರ ಪುಷ್ಪಗಳ ಪರಿಮಳ ಸುಪೂಜಿತಗೆ
‘ಮ’ ಅಕ್ಷರ ಸ್ವರೂಪಗೆ ಇದೋ ನಮನ ಈಶಗೆ ||

ಶಿವೆಯ ವದನಕಮಲವನ್ನು ಅರಳಿಸುವ ಸೂರ್ಯಗೆ
ಸೃಷ್ಟಿ ಸ್ಥಿತಿ ಲಯ ತಾಂಡವ ದಕ್ಷಯಜ್ಞ ನಾಶಕಗೆ
ಶ್ರೀ ನೀಲಕಂಠಗೆ ವೃಷಭ ಧ್ವಜಧಾರಿಗೆ
‘ಶಿ’ ಅಕ್ಷರ ಸ್ವರೂಪಗೆ ಇದೋ ನಮನ ಈಶಗೆ ||

ವಸಿಷ್ಠಾಗಸ್ತ್ಯ ಗೌತಮಾದಿ ಮುನಿ ವಂದಿತಗೆ
ಇಂದ್ರಾದಿ ದೇವಗಣ ಸೇವಾರ್ಚಿತ ಶೇಖರಗೆ
ವಹ್ನಿ ಚಂದ್ರ ಸೂರ್ಯರನ್ನು ನೇತ್ರವಾಗುಳ್ಳವಗೆ
‘ವ’ ಅಕ್ಷರ ಸ್ವರೂಪಗೆ ಇದೋ ನಮನ ಈಶಗೆ ||

ಯಜ್ಞ ಸ್ವರೂಪಗೆ ಜಟಾಜೂಟ ಧಾರಿಗೆ
ಪಿನಾಕವ ಕರದಲ್ಲಿ ಹಿಡಿದ ಸನಾತನಿಗೆ
ದಿವ್ಯರೂಪ ಸುಂದರಗೆ ದಿಗಂಬರ ದೇವಗೆ
‘ಯ’ ಅಕ್ಷರ ಸ್ವರೂಪಗೆ ಇದೋ ನಮನ ಈಶಗೆ ||

ಪುಣ್ಯವನ್ನು ಕೊಡುವ ಈ ಪಂಚಾಕ್ಷರ ಸ್ತೋತ್ರವನ್ನು
ನಿತ್ಯ ಯಾರು ಪಠಿಸುವರೋ ಶಿವ ಸಾನ್ನಿಧ್ಯದಲಿ
ಶಿವಲೋಕವನವರು ತಾ ಹೊಂದುವರು ಸುಲಭದಲಿ
ಶಿವನೊಡಗೂಡುವರು ಭಕ್ತಿಯ ಆನಂದದಲಿ ||

* * *

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Related posts

*ಬದುಕಿನ ಹಾದಿ.*

Harshitha Harish

ಕವನ: ವಿಕಾರಿ – ಶಾರ್ವರಿ

Upayuktha

ಮಾನ-ಅಪಮಾನಗಳ ನಡುವಿನ ಪಯಣದಿ..

Harshitha Harish