ಕಲೆ ಸಂಸ್ಕೃತಿ ಕ್ಷೇತ್ರಗಳ ವಿಶೇಷ ರಾಜ್ಯ

ಅನ್ಲೈನ್ ಶ್ರೀ ಕೃಷ್ಣ ಜನ್ಮಾಷ್ಟಮಿ

 

ಬೆಂಗಳೂರು:  ಕೊರೊನಾದ ಹಾವಳಿಯಿಂದ ಭಯ ಭೀತಿಗೆ ಒಳಗಾಗಿ ಜನತೆಯ ಆರೋಗ್ಯ ದ ಹಿತದೃಷ್ಟಿಯಿಂದ ದೇವಾಲಯ ಕ್ಕೆ ಪ್ರವೇಶ ನಿಷೇಧ ಇರುವುದರಿಂದ ಅನ್ಲೈನ್ ನಲ್ಲಿ ಕಾರ್ಯ ಕ್ರಮ ನಡೆಯುವುದು. ವೆಸ್ವ್‌ ಆಫ್‌ ಕಾರ್ಡ್‌ ರಸ್ತೆಯ ಇಸ್ಕಾನ್‌ ದೇವಸ್ಥಾನ, ಬಸವನಗುಡಿಯ ಪುತ್ತಿಗೆ ಮಠದ ಶ್ರೀ ಗೋವರ್ಧನಗಿರಿ ಗುಹಾಲಯ ಕ್ಷೇತ್ರ, ಪೂರ್ಣಪ್ರಜ್ಞ ನಗರದ ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನ ಸೇರಿದಂತೆ ನಾನಾ ಕೃಷ್ಣ ದೇವಾಲಯ ಮತ್ತು ಮಠಗಳಲ್ಲಿ ಈ ಬಾರಿ ಆನ್‌ಲೈನ್‌ನಲ್ಲೇ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಿಸಲಾಗುತ್ತಿದೆ. ಹಾಗೆಯೇ ಆಯಾ ಸಂಸ್ಥೆಗಳ ವೆಬ್‌ಸೈಟ್‌, ಫೇಸ್‌ಬುಕ್‌ ಪೇಜ್‌ಗಳಲ್ಲಿ ನೇರಪ್ರಸಾರ ಇರಲಿದೆ ಎಂದು ತಿಳಿಸಿದ್ದಾರೆ.

ಆ.11 ಮತ್ತು 12ರಂದು ಎರಡು ದಿನ ಕೃಷ್ಣ ಜನ್ಮಾಷ್ಟಮಿ ನಡೆಯಲಿದ್ದು ಬಸವನಗುಡಿಯ ಶ್ರೀ ಗೋವರ್ಧನಗಿರಿ ಗುಹಾಲಯ ಕ್ಷೇತ್ರದಲ್ಲಿ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಮಾರ್ಗದರ್ಶನದಲ್ಲಿ ಕಾರ್ಯಕ್ರಮಗಳು ನಡೆಯಲಿವೆ. ಆ.11ರಂದು ಬೆಳಗ್ಗೆ ಪೂಜೆ ನಡೆಯಲಿದೆ. ರಾತ್ರಿ 11.30ಕ್ಕೆ ಮಹಾಪೂಜೆ ನಡೆಯಲಿದೆ. ರಾತ್ರಿ 11.45ಕ್ಕೆ ಅರ್ಘ್ಯ ಪ್ರದಾನ ನಡೆಯಲಿದೆ. ಭಕ್ತರು ಆನ್‌ಲೈನ್‌ನಲ್ಲಿಅರ್ಘ್ಯಪ್ರದಾನ ಮಾಡಬಹುದು. ಆ.12ರಂದು ಬೆಳಗ್ಗೆಯಿಂದ ನಾನಾ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಜತೆಗೆ ಕೃಷ್ಣನ ಕುರಿತಾದ ನಾನಾ ಆನ್‌ಲೈನ್‌ ಸ್ಪರ್ಧೆಗಳು ನಡೆಯಲಿವೆ ಎಂದು ಮಠದ ಮೂಲಗಳು ತಿಳಿಸಿವೆ.

Related posts

ಸದ್ಯಕ್ಕೆ ‘ಯಡಿಯೂರಪ್ಪ’ ಸರ್ಕಾರ ಸೇಫ್: ಕೋಡಿಮಠ ಶ್ರೀಗಳ ಭವಿಷ್ಯ

Upayuktha

ದಕ್ಷಿಣ ಕನ್ನಡ ಕೇರಳ ಸಂಚಾರಕ್ಕೆ ಗಡಿ ಓಪನ್, ಷರತ್ತುಗಳು ಅನ್ವಯ

Harshitha Harish

ಇಂದಿನಿಂದ ಕೆಜಿಎಫ್- 2 ಚಿತ್ರೀಕರಣ ಆರಂಭ

Harshitha Harish

Leave a Comment

error: Copying Content is Prohibited !!