ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸಾಥ್ ನೀಡಿದ್ದಾರೆ. ರವಿಚಂದ್ರನ್ ನಟಿಸುತ್ತಿರುವ ಹೊಸ ಸಿನಿಮಾದ ಹಾಡೊಂದನ್ನು ಶಿವಣ್ಣ ಹಾಡಿದ್ದಾರೆ. ಜಟ್ಟ ಖ್ಯಾತಿಯ ಗಿರಿರಾಜ್ ನಿರ್ದೇಶನದ ‘ಕನ್ನಡಿಗ’ ಚಿತ್ರದ ಹಾಡಿಗೆ ಸೆಂಚುರಿ ಸ್ಟಾರ್ ದನಿಯಾಗಿದ್ದಾರೆ.
ಇಂದು ಬೆಂಗಳೂರಿನಲ್ಲಿರುವ ರವಿ ಬಸ್ರೂರ್ ಅವರ ಸ್ಟುಡಿಯೋಗೆ ಆಗಮಿಸಿದ ಶಿವಣ್ಣ ಹಾಡು ಹಾಡಿದ್ದಾರೆ. ‘ಕನ್ನಡಿಗ’ ಸಿನಿಮಾದ ರವಿಚಂದ್ರನ್ ಲುಕ್ ರಿವೀಲ್ ಕನ್ನಡದ ಕುರಿತು ಸಾಹಿತ್ಯ ಬರೆದಿರುವ ಹಾಡು.
ರವಿಚಂದ್ರನ್ ಅವರ ಚಿತ್ರಕ್ಕೆ ಹಾಡಿದ ಬಗ್ಗೆ ಮಾತನಾಡಿದ ಶಿವಣ್ಣ ”ನಮ್ಮಿಬ್ಬರ ನಡುವೆ ಒಳ್ಳೆಯ ಸ್ನೇಹ ಇದೆ. ರವಿ ಸಿನಿಮಾದಲ್ಲಿ ಹಾಡಿದ್ದು ಖುಷಿ ತಂದಿದೆ. ಚಿತ್ರದ ಕಾನ್ಸೆಪ್ಟ್ ಕೇಳಿದ್ದೀನಿ, ಬಹಳ ಚೆನ್ನಾಗಿದೆ” ಎಂದರು.
ಬರಹಗಾರರ ಕುಟುಂಬದಿಂದ ಬಂದ ಕನ್ನಡ ವಿದ್ವಾಂಸನ ಪಾತ್ರದಲ್ಲಿ ರವಿಚಂದ್ರನ್ ನಟಿಸಲಿದ್ದಾರೆ. ಬ್ರಿಟಿಷ್ ಮತ್ತು ಪೋರ್ಚುಗೀಸ್ ಆಳ್ವಿಕೆಯ ಕಾಲಘಟ್ಟದ ಕಥೆಯ ಇಲ್ಲಿರಲಿದೆ.
1550 ರ ದಶಕದ ಫ್ಲಾಶ್ಬ್ಯಾಕ್ ದೃಶ್ಯಗಳು ಈ ಕಥೆಯಲ್ಲಿ ಬರಲಿದೆ. ಜರ್ಮನ್ ಕನ್ನಡಿಗನನ್ನು ಭೇಟಿಯಾದ ‘ಕನ್ನಡಿಗ’ ರವಿಚಂದ್ರನ್ ‘ಕನ್ನಡಿಗ’ ಸಿನಿಮಾದಲ್ಲಿ ನಾಯಕಿಯಾಗಿ ಪಾವನಾ ನಟಿಸುತ್ತಿದ್ದಾರೆ.
ಸಂಕಮ್ಮಬ್ಬೆಯಾಗಿ ಸ್ವಾನಿ ಚಂದ್ರಶೇಖರ್ ಹಾಗೂ ರೆವರೆಂಡ್ ಫರ್ಡಿನಾಂಡ್ ಕಿಟೆಲ್ ಪಾತ್ರದಲ್ಲಿ ಪಾತ್ರದಲ್ಲಿ ಜೇಮಿ ಆಲ್ಟರ್ ಬಣ್ಣಹಚ್ಚುತ್ತಿದ್ದಾರೆ. ದತ್ತಣ್ಣ, ಅಚ್ಯುತ್ ಕುಮಾರ್ ಸೇರಿದಂತೆ ದೊಡ್ಡ ತಾರಾಬಳಗವೇ ಸಿನಿಮಾದಲ್ಲಿದೆ