ಕತೆ-ಕವನಗಳು

ಸಣ್ಣಕಥೆ: ಮೇಲೊಬ್ಬ ಭಗವಂತ ನೋಡುತ್ತಿದ್ದಾನೆ

ಆತ ಡ್ರಗ್ಸ್ ಡೀಲರ್. ಯುವ ಸಮೂಹವನ್ನು ಡ್ರಗ್ಸ್ ಜಾಲದಲ್ಲಿ ಬೀಳಿಸಿ ಹಾಳು ಮಾಡುವುದು ಆ ಮೂಲಕ ದುಡ್ಡು ಮಾಡಿ ತಾನು ಬದುಕುವುದು ಆತನ ನಿತ್ಯ ಕಸುಬು. ಅಂದು ಕೂಡ 10 ಲಕ್ಷದ ಡ್ರಗ್ಸ್ ನೊಂದಿಗೆ ಪಾರ್ಕ್ ಒಂದರ ಕೊಳದ ಬಳಿ ಕೂತಿದ್ದ. ತನ್ನ ನಿತ್ಯ ಗ್ರಾಹಕರು ಬಂದೇ ಬರುತ್ತಾರೆ ಎಂದು ಜಾತಕ ಪಕ್ಷಿಯಂತೆ ಕಾಯುತ್ತಿದ್ದ.

ಅಂದು ಆ ಕೊಳವನ್ನೇ ನೋಡುತ್ತಿದ್ದ, ಅಲ್ಲಿ ಕಪ್ಪೆಯೊಂದು ನೀರಲ್ಲಿ ಕೀಟವನ್ನು ತನ್ನ ಬಲೆಗೆ ಬೀಳಿಸಲು ಹೊಂಚು ಹಾಕುತ್ತಿದ್ದರೆ, ಅಲ್ಲೇ ಪಕ್ಕದಲ್ಲಿ ಕೇರೆ ಹಾವೊಂದು ಆ ಕಪ್ಪೆಯನ್ನು ತಿನ್ನಲು ಹೊಂಚು ಹಾಕುತ್ತಿತ್ತು. ಅಷ್ಟರಲ್ಲಿ 4, 5 ತನ್ನ ನಿತ್ಯ ಗ್ರಾಹಕರು ತಮ್ಮ ವಿಚಿತ್ರ ಕೋಡ್ ವರ್ಡ್‌ಗಳಲ್ಲಿ ಡ್ರಗ್ಸ್ ಖರೀದಿಸುತ್ತಿದ್ದರು. ಕಪ್ಪೆ ಅಷ್ಟರಲ್ಲಿ ಕೀಟವನ್ನು ನುಂಗಿತ್ತು. ತಂದಿದ್ದ 70% ಡ್ರಗ್ಸ್ ಖಾಲಿಯಾಗಿತ್ತು.

ಅಷ್ಟರಲ್ಲಿ ಅಲ್ಲಿಗೆ ಮಾರುವೇಷದಲ್ಲಿ ಬಂದ ಪೊಲೀಸ್ ಇವನನ್ನು ಮಾಲು ಸಹಿತ ಬಂಧಿಸಿತ್ತು. ಕಪ್ಪೆಯನ್ನು ಅಷ್ಟು ಹೊತ್ತಿಗೆ ಕೇರೆ ಹಾವು ನುಂಗಿಯಾಗಿತ್ತು. ಈ ಕೇರೆ ಹಾವನ್ನು ಮೇಲಿಂದ ಗಿಡುಗವೊಂದು ಗಮನಿಸುತ್ತಿತ್ತು. ಕೀಟವನ್ನು ನುಂಗಿದ ಖುಷಿ ಕಪ್ಪೆಗೆ ಹೆಚ್ಚು ಹೊತ್ತು ಇರಲಿಲ್ಲ. ಹಾಗೆ ಡ್ರಗ್ಸ್ ಮಾರಿದ ಹಣ ಇವನಲ್ಲಿ ಹೆಚ್ಚು ಹೊತ್ತು ಉಳಿದಿರಲಿಲ್ಲ.

ನಮ್ಮಲ್ಲೂ ಇದ್ದಾರೆ ಕಲ್ಲು, ಹೊಯಿಗೆ, ಜಲ್ಲಿ, ಸಿಮೆಂಟ್, ರೋಡ್, ಸಕ್ಕರೆ, ಬೆಲ್ಲ, ಅಕ್ಕಿ, ಎಣ್ಣೆ, ಬಟ್ಟೆ, ಚಿನ್ನ ಏನೇ ಇರಲಿ ನೇರವಾಗಿ ವ್ಯಾಪಾರ ಮಾಡದೇ ಮಂಗ ಮಾಡಿ ಎದುರಿನವನ ಹಣ ಹೊಡೆಯಲು ಯೋಚಿಸುವವರು. ಈ ರೀತಿ ಸಂಪಾದಿಸಿದ ಹಣ ಖಂಡಿತ ಅವರಲ್ಲಿ ಉಳಿಯದು. ಯಾಕೆಂದರೆ ಕೀಟವನ್ನು ಕಪ್ಪೆ ತಿಂದಂತೆ ಕಪ್ಪೆಯ ತಿನ್ನಲು ಹಾವು ಕಾದಿರುತ್ತದೆ. ಅಲ್ಲೂ ನೀನು ತಪ್ಪಿಸಿಕೊಂಡರೆ ಮೇಲೊಬ್ಬ ಭಗವಂತ ಗಿಡುಗನಂತೆ ಎಲ್ಲವನ್ನು ಗಮನಿಸುತ್ತಿರುತ್ತಾನೆ. ಯಾವಾಗ ನಿಮ್ಮ ಮೇಲೆ ಎರಗುತ್ತಾನೋ ನಮಗೆ ಗೊತ್ತಿರುವುದಿಲ್ಲ… ಹಾಗಾಗಿ ಇನ್ನೊಬ್ಬರಿಗೆ ಮೋಸ ಮಾಡುವ ಮುಂಚೆ ನೂರು ಸಲ ಯೋಚಿಸಿ.

-ಡಾ. ಶಶಿಕಿರಣ್ ಶೆಟ್ಟಿ, ಉಡುಪಿ
9945130630 (ವಾಟ್ಸಪ್)

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

*ಬಾಳ ಬಂಡಿ*

Harshitha Harish

ಸಣ್ಣಕಥೆ: ಪಂಜರ ಚಿನ್ನದ್ದಾದರೇನಂತೆ ಹಕ್ಕಿಯ ಪಾಲಿಗೆ ಅದು ಪಂಜರವೇ ತಾನೇ?

Upayuktha

ನದಿ ಜೀವನ

Harshitha Harish