ಕತೆ-ಕವನಗಳು

ಸಣ್ಣಕಥೆ: ಪವಿತ್ರ ರಂಜಾನ್ ಉಪವಾಸ ಹಾಗೂ ಅಬ್ದುಲ್ಲಾ

(ಪ್ರಾತಿನಿಧಿಕ ಚಿತ್ರ)

ಅಂದು ಅಬ್ದುಲ್ಲ ರಂಜಾನ್ ಉಪವಾಸದಲ್ಲಿದ್ದ. ಈ ಪವಿತ್ರ ದಿನದ ಉಪವಾಸದಿಂದ ದೇಹ ದಂಡಿಸಿಕೊಂಡು ಸಂಜೆ ಚಂದ್ರ ದರ್ಶನ ಮುಗಿದಾಗ ಮಸೀದಿಗೆ ಹೋಗಿ ದೇವರಿಗೆ ನಮಾಜ್‌ ಅರ್ಪಿಸಿ ಎಲ್ಲ ಒಟ್ಟಾಗಿ ಬಿರಿಯಾನಿ ಊಟ ಮಾಡುವ ಸುಸಂದರ್ಭ ಅದಾಗಿತ್ತು.

ಆತ ತಾನು ತನ್ನ ಕಾಲಮೇಲೆ ನಿಂತು ರಂಜಾನ್ ಉಪವಾಸ ಆರಂಭಿಸ ಬೇಕು ಎಂದು ಕೆಲವು ವರ್ಷ ಉಪವಾಸ ಮಾಡಿರಲಿಲ್ಲ ಹಾಗಾಗಿ ಆತನಿಗೆ ಅಂದಿನದು ಪವಿತ್ರ ಉಪವಾಸ ವಾಗಿತ್ತು. ಈಗಷ್ಟೇ ಮಸೀದಿಯಲ್ಲಿ ಪ್ರಾರ್ಥನೆ ಮುಗಿಸಿದ್ದರಿಂದ.. ಎಲ್ಲ ಧರ್ಮ ಗಳಿಂದಲೂ. ಪವಿತ್ರ ಉಪವಾಸ ಆಚರಿಸುತ್ತಿರುವ ನಮ್ಮದು ಅತ್ಯಂತ ಶ್ರೇಷ್ಠ ಧರ್ಮ. ಹಾಗೂ ಈ ರೀತಿ 1 ತಿಂಗಳು ಉಪವಾಸ ವ್ರತ ಕಟ್ಟುನಿಟ್ಟಾಗಿ ಮಾಡುತ್ತಿರುವ ತಾನು ಅತ್ಯಂತ ಶ್ರೇಷ್ಠ ವ್ಯಕ್ತಿ ಎನ್ನುವ ಅಹಂಕಾರ ತಲೆಯಲ್ಲಿ ಬಂದಿತ್ತು.. ಅದು ನಿಜಕ್ಕೂ ಅಲ್ಲಾನಿಗೆ ಇಷ್ಟವಾದದ್ದಾಗಿರಲಿಲ್ಲ.

ಯಾಕೆಂದರೆ ಅಹಂಕಾರ ಎಷ್ಟೇ ಶ್ರೇಷ್ಠ ವ್ಯಕ್ತಿತ್ವವನ್ನೂ ನಾಶ ಮಾಡಬಲ್ಲವಾಗಿತ್ತು…

ಅಷ್ಟರಲ್ಲಿ ಆ ಭಿಕ್ಷುಕಿ ಬಿರಿಯಾನಿ ತಟ್ಟೆಯಲ್ಲಿ ಹಾಕಿ ಕೊಂಡು ಇವನ ಬಳಿಯಲ್ಲಿ ಬಂದು ಕೂತಿತ್ತು.. ಯಾಕೋ ಅಬ್ದುಲ್ಲಾಗೆ ಆಕೆಯ ಬಳಿ ಮಾತಾಡ ಬೇಕೆನಿಸಿತ್ತು.. ನೀನು ರಂಜಾನ್ ಸಮಯದಲ್ಲಿ ಬಿರಿಯಾನಿ ತಿನ್ನುತ್ತೀ ರಾತ್ರಿ ದೇವರಾದ ಅಲ್ಲಾ ನಿನಗೆ ಊಟ ಕೊಡುತ್ತಾನೆ ಹಗಲಲ್ಲಿ ಯಾರು ಊಟಕೊಡುತ್ತಾರೆ ನಿನಗೆ?*

..ಪ್ರಶ್ನೆ ಅನಿರೀಕ್ಷಿತವಾಗಿತ್ತು ಅಜ್ಜಿಗೆ.. ತುಸು ನಕ್ಕು ಉತ್ತರಿಸಿತು ಅಜ್ಜಿ, ಹೌದು ಮಗ ರಂಜಾನ್ ಅಲ್ಲಿ ಅಲ್ಲಾ ಬಿರಿಯಾನಿ ಕೊಡುತ್ತಾನೆ ಹಾಗೆ ದೀಪಾವಳಿ, ನವರಾತ್ರಿ ಯ ಕೆಲವು ದಿನ ದೇವಸ್ತಾನಗಳಲ್ಲಿ ವಿಷ್ಣು, ದೇವಿ ಹಾಗೆ ಕ್ರಿಸ್ಮಸ್, ಗುಡ್ ಫ್ರೈಡೆ ಸಮಯದಲ್ಲಿ ಚರ್ಚುಗಳ ಸಮೀಪ ಯೇಸು ಊಟ ಹಾಕುತ್ತಾನೆ.. ಮತ್ತೆ ವಾರದಲ್ಲಿ ಭಾನುವಾರ ಚರ್ಚ್ ಬಳಿ ಯೇಸು, ಸೋಮವಾರ ದೇವಸ್ಥಾನ ಬಳಿ ಶಿವ, ಗುರುವಾರ ಸಾಯಿಬಾಬ, ಶುಕ್ರವಾರ ಮಸೀದಿ ಬಳಿ ಅಲ್ಲಾ, ಶನಿವಾರ ಶನಿ ದೇವಸ್ಥಾನ ಬಳಿ ಒಟ್ಟಲ್ಲಿ ಹೊಟ್ಟೆ ತುಂಬಾ ಊಟ ಸಿಗತ್ತೆ ಮಗ ವಾರಕ್ಕೊಂದೆರಡು ದಿನ ಕಾಲಿ ಹೊಟ್ಟೆ ಯಲ್ಲಿರುತ್ತೇನೆ

ತಿಂಗಳಲ್ಲಿ 6 ರಿಂದ 7 ದಿನ ಬಿಸಿ ನೀರು ಕುಡಿದು ಮಲಗುತ್ತೇನೆ, ಮಗ ಎಂದಾಗ ಅಬ್ದುಲ್ಲಾ ನಿಜಕ್ಕೂ ಒಂದರೆ ಗಳಿಗೆ ಶಾಕ್ ಆಗಿ ಹೋಗಿದ್ದ.

ನಿತ್ಯ ಸತ್ಯ ವೊಂದು ಅರಿವಾಗಿತ್ತು. ಅವನಿಗೆ ಈ ಅಜ್ಜಿ ತಿಂಗಳಿಗೆ 6 ದಿನ ವರ್ಷಕ್ಕೆ 2 ತಿಂಗಳಿಗೂ ಅಧಿಕ ಉಪವಾಸ ಇರುತ್ತದೆ, ಇದರೆದುರು ನನ್ನ 1 ತಿಂಗಳ ಉಪವಾಸ ಏನೇನು ಅಲ್ಲ; ಹಾಗೆ ಈ ಅಜ್ಜಿಗೆ ಅಲ್ಲಾನಂತೆ ಯೇಸು ರಾಮ ಶಿವ ಎಲ್ಲರೂ ಊಟ ಕೊಡುತ್ತಾರೆ. ಹಾಗಾಗಿ ಎಲ್ಲಾ ಧರ್ಮ ಸಮ ಎಲ್ಲ ಹೇಳುವುದು ಒಂದೇ ಹಸಿದವನಿಗೆ ಊಟ ಕೊಡು ಎಂದು ಹಾಗಾಗಿ ಹಿಂದೂ ಶ್ರೇಷ್ಠ, ಮುಸ್ಲಿಂ ಶ್ರೇಷ್ಠ, ಕ್ರಿಸ್ತ ಶ್ರೇಷ್ಠ ಎಂಬ ಮಾತು ಎಲ್ಲ ಸುಳ್ಳು ನಿಜ ಒಂದೇ…

ಹಸಿದವನಿಗೆ ಊಟ ಕೊಡುವವನೇ ಶ್ರೇಷ್ಠ

-ಡಾ.ಶಶಿಕಿರಣ್ ಶೆಟ್ಟಿ
ಹೋಂ ಡಾಕ್ಟರ್ ಫೌಂಡೇಶನ್‌ ಉಡುಪಿ
9945130630

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Related posts

ಚಿತ್ಪಾವನಿ ಭಾಷೆಯ ಕವನ: ಮನುಷ್ಯತ್ಚ ರುಂಡ

Upayuktha

ಮನಸ್ಸೆಂಬುದು ಅಕ್ಷಯ ಪಾತ್ರೆ…

Upayuktha

*ಎದೆ ಹನಿ* *ಎದೆಯಾಳ*

Harshitha Harish