ಕ್ಷೇತ್ರಗಳ ವಿಶೇಷ ರಾಜ್ಯ ಹಬ್ಬಗಳು-ಉತ್ಸವಗಳು

ಜಗತ್ತಿನ ಕತ್ತಲು ಕಳೆಯಲಿ: ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ

ಅಶೋಕೆಯ ವಿಷ್ಣುಗುಪ್ತ ವಿದ್ಯಾಪೀಠದ ಪರಿಸರದಲ್ಲಿ ಶ್ರೀಗಳ ‘ವಿದ್ಯಾ ಚಾತುರ್ಮಾಸ್ಯ’ ವ್ರತಾರಂಭ, ವ್ಯಾಸಪೂಜೆ
Advertisement
Advertisement

ಗೋಕರ್ಣ: ಜಗತ್ತನ್ನು ಮಾರಕ ವ್ಯಾಧಿ ಪೀಡಿಸುತ್ತಿದ್ದು, ಇಡೀ ಜಗತ್ತೇ ಕಂಗಾಲಾಗಿದೆ. ನಿಜಕ್ಕೂ ಜಗತ್ತು ಕತ್ತಲಲ್ಲಿದೆ, ಕಷ್ಟದಲ್ಲಿದೆ, ಬೆಳಕು ಸಿಗುತ್ತಿಲ್ಲ. ಜಗತ್ತಿನ ಅಮಾವಾಸ್ಯೆ ಪೂರ್ಣಿಮೆಯಾಗಿ ಪರಿವರ್ತನೆಯಾಗಲಿ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀ ಮಹಾಸ್ವಾಮೀಜಿ ಹೇಳಿದರು.

ಶ್ರೀಕ್ಷೇತ್ರ ಗೋಕರ್ಣದ ಅಶೋಕೆಯ ವಿಷ್ಣುಗುಪ್ತ ವಿದ್ಯಾಪೀಠದ ಪರಿಸರದಲ್ಲಿ 27ನೇ ಚಾತುರ್ಮಾಸ್ಯದ ವ್ಯಾಸಪೂಜೆ ನೆರವೇರಿಸಿ ಪೂಜ್ಯರು ಆಶೀರ್ವಚನ ನೀಡಿದರು.

ಅಂತರಂಗದಲ್ಲಿ ಜ್ಞಾನದ ಬೆಳಕು ಹಾಗೂ ಚೈತನ್ಯದ ತಂಪನ್ನು ಉಂಟುಮಾಡುವಂತಹದ್ದು ಗುರುಪೂರ್ಣಿಮೆ. ಶಾರ್ವರಿ ಎಂದರೆ ಕತ್ತಲು, ಪೂರ್ಣಿಮೆ ಎಂದರೆ ಬೆಳಕು. ಕತ್ತಲೆಯ ಮಧ್ಯೆ ಬೆಳಗುವಂತಹ ಬೆಳಕು. ಸೂರ್ಯನ ಬೆಳಕಿನ ತಾಪ, ಧಗೆಯನ್ನು ಉಂಟು ಮಾಡುತ್ತದೆ. ಆದರೆ ಪೂರ್ಣಮಿಯ ಬೆಳಕು ತಂಪು ನೀಡುತ್ತದೆ. ಶಾರ್ವರಿ ಗುರುಪೂರ್ಣಿಮೆ ಎಂದರೆ ಗುರು ತಂದ ಬೆಳಕಾಗಿದೆ ಎಂದರು.

ಭಾರತದಲ್ಲಿ ಉಂಟಾದ ಜ್ಞಾನ ಪ್ರಕಾಶ ಪ್ರಪಂಚದಲ್ಲೆಲ್ಲೂ ಆಗಿಲ್ಲ. ಇಂತಹ ದೊಡ್ಡ ಜ್ಞಾನಧನದ ವಾರಸುದಾರರು ನಾವಾಗಿದ್ದು, ಎಲ್ಲವನ್ನೂ ಇವತ್ತು ಕಳೆದುಕೊಂಡಿದ್ದೇವೆ. ದೇಶ ಜ್ಞಾನವನ್ನೆಲ್ಲಾ ಕಳೆದುಕೊಂಡ ಕಾರಣ ಕತ್ತಲು ದೇಶಕ್ಕೆ ಆವರಿಸಿದೆ. ಈ ಕತ್ತಲೆಯನ್ನು ನಿವಾರಿಸಲು ಗುರುಪೂರ್ಣಿಮೆಯೇ ಬೇಕಾಗಿದೆ ಎಂದು ಹೇಳಿದರು.

ಒಂದು ವಿದ್ಯಾ ಪೀಠ ಬೇಕಾಗಿದೆ. ಈ ಚಾತುರ್ಮಾಸ್ಯದ ಉದ್ದೇಶವೇ ವಿದ್ಯೆ. ವಿದ್ಯೆ ಉಳಿಯಬೇಕು, ವಿದ್ಯೆ ಬೆಳೆಯಬೇಕು, ವಿದ್ಯೆ ಬೆಳಗಬೇಕು, ಮತ್ತೊಮ್ಮೆ ವಿದ್ಯೆಯ ಪುನಪ್ರತಿಷ್ಠಾಪನೆ ಆಗಬೇಕಾಗಿದೆ ಎಂಬ ಕಾರಣಕ್ಕೆ ಒಂದು ವಿಶ್ವ ವಿದ್ಯಾ ಪೀಠ, ಐದು ಗುರುಕುಲಗಳನ್ನು ಸ್ಥಾಪನೆ ಮಾಡಲಾಗುತ್ತಿದೆ. ಈಮೂಲಕ ದೇಶದ ಕತ್ತಲನ್ನು ದೂರ ಮಾಡುವ ಕಾರ್ಯ ಮಾಡಲಾಗುತ್ತಿದೆ ಎಂದರು.

ವ್ಯಾಧಿ ತಂದ ಕಷ್ಟ, ವ್ಯಾಧಿ ತಂದ ನಷ್ಟ, ಯುದ್ಧ ಭೀತಿ ಈ ಮುಬ್ಬಗೆಯ ಕಷ್ಟದಲ್ಲಿ ಕತ್ತಲೆಯಲ್ಲಿ ದೇಶ ಇರುವ ಹೊತ್ತು. ದೇಶಕ್ಕೆ ಬಂದ ಕತ್ತಲೆ ನಿವಾರಣೆಯಾಗಲಿ, ದೇಶ ಬೆಳಕಾಗಲಿ, ದೇಶಕ್ಕೆ ಒಳಿತಾಗಲಿ ಎಂದು ಶಂಕರಾಚಾರ್ಯ ಪರಂಪರೆಯ ಪೀಠ ಹಾರೈಸುತ್ತದೆ ಎಂದರು.

ಶನಿವಾರ ಸಾಯಂಕಾಲ ಶ್ರೀಗಳವರ ಪುರಪ್ರವೇಶ ಕಾರ್ಯಕ್ರಮ ನಡೆಯಿತು. ಭಾನುವಾರ ಬೆಳಗ್ಗೆ ಶ್ರೀಕರಾರ್ಚಿತ ಪೂಜೆ, ವ್ಯಾಸಪೂಜೆ, ಭಿಕ್ಷಾ ಸೇವೆ ನಡೆಯಿತು.

 

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್  App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Advertisement
Advertisement

Related posts

ಉಪಚುನಾವಣೆ: ಅನರ್ಹಗೊಂಡಿದ್ದ 16 ಶಾಸಕರು ಸಿಎಂ ಯಡಿಯೂರಪ್ಪ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆ, 13 ಕ್ಷೇತ್ರಗಳಿಂದ ಸ್ಪರ್ಧೆ

Upayuktha

ದುಡ್ಡಿನ ಮೂಲಕ ಚುನಾವಣೆ ಗೆಲ್ಲಲು ಹೊರಟ ಬಿಜೆಪಿ: ಸಿದ್ದರಾಮಯ್ಯ ಆರೋಪ, ಶ್ರೀರಾಮುಲು ವಿರುದ್ಧ ಕಿಡಿ

Upayuktha

ಬಡವಾಯ್ತು ಯಕ್ಷಲೋಕ: ‘ಪ್ರಸಂಗ’ ಮುಗಿಸಿ ಎದ್ದುಹೋದ ಹೊಸ್ತೋಟ ಮಂಜುನಾಥ ಭಾಗವತರು

Upayuktha
error: Copying Content is Prohibited !!