ಕತೆ-ಕವನಗಳು

ಸಣ್ಣಕಥೆ: ಕಾಣೆಯಾಗಿದ್ದಾರೆ

ಅಂದು ಅವರಿಬ್ಬರೂ ಓಡೋಡಿ ಪತ್ರಿಕಾ ಕಚೇರಿಗೆ ಬಂದಿದ್ದರು, ಹುಡುಗ ಬೈಕಲ್ಲಿ, ಹುಡುಗಿ ಕಾರಲ್ಲಿ. ಇಬ್ಬರ ಮುಖದಲ್ಲೂ ಆತಂಕ ಮನೆ ಮಾಡಿತ್ತು.

ಹುಡುಗ ತನ್ನ ತಂದೆ ಕಾಣೆಯಾಗಿದ್ದಾರೆ ಎಂದು ತಂದೆಯ ಫೋಟೋದೊಂದಿಗೆ ತನ್ನ ಫೋನ್ ನಂಬರ್ ಕೊಟ್ಟಿದ್ದ. ಹುಡುಗಿ ತನ್ನ ಪ್ರೀತಿಯ ನಾಯಿಮರಿ ಕಾಣೆಯಾಗಿದೆ ಎಂದು ತನ್ನ ಫೋನ್ ನಂಬರ್ ಕೊಟ್ಟಿದ್ದಳು.

ಸಂಜೆ ತನಕ ಸುಮಾರು 12 ಕಾಲ್‌ಗಳು, 10 ವಾಟ್ಸಪ್ ಮೆಸೇಜ್‌ಗಳು, 8 ಟೆಲೆಗ್ರಾಮ್ ಮೆಸೇಜ್‌ಗಳು ಬಂದಿದ್ದವು ಹುಡುಗಿಗೆ ಸಮಾಧಾನ ಮಾಡಲು ಸಾಂತ್ವನ ಹೇಳಲು, ಅವಳ ಕಷ್ಟದಲ್ಲಿ ಭಾಗಿಯಾಗಲು. ನಾಯಿಮರಿ ಸಿಗದಿದ್ದರೂ ಕಾಲ್ ಮಾತ್ರ ಬರುತ್ತಲೇ ಇತ್ತು.

ಹುಡುಗ ಫೋನ್ ಕೈಯಲ್ಲಿ ಹಿಡಿದು ಇನ್ನೂ ಕಾಯುತಿದ್ದಾನೆ, ತನ್ನ ತಂದೆ ಸಿಗಬಹುದೆಂದು.

ನಮ್ಮ ಜನ ಎಂದೂ ಬದಲಾಗುವುದಿಲ್ಲ, ಹುಡುಗಿಯ￰ ಫೋನ್ ನಂಬರ್ ಸಿಕ್ಕಿದರೆ ಸಾಕು ಬಿಲ್ಡ್ ಅಪ್ ಶುರು ಆಗಿ ಬಿಡುತ್ತದೆ. ಅದೇ ಹುಡುಗನೊಬ್ಬ ಕಷ್ಟದಲ್ಲಿದ್ದರೂ ನೋಡಲು ಸಮಯವೇ ಇರುವುದಿಲ್ಲ ಕೆಲವರಲ್ಲಿ. ಹೌದು ನಿಜವಾದ ಮಾನವೀಯತೆ ಕಾಣೆಯಾಗಿದೆ ಇಲ್ಲಿ.

-ಡಾ.ಶಶಿಕಿರಣ್ ಶೆಟ್ಟಿ, ಉಡುಪಿ
9945130630

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ಉಪಯುಕ್ತ ನ್ಯೂಸ್ ಸಿಗ್ನಲ್‌ ಗ್ರೂಪಿಗೆ ಜಾಯಿನ್ ಆಗಲು ಈ ಲಿಂಕ್‌ ಬಳಸಿ

Related posts

ಚೆಲುವ

Harshitha Harish

ಹವ್ಯಕ ಕವನ: ಬಾಗಿಲು ತೆಗೆವ ಮೊದಲು

Upayuktha

ಅಟಲ್ ಅಜ್ಜನಿಗೊಂದು ಕವನ-ನಮನ

Upayuktha