ಕತೆ-ಕವನಗಳು

ಸಣ್ಣ ಕಥೆ – ಕಾಡುವ-ನೆನಪು

ಪ್ರಾತಿನಿಧಿಕ ಚಿತ್ರ (ಕೃಪೆ: ಡ್ರೀಮ್ ಸ್ಕೂಲ್)

ಕಮರೊಟ್ಟು ತರವಾಡು ಮನೆಯ ರಂಗರಾಯರು ಸತ್ಯ,ಧರ್ಮ,ನ್ಯಾಯ ಪ್ರತಿಪಾದಕರು. ತನ್ನ ಬಾಲ್ಯಕಾಲದ ಕೆಲ ಘಟನೆಗಳಿಗೆ ಸಾಕ್ಷಿಯಾದವರು‌. ಆ ನೆನಪುಗಳೊಂದಿಗೇ ಬದುಕು ಕಟ್ಟಿಕೊಂಡು ಬಂದವರು. ಕಟ್ಟ ತರವಾಡು ಮನೆಯ ಸುಗುಣಕ್ಕ ಹೆಸರಿಗೆ ತಕ್ಕಂತೆ ಆದರ್ಶಪ್ರಾಯರು. ರಾಯರ ಎಲ್ಲಾ ಕೆಲಸಕಾರ್ಯಗಳಿಗೆ ಬೆಂಬಲವಾಗಿ ನಿಂತವರು.ಇಬ್ಬರು ಮಕ್ಕಳು ಆಟ-ಪಾಠ ಕಲಿಕೆಯಲ್ಲಿ ಮಗ್ನರು.

ಕಾಲವೇ ಹೀಗೆ. ಕಾಲದ ಪಯಣದಲ್ಲಿ ಹೆಜ್ಜೆ ಹಾಕಲೇ ಬೇಕು. ರಾಯರ ಸುಂದರ ಬದುಕಲ್ಲಿ ಕಾರ್ಗತ್ತಲು ಕವಿಯಿತು. ಸುಗುಣಕ್ಕ ದೇವರ ಪಾದ ಸೇರಿದರು.ಕಲಿಕೆಯಲ್ಲಿ ಮಗ್ನರಾಗಿದ್ದ ಮಕ್ಕಳು ಅಮ್ಮನ ದು:ಖದಲ್ಲಿ ದಿನಕಳೆದರು.ಕಾಲ ಎಲ್ಲ ನೋವ ಮರೆಸುವ ಮುಲಾಮು.

ಸಮಾಜ ಅಂದರೇನೇ ಹಾಗೆ.ಸ್ವಾರ್ಥ. ಇನ್ನೊಬ್ಬರ ಬದುಕಲ್ಲಿ ಆಟ ಆಡಿ ಸಂಭ್ರಮಿಸುವುದು ಲೋಕ ರೂಢಿ. ಒಬ್ಬಂಟಿ ರಾಯರ ಸತ್ಯ, ಧರ್ಮ, ನ್ಯಾಯದ ಹಾದಿಗೆ ಅಡ್ಡ ಬಂದವರನೇಕರು. ಅವರಿಗೆ ಹೋಗಲು-ಬರಲು ದಾರಿ ಇಲ್ಲದಂತೆ ಮಾಡಿದರು. ಕುಡಿಯುವ ನೀರಿಗೆ ತೊಂದರೆಯಾಯಿತು. ಕೃಷಿ ಕೈ ಕೊಟ್ಟಿತು. ವಿಶ್ವವಿಡೀ ವ್ಯಾಪಿಸಿದ ಸಂಕಷ್ಟದಲ್ಲಿ ರಾಯರು ಹೈರಾಣರಾದರು. ಮಗಳು ಶಾಂತಿಯ ಮದುವೆ ಯೋಗ್ಯ ಸಂಬಂಧ ಕೂಡಿ ಬಂದಾಗ ಮಾಡಿ ಬಿಟ್ಟಿದ್ದರು. ಮಗ ಆನಂದ ಪರದೇಶ ಬಿಟ್ಟು ಊರಿಗೆ ಬಂದ. ಮಣ್ಣಿನ ಪ್ರೀತಿ ಬೆಳೆಯಿತು. ತನ್ನ ಸಾಹಿತ್ಯ ಕಲಾ ಆಸಕ್ತಿಯೊಂದಿಗೆ ತಂದೆಯವರ ಆದರ್ಶದಂತೆ ಮುನ್ನಡೆದ. ಇದನ್ನು ಸಹಿಸದ ಜನರಿದ್ದರೂ ಅವರಿಂದ ದೂರವೇ ಉಳಿದ.

ಆದರೆ ವಯಸ್ಸಾದಂತೆ ರಾಯರ ಮನದಲ್ಲಿ ಕಳೆದ ನೆನಪುಗಳ ಕಾಟ ಕಾಡದೆ ಬಿಡಲಿಲ್ಲ… ಅದು ಮರುಕಳಿಸುತ್ತಲೇ ಇತ್ತು. ಯಾರಲ್ಲಾದರೂ ಹೇಳಬೇಕೆಂದು ಕೊಂಡರೂ ಮೌನಕ್ಕೆ ಶರಣಾದರು.

ಸಪ್ಪೆ ಮುಖ ಮಾಡಿ ಆಕಾಶ ನೋಡಿ ಕುಳಿತು ಕೊಂಡಿದ್ದ ರಾಯರನ್ನು ನೋಡಿದ ಮಗ ಆನಂದ-  “ಅಪ್ಪ ಈ ಮೂರು ದಿನದ ಬದುಕಲ್ಲಿ ನಾವು ಕಳೆದ ನೆನಪುಗಳನ್ನು ಮತ್ತೆ.. ಮತ್ತೆ ನೆನೆಯ ಬಾರದು. ಎಲ್ಲರ ಬದುಕು ಹಾಗೇನೇ…ಏಳಿ…!!!” ಎಂದು ಹೇಳಿದಾಗ ರಾಯರು ಮಗನ ಮಾತು ಕೇಳಿಸಿಕೊಂಡರೋ….. ಇಲ್ಲವೋ ಗೊತ್ತಿಲ್ಲ..‌ ಹೌದು ಅವರ ಕೈಯಲ್ಲಿದ್ದ ಊರುಗೋಲು….ಮಾತ್ರ ನೆಲಕ್ಕುರುಳಿತ್ತು.

ಬಾನಂಗಳದಲ್ಲಿ ಸೂರ್ಯ ಪಡುಗಡಲ ಸೇರೋ ತವಕದಲ್ಲಿದ್ದ…

✍️ ನಾರಾಯಣ ರೈ ಕುಕ್ಕುವಳ್ಳಿ‌

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ಉಪಯುಕ್ತ ನ್ಯೂಸ್ ಸಿಗ್ನಲ್‌ ಗ್ರೂಪಿಗೆ ಜಾಯಿನ್ ಆಗಲು ಈ ಲಿಂಕ್‌ ಬಳಸಿ

Related posts

ತುಳು ಭಾಷೆ : ನೆಂಪಾಂಡ್ ಆ ದಿನೊಕುಲು.

Harshitha Harish

ಕಿನ್ಯ ಕಥೆ-2 ಬೊಲ್ಪುದ ತಾದಿ

Harshitha Harish

ಕವಿತೆ: ಒತ್ತಾಸೆ

Upayuktha