ಕತೆ-ಕವನಗಳು

ಸಣ್ಣಕಥೆ: ಮರ ಭೂಮಿಗೆ ಭಾರವಾದರೆ ಕತ್ತರಿಸಬಹುದು, ನರ ಭೂಮಿಗೆ ಭಾರವಾದಾಗ?

ವಾಮನ ರಾಯರಿಗೆ ವಯಸ್ಸು 91, ಈಗಲೂ ಬೆಳಿಗ್ಗೆ ಒಂದು ಗಂಟೆ ವಾಕ್ ಮಾಡುತ್ತಾರೆ. ಅಂದು ವಾಕ್ ಮಾಡಿ ಪಾರ್ಕ್ ನ ಸಿಮೆಂಟ್ ಕುರ್ಚಿ ಮೇಲೆ ಕೂತಿದ್ದರು. ಅಲ್ಲೇ ಸಮೀಪದಲ್ಲಿ ದೊಡ್ಡ ಆಲದ ಮರವೊಂದು ಅರ್ಧ ಸತ್ತಿತ್ತು ಅದೆಷ್ಟೋ ದಶಕ ಗಳಷ್ಟು ವರುಷ ಅದೆಷ್ಟೋ ಸಾವಿರ ಮಂದಿಗೆ ನೆರಳು ಕೊಟ್ಟ ಮರ ಇಂದು ಎಲೆ ಉದುರಿಸಿ ಕೊಂಡು ಈಗಲೋ, ಆಗಲೋ ಬೀಳುವ ಸ್ಥಿತಿಯಲ್ಲಿದೆ.

ಅದರ ಸುತ್ತ ಒಂದಷ್ಟು ಜನ ಸೇರಿದ್ದರು. ಮರವನ್ನು ಕಡಿದು ಉರುಳಿಸಲು ಸಜ್ಜಾಗಿದ್ದರು. ಅದೆಷ್ಟೋ ಮಕ್ಕಳು, ಜನರು ಇರುವಾಗ ಮರ ಬಿದ್ದರೆ ಅವರ ಜೀವಹಾನಿಯಾಗುವುದನ್ನು ತಪ್ಪಿಸಲು ಜಿಲ್ಲಾಡಳಿತ ಇಷ್ಟು ದೊಡ್ಡ ಮರಕ್ಕೆ ಗರಗಸ ಹಾಕಲು ನಿರ್ಧರಿಸಿತ್ತು. ಜನರೆಲ್ಲಾ ಗರಗಸದೊಂದಿಗೆ ತಯಾರಾಗಿಯೇ ಬಂದಿದ್ದರು.

ಕಳೆದ ವರ್ಷ ಮಡದಿಯ ಅಕಾಲಿಕ ಮರಣದ ನಂತರ ರಾಯರು ತುಸು ಮಂಕಾಗಿದ್ದರು. ಇತೀಚೆಗೇಕೋ ಒಂಟಿತನ ಬಹಳಷ್ಟು ಕಾಡುತಿತ್ತು. ಮಕ್ಕಳು ಮ್ಮಕ್ಕಳು, ಮರಿಮಕ್ಕಳು, ಸೊಸೆ ಅಳಿಯಂದಿರು ಎಲ್ಲರೂ ಅವರವರ ಪ್ರಪಂಚದಲ್ಲಿ ಬ್ಯುಸಿ ಆಗಿದ್ದರು. ಎಷ್ಟೋ ಬಾರಿ ಊಟ ಮಾಡಿದ್ದೆಯೋ, ಇಲ್ಲವ ಎಂದು ವಿಚಾರಿಸುವುದಿರಲಿ ಮನೆಯ ಯಾವುದೇ ದೊಡ್ಡ ದೊಡ್ಡ ಸಮಾರಂಭಕ್ಕೆ ಕೂಡ ರೂಪು ರೇಷೆಯ ಬಗ್ಗೆ ಮಾತುಕತೆಗೂ ಕರೆಯುತ್ತಿರಲಿಲ್ಲ. ಒಟ್ಟಿನಲ್ಲಿ 90ರ ನಂತರ ಬದುಕು ನರಕ ಸದೃಶವಾಗಿತ್ತು. ಮಡದಿ ಮುತ್ತೈದೆಯಾಗಿಯೇ ಸತ್ತಿದ್ದಳು. ನಾನೂ ಅಂದೇ ಸತ್ತಿದ್ದರೆ ಒಳ್ಳೆಯ ಮರಣ ಸಿಗುತ್ತಿತ್ತೋ ಏನೋ ಆದರೆ ಇಂದು ನಾನೇನಾದರೂ ಹಾಸಿಗೆ ಹಿಡಿದರೆ ನನ್ನ ಸೇವೆ ಮಾಡಲು ಯಾರೂ ಇರಲಿಲ್ಲ ಇಲ್ಲಿ.

ಆ ಸನ್ನಿವೇಶ ನೆನೆದರೆ ಒಂದು ಕ್ಷಣ ಹೆದರಿಕೆ ಆಗುತಿತ್ತು ರಾಯರಿಗೆ. ದೇವರಲ್ಲಿ ಕೈ ಮುಗಿದು ಮನಸ್ಸಲ್ಲೇ ಬೇಡಿಕೊಂಡರು ದೇವ ಒಳ್ಳೆಯ ಸಾವು ಕೊಡು ನನಗೆ ಎಂದು. ಆದರೂ ಅವರಿಗೆ ಸ್ಪಷ್ಟವಾಗಿ ತಿಳಿದಿತ್ತು. ಸಾವು ದೇವರ ಆಟವೇ ಹೊರತು ನಮ್ಮ ಆಸೆ ಅಲ್ಲ ಎಂದು. ಅಷ್ಟರಲ್ಲಿ ದೊಡ್ಡ ಶಬ್ದದೊಂದಿಗೆ ನೆಲಕ್ಕುರುಳಿತ್ತು ಆ ಆಲದ ಮರ.

ಬದುಕು ಎಷ್ಟು ಮುಖ್ಯವೋ ಅಷ್ಟೇ ಸಾವೂ ಕೂಡ. ಖಾಲಿ ಕೈಯಲ್ಲಿ ಬಂದವರೆಲ್ಲ ಒಂದು ದಿನ ಹೋಗಲೇ ಬೇಕು. ಆದರೆ ನಮ್ಮ ವಿದಾಯ ಗೌರವಯುತವಾಗಿರಲಿ. ಸುಖಮರಣ ನಮ್ಮದಾಗಿರಲಿ ಎಂಬುದಷ್ಟೇ ಆ ಭಗವಂತನಲ್ಲಿ ನಮ್ಮ ಪ್ರಾರ್ಥನೆ.

-ಡಾ.ಶಶಿಕಿರಣ್ ಶೆಟ್ಟಿ, ಉಡುಪಿ
9945130630

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ಉಪಯುಕ್ತ ನ್ಯೂಸ್ ಸಿಗ್ನಲ್‌ ಗ್ರೂಪಿಗೆ ಜಾಯಿನ್ ಆಗಲು ಈ ಲಿಂಕ್‌ ಬಳಸಿ

 

Related posts

🙏 ಶ್ರೀಕೃಷ್ಣ ಜನ್ಮಾಷ್ಟಮಿ 🙏

Upayuktha

ಮುದ್ದಿನ ಬೆಕ್ಕು

Harshitha Harish

ಶ್ರೀ ಶಂಕರಾಚಾರ್ಯರ ದೇವ್ಯಪರಾಧ ಕ್ಷಮಾಪಣಾ ಸ್ತೋತ್ರಮ್ -ಕನ್ನಡ ರೂಪ

Upayuktha