ಕತೆ-ಕವನಗಳು

ಸಣ್ಣ ಕಥೆ: ಇಂಗ್ಲಿಷ್ ದಿನೇಶ

ದಿನೇಶ ನಿಜಕ್ಕೂ ಒಳ್ಳೆಯ ಹುಡುಗ ಕಷ್ಟದಿಂದ ಮೇಲೆ ಬಂದಿದ್ದ. ಬಾಲ್ಯದಲ್ಲಿಯ ಕಷ್ಟವನ್ನು ಇಂದು ಮೆಟ್ಟಿ ನಿಂತಿದ್ದ. ಜನರಲ್ಲಿ ಅವನ ಬಗ್ಗೆ ಅನುಕಂಪ ವಿತ್ತು. ಆದರೆ ಯಾವಾಗ ಹಣ ತನ್ನ ಕೈಯಲ್ಲಿ ಬರಲಾರಂಭಿಸಿತೋ ಆವಾಗಿನಿಂದ ಸಂಪೂರ್ಣವಾಗಿ ಬದಲಾಗಿಬಿಟ್ಟಿದ್ದ. ಬಹುಶಃ ಅಲ್ಪನಿಗೆ ಐಶ್ವರ್ಯ ಬಂದಾಗ… ಎಂಬ ಗಾದೆಯನ್ನು ಹಿರಿಯರು ಇವನಿಗಾಗಿ ಮಾಡಿರಬಹುದೋ ಅನ್ನುವಷ್ಟರ ಮಟ್ಟಿಗೆ ಬದಲಾದದ್ದು ಮಾತ್ರ ನಿಜಕ್ಕೂ ಅಕ್ಷಮ್ಯ.

ಜನರೆದುರು ತಾನು ಹೈ ಸೊಸೈಟಿಯಿಂದ ಬಂದವನು ಎಂಬಂತೆ ವರ್ತಿಸಲು ಆರಂಭಿಸಿದ. ಇಂಗ್ಲಿಷ್ ಶಬ್ದ ಕೋಶದಿಂದ ಕೆಲವೊದು ಇಂಗ್ಲಿಷ್ ಪದ ಹುಡುಕಿ ಅದರ ಅರ್ಥ ಕಲಿತುಕೊಂಡು ಮಾತಿನ ಮಧ್ಯೆ ಮಧ್ಯೆ ಉಪಯೋಗಿಸಲಾರಂಭಿಸಿದ, ಮಾತನಾಡುವ ಶೈಲಿ ಕೂಡ ಬದಲಾಗಿತ್ತು. ಮಾತಿನ ನಡುವೆ ಸಮಯ ಕೊಟ್ಟು ತತ್ವಜ್ಞಾನಿಯ ಥರ ಮಾತನಾಡಲು ಆರಂಭಿಸಿದ್ದ. ಅಂಗಿ, ಪ್ಯಾಂಟ್, ಶೂಸ್, ಬೆಲ್ಟ್, ಮೊಬೈಲ್ ಎಲ್ಲ ಕಾಸ್ಟ್ಲಿ, ದೊಡ್ಡ ಕಂಪನಿಯ ದ್ದೇ ಉಪಯೋಗಿಸಲಾರಂಭಿಸಿದ ನಂತರ ಅವನ ಜೀವನ ಶೈಲಿ ಇನ್ನಷ್ಟು ಬದಲಾಗಿತ್ತು. ಜನರೆಲ್ಲಾ ಅವನನ್ನು ಇಂಗ್ಲಿಷ್ ದಿನೇಶ ಎಂದು ಅಡ್ಡ ಹೆಸರಿಂದ ಕರೆಯಲು ಆರಂಭಿಸಿದರು.

ಅಂದು ಗೆಳೆಯ ನೊಬ್ಬನ ಜೊತೆ ವೀಡಿಯೋ ಕಾಲ್‌ನಲ್ಲಿದ್ದ, ಗೆಳೆಯ ಕೇಳಿದ್ದ ಹೇ ನಿನ್ನ ಶರ್ಟ್ ಸೂಪರ್ ಕಾಣ್ತಿದೆ, ಎಲ್ಲಿಂದ ತಗೊಂಡೆ ಎಂದು ಕೇಳಿದ್ದ.

ತಕ್ಷಣ ಈತ ಹೇಳಿದ್ದಿಷ್ಟು- ಅದು ಇಂಪೊಟೆಂಟ್ (ಇಂಪೋರ್ಟೆಡ್ ಎಂದಾಗ ಬೇಕಿತ್ತು ಸ್ಪೆಲ್ಲಿಂಗ್ ತಪ್ಪಾಗಿತ್ತು).. ನಾನು ಹಾಗೆ ಎಲ್ಲರಂತಲ್ಲ ಒಂತರ ಸ್ಪೆಷಲ್ ನನ್ನ ಅಂಗಿ ಇಂಪೋಟೆಂಟ್, ನನ್ನ ಪ್ಯಾಂಟ್ ಇಂಪೋಟೆಂಟ್, ನನ್ನ ಬೆಲ್ಟ್, ಶೂಸ್ ಎಲ್ಲ ಇಂಪೋಟೆಂಟ್ ಒಟ್ಟಲ್ಲಿ ನಾನೆ ಇಂಪೋಟೆಂಟ್ (ಇಂಪೋಟೆಂಟ್ =ಷಂಡ) ಅಂದು ಬಿಟ್ಟಿದ್ದ. ಒಂದು ಕ್ಷಣ ಷಂಡನಾಗಿ ಬಿಟ್ಟಿದ್ದ. ಎದುರಿನವ ಫೋನ್ ಕಟ್ ಮಾಡಿ ನಕ್ಕು ನಕ್ಕು ಸುಸ್ತಾಗಿದ್ದನಂತೆ.

ನಮ್ಮ ನಿಮ್ಮ ನಡುವೆಯೂ ಇರುತ್ತಾರೆ ಇಂತಹ ಇಂಪೋಟೆಂಟ್ ವ್ಯಕ್ತಿಗಳು.. 1000 ದ ಟೀ ಶರ್ಟ್ ಒಳಗೆ 3 ತೂತುಗಳಿರುವ ಬನಿಯಾನ್, 2000 ದ ಜೀನ್ಸ್ ಒಳಗೆ 5,6 ಒಟ್ಟೊಟ್ಟೆ ಇರುವ ಚಡ್ಡಿ, ತೋರಿಕೆಗೆ ಮಾತ್ರ ಆಡಂಬರ ತೋರಿಸುವ, ಕುತ್ತಿಗೆ ಉದ್ದ ಮಾಡಿ ರಾಗ ಎಳೆದು ಮಾತಾಡುವ ಮಂದಿ, ಎಡ ಕೈಗೆ 15000 ದ ವಾಚ್ ಕಟ್ಟಿ ಆಗಾಗ ಎಡ ಕೈ ಎತ್ತಿ ತೋರಿಸುವ ಮಂದಿ ಇತ್ಯಾದಿ. ಆದರೂ ಎಂತಹ ಸಂದರ್ಭ ಬಂದಾಗಲೂ ತಾವು ನಡೆದು ಬಂದ ದಾರಿ ಹಾಗೆ ಕಷ್ಟದಲ್ಲಿರುವ ಜನರ ಸೇವೆ ಇದಿಷ್ಟನ್ನು ನೆನಪಲ್ಲಿಟ್ಟರೆ ಮಾತ್ರ ಈ ಜೀವನ ಸಾರ್ಥಕ. ಅಲ್ಲವೇ?

-ಡಾ. ಶಶಿಕಿರಣ್ ಶೆಟ್ಟಿ, ಉಡುಪಿ
9945130630

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ಉಪಯುಕ್ತ ನ್ಯೂಸ್ ಸಿಗ್ನಲ್‌ ಗ್ರೂಪಿಗೆ ಜಾಯಿನ್ ಆಗಲು ಈ ಲಿಂಕ್‌ ಬಳಸಿ

Related posts

ಕವನ: ಕಾಲ ಕೆಟ್ಟಿಲ್ಲ

Upayuktha

*ಓಲೆಯೊಂದು ದೇವಗೆ*

Harshitha Harish

*ನನ್ನಾಕೆ*

Harshitha Harish