
ಆ ಗ್ರಾಮ ಶಾಸಕರಿಗೆ ನಿಜಕ್ಕೂ ತಲೆ ನೋವಾಗಿತ್ತು ಪಕ್ಷ ಗ್ರಾಮ ಪಂಚಾಯತ್ ಅಧ್ಯಕ್ಷರನ್ನು ಆರಿಸುವ ಜವಾಬ್ದಾರಿಯನ್ನೇನೋ ಕೊಟ್ಟಿತ್ತು. ಆದರೆ ಇಲ್ಲಿ ಪಕ್ಷದೊಳಗೆ ಅತೃಪ್ತಿ ಮೂಡಿಸುವ ಅನೇಕ ಅಂಶಗಳಿದ್ದವು. ಹಾಗಾಗಿ ಬಹಳ ನಾಜೂಕಾಗಿ ಬೆಣ್ಣೆಯಿಂದ ಕೂದಲನ್ನು ತೆಗೆಯಬೇಕಿತ್ತು.
ಹೆಚ್ಚಿನ ಎಲ್ಲ ಗ್ರಾಮ ಪಂಚಾಯತ್ ಅಧ್ಯಕ್ಷರ ಆಯ್ಕೆ ಮುಗಿಸಿದ್ದರು. ಶಾಸಕರು ಆ ಗ್ರಾಮ ಕೊನೆಯದಾಗಿ ಇಟ್ಟಿದ್ದರು. ಅಲ್ಲಿ ಬಹಳಷ್ಟು ರಾಜಕೀಯವಿತ್ತು, ಜಾತಿ ರಾಜಕೀಯ, ಅನುಭವದ ರಾಜಕೀಯ, ಮಾತಿನ ಮಲ್ಲರ ರಾಜಕೀಯ, ಯುವ ರಾಜಕೀಯ ಹೀಗೆ ಒಟ್ಟಲ್ಕರಿಗೆ ತಲೆ ನೋವಾಗಿತ್ತು. 2 ತಂಡಗಳಿದ್ದವು. ಮಾತುಕತೆ ಆರಂಭವಾಯಿತು ಪರಸ್ಪರ ಕೆಸರೆರಚಾಟ ತಾರಕಕ್ಕೇರಿತ್ತು. ಅಲ್ಲಿ ಒಂದು 3ನೇ ಭಾರಿ ಜಯಿಸಿರುವ ಅನುಭವ ವಿರುವ ಬಾಸ್ಕರ್ ಅವರ ಬಣ ಇನ್ನೊಂದು ಮೊದಲ ಭಾರಿ ಜಯಿಸಿರುವ ಆಜಯ್ ಹಾಗೂ ಯುವಕರ, ಮಾತಿನ ಮಲ್ಲರ ಬಣ ಒಟ್ಟಲ್ಲಿ ಮಾತುಕತೆ ಅಂತ್ಯ ಕಾಣುವ ಲೆಕ್ಕದಲ್ಲಿ ಇರಲಿಲ್ಲ. ಶಾಸಕರಿಗೂ ಕನ್ಫ್ಯೂಸ್ ಆಗಿತ್ತು ಇಲ್ಲಿ ಒಂದು ಬಣಕ್ಕೆ ಅಧಿಕಾರ ಕೊಟ್ಟರೆ ಇನ್ನೊಂದು ಬಣಕ್ಕೆ ಬೇಸರವಾಗುವುದರಲ್ಲಿತ್ತು. ಶಾಸಕರಿಗೆ ಅದು ಬೇಕಿರಲಿಲ್ಲ.
ಅರ್ಧ ಗಂಟೆ ಕಚ್ಚಾಟ ಮುಂದುವರಿದಾಗ ಮಧ್ಯ ಪ್ರವೇಶಿಸುವುದು ಶಾಸಕರಿಗೆ ಅನಿವಾರ್ಯವಾಗಿತ್ತು. ಯಾಕೆಂದರೆ 10 ವರ್ಷದ ರಾಜಕೀಯದ ಅನುಭವವಿತ್ತು. ಇವರಿಗೆ ಶಾಸಕರೇ ಮಾತಾಡಿದರು. ಟಾಸ್ ಹಾಕಿ ಅಧ್ಯಕ್ಷರನ್ನು ಘೋಷಿಸೋಣ ಅಂದುಬಿಟ್ಟರು. ಎಲ್ಲರೂ ಓಕೆ ಎಂದರು. ಮದ್ಯದ ಕೊಠಡಿಗೆ ಬಂದವರೇ 5 ರೂ ಕಾಯಿನ್ ಮೇಲೆ ಎಸೆದಿದ್ದರು, ನಂಬರ್ ಬಿದ್ದರೆ ಅಜಯ ಇನ್ನೊಂದು ಬಿದ್ದರೆ ಭಾಸ್ಕರ ಎಂದು ನಿರ್ಧರಿಸಲಾಯಿತು, ಮೇಲೆ ಹಳೆಯ ಮನೆಯಲ್ಲಿಯ ಮರದ ಮೇಲ್ಚಾವಣಿ ಇತ್ತು ನಾಣ್ಯ ಕೆಳಗೆ ಬಿದ್ದಿರಲಿಲ್ಲ, ಅದು ಆ ಮರದ ಎಡೆಯಲ್ಲಿ ಮೇಲೆ ಹೋಗಿತ್ತು. ಎಲ್ಲರಲ್ಲೂ ಕುತೂಹಲವಿತ್ತು ಶಾಸಕರೊಬ್ಬರನ್ನು ಬಿಟ್ಟು ಎಲ್ಲರೂ ಮನೆಯ ಆ ಪುಟ್ಟ ಛಾವಣಿಯತ್ತ ಧಾವಿಸಿದರು.
ಎಲ್ಲರೂ ನಾಣ್ಯ ಹುಡುಕುತಿದ್ದರು, ಕುತೂಹಲ ಎಲ್ಲರಲ್ಲೂ ಇತ್ತು, ನಾಣ್ಯ ಮಾತ್ರ ಶಾಸಕರ ಕೈ ಒಳಗೆ ಇತ್ತು, ಮೇಲೆ ಹರಿಸಿರಲಿಲ್ಲ, ಎಲ್ಲರ ಕಣ್ಣಿಗೆ ಮಣ್ಣೆರಚಲಾಗಿತ್ತು, ಕೇವಲ ಇಲ್ಲಿ ನಾಟಕ ನಡೆದಿತ್ತು, ಅದಾಗಲೇ ಮೇಲಿನಿಂದ ಹೆಸರು ಫೈನಲ್ ಆಗಿತ್ತು. ಅವರನ್ನೇ ಆರಿಸಲಾಗಿತ್ತು. ಯಾರಿಗೂ ಗೊತ್ತಾಗದಂತೆ ನಂಬರ್ ಅನ್ನು ಮೇಲೆ ಮಾಡಿ ಕಾಯಿನ್ ಇಟ್ಟಿದ್ದರು. ಮೇಲೆ ಕಾಯಿನ್ ಹುಡುಕಿ ಸಿಗದವ ಒಬ್ಬ ಕೆಳ ಬಂದಿದ್ದ.
ಅಲ್ಲೇ ನೆಲದ ಮಲೆ ಕಾಯಿನ್ ನೋಡಿ ಖುಷಿ ಯಾಗಿತ್ತು ಅವನಿಗೆ ಅವನ ನಾಯಕ ಅಧ್ಯಕ್ಷನಾಗಿದ್ದ ಎಲ್ಲ ಅಜಯನಿಗೆ ಜಯಕಾರ ಹಾಕಿ ಹೊರಬಂದಿದ್ದರು. ಯಾರಿಗೂ ಬೇಸರವಾಗಿರಲಿಲ್ಲ. ಬೆಣ್ಣೆಯಲ್ಲಿದ್ದ ಕೂದಲನ್ನು ನಾಜೂಕಾಗಿ ತೆಗೆಯಲಾಗಿತ್ತು. ಅತ್ತ ಹಾವು ಸತ್ತಿತ್ತು ಕೋಲು ಮುರಿದಿರಲಿಲ್ಲ. ಎಲ್ಲರೂ ಅಲ್ಲಿಂದ ಹೋಗಿದ್ದರು.
ಅಜಯ್ ಹಾಗೂ ತಂಡಕ್ಕೆ ಬೆಣ್ಣೆ ಸಿಕ್ಕಿದ್ದರೆ ಭಾಸ್ಕರ್ ಗೆ ಸುಣ್ಣ ಸಿಕ್ಕಿತ್ತು. ಆದರೆ ಭಾಸ್ಕರ್ ಗೆ ಸ್ಪಷ್ಟವಾಗಿ ತಿಳಿದಿತ್ತು. ದುಃಖ, ಬೇಸರದಲ್ಲಿ ತಾಳ್ಮೆಯಿಂದಿದ್ದರೆ ನಾಳೆಯ ದಿನ ತನ್ನದಾಗಿರಲಿದೆ ಎಂದು. ಅನುಭವದ ಪಾಠವಾಗಿತ್ತು ಅದು. ಇಂದು ತಾಳ್ಮೆ ನಿನ್ನದಾದಲ್ಲಿ ಖಂಡಿತವಾಗಿ ನಾಳೆಯ ವಿಜಯವು ನಿನ್ನದಾಗಲಿದೆ.
ಇದು ನಿತ್ಯ ಸತ್ಯವಾಗಿದೆ.
ಇಲ್ಲಿ ಶಾಸಕರ ನಡೆ ನಿಜಕ್ಕೂ ಅದ್ಭುತ. ಜೀವನದಲ್ಲಿ ಎಷ್ಟೇ ದೊಡ್ಡ ಕಷ್ಟ ಎದುರಾದಾಗ ಕೂಡ ಎದೆಗುಂದದೆ ಸಮಾಧಾನದಿಂದ ತಾಳ್ಮೆಯಿಂದ ಯೋಚಿಸಿ ಖಂಡಿತ ಅದಕ್ಕೊಂದು ಪರಿಹಾರ ಇದ್ದೇ ಇದೆ. ಅದು ಬಿಟ್ಟು ಚಿಕ್ಕ ಸಮಸ್ಯೆಗಳನ್ನೇ ಯೋಚಿಸುತ್ತ ಕುಳಿತರೆ ಇಲಿಯು ಹುಲಿಯಾಗುವುದರಲ್ಲಿ ಸಂಶಯವಿಲ್ಲ. ತಾಳ್ಮೆಯಿಂದ ಶಾಂತ ಚಿತ್ತರಾಗಿ ಯೋಚಿಸಿದರೆ ಪ್ರತಿ ಸಮಸ್ಯೆಗೂ ಉತ್ತರವೊಂದು ಇದ್ದೇ ಇರುತ್ತದೆ. ನೆನಪಿಡಿ ಉತ್ತರವಿರುವ ಕಾರಣದಿಂದಲೇ ಅದಕ್ಕೆ ಸಮಸ್ಯೆ ಎನ್ನಲಾಗಿದೆ. ಇಲ್ಲದಿದ್ದರೆ ಬೇರೇನೋ ಹೆಸರಲ್ಲಿ ಕರೆಯುತಿದ್ದರೋ ಏನೋ? ಅಲ್ಲವೇ!!
(ಸೂಚನೆ :ಈ ಕಥೆ ಕೇವಲ ಕಾಲ್ಪನಿಕ.. ವಸ್ತು ಅಥವ ವ್ಯಕ್ತಿಗೆ ಸಂಬಂಧಪಟ್ಟಿದ್ದಲ್ಲ)
-ಡಾ.ಶಶಿಕಿರಣ್ ಶೆಟ್ಟಿ, ಉಡುಪಿ
9945130630
(ಉಪಯುಕ್ತ ನ್ಯೂಸ್)
‘ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ಉಪಯುಕ್ತ ನ್ಯೂಸ್ ಸಿಗ್ನಲ್ ಗ್ರೂಪಿಗೆ ಜಾಯಿನ್ ಆಗಲು ಈ ಲಿಂಕ್ ಬಳಸಿ