ಕ್ಷೇತ್ರಗಳ ವಿಶೇಷ ಗ್ರಾಮಾಂತರ ಸ್ಥಳೀಯ

ಮಾಣಿ ಮಠದಲ್ಲಿ ಶ್ರೀರಾಮ ಸಾಮ್ರಾಜ್ಯ ಪಟ್ಟಾಭಿಷೇಕ

ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಅವರಿಂದ ಶ್ರೀರಾಮ ದೇವರಿಗೆ ಕಿರೀಟ ಧಾರಣೆ ಸಹಿತ ವಿಶೇಷ ಪೂಜೆ

ಪೆರಾಜೆ: ಮಾಣಿ ಪೆರಾಜೆಯಲ್ಲಿರುವ ಶ್ರೀರಾಮಚಂದ್ರಾಪುರ ಮಠದಲ್ಲಿ ಶ್ರೀಕರಾರ್ಚಿತ ಶ್ರೀರಾಮದೇವರ ಶ್ರೀಸನ್ನಿಧಿಗೆ ಸಾಮ್ರಾಜ್ಯ ಪಟ್ಟಾಭಿಷೇಕ ಕಾರ್ಯಕ್ರಮ ಸೋಮವಾರ ಸಾವಿರಕ್ಕೂ ಅಧಿಕ ಭಕ್ತರ ಸಮ್ಮುಖ ನಡೆಯಿತು.

ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಲೋಕಹಿತಕ್ಕಾಗಿ ಸ್ವಯಂ ನಡೆಸುವ ಮೂಲ ರಾಮಾಯಣದ ನಿತ್ಯ ಪಾರಾಯಣದ ಪರಿಸಮಾಪ್ತಿಯ ಕಾರ್ಯ ಸಾಮ್ರಾಜ್ಯ ಪಟ್ಟಾಭಿಷೇಕವಾಗಿದ್ದು, ಈ ಸಂದರ್ಭ ಶ್ರೀಗಳು ಶ್ರೀರಾಮ ದೇವರಿಗೆ ಕಿರೀಟ ಧಾರಣೆ ಸಹಿತ ಪಟ್ಟಾಭಿಷೇಕದ ಕಾರ್ಯಗಳನ್ನು ನೆರವೇರಿಸಿದರು.

ಈ ಸಂದರ್ಭ ಅಷ್ಟಾವಧಾನ, ಸಂಗೀತ, ನೃತ್ಯ ಸೇವೆಗಳನ್ನು ಭಕ್ತರು ನೆರವೇರಿಸಿದರು. ಶಾಸನ ತಂತ್ರದ ಪದಾಧಿಕಾರಿಗಳು, ಮಹಾಮಂಡಲ, ಮಂಡಲ, ವಲಯದ ಪದಾಧಿಕಾರಿಗಳು ಮತ್ತು ಭಕ್ತರು ಪಟ್ಟಾಭಿಷೇಕ ನಿಮಿತ್ತ ಕಪ್ಪಕಾಣಿಕೆ ಸಲ್ಲಿಸಿದರು.

ವಿಶಿಷ್ಟವಾಗಿ ಅಲಂಕೃತಗೊಂಡ ರಜತಮಂಟಪದಲ್ಲಿ ಪಟ್ಟಾಭಿಷಿಕ್ತನಾದ ಶ್ರೀ ರಾಮ ಹಾಗೂ ಸೀತಾಮಾತೆಗೆ ಶ್ರೀಕರಗಳಿಂದ ಕಿರೀಟಧಾರಣೆ ಮೂಲಕ ಪಟ್ಟಾಭಿಷೇಕ ನಡೆಯುವ ಸಂದರ್ಭದಲ್ಲಿ ಸ್ನೇಹ ಭಟ್ ಚೂಂತಾರು ಇವರಿಂದ ನೃತ್ಯ ಸೇವೆ ನಡೆಯಿತು.

ಈ ಸಂದರ್ಭ ಆಶೀರ್ವಚನ ನೀಡಿದ ರಾಘವೇಶ್ವರ ಸ್ವಾಮೀಜಿ, ಜಗತ್ತಿನ ಮೊದಲ ಶ್ರೇಷ್ಠ ಮಹಾಕಾವ್ಯ ರಾಮಾಯಣದ ಪಾರಾಯಣ ಅಗತ್ಯ. ಪ್ರತಿದಿನವೂ ಇದನ್ನು ನಿರ್ವಹಿಸಿದರೆ, ಕ್ಲೇಶಗಳು ಪರಿಹಾರವಾಗುತ್ತವೆ. ಬದುಕಿಗೆ ಶ್ರೇಯಸ್ಸಾಗುತ್ತದೆ. ರಾಮಾಯಣ ಓದುವುದರಿಂದ ಧರ್ಮ, ಅರ್ಥ, ಕಾಮ, ಮೋಕ್ಷ ಪಡೆಯಲು ಸಾಧ್ಯ. ರಾಮಾಯಣ, ಮಹಾಭಾರತ ಮತ್ತು ಭಾಗವತವನ್ನು ಎಲ್ಲರೂ ಓದುವುದು ಅಗತ್ಯ ಎಂದು ಹೇಳಿದರು.

ಮಹಾಮಂಡಲ ಅಧ್ಯಕ್ಷ ಆರ್.ಎಸ್. ಹೆಗಡೆ, ಮಂಗಳೂರು ಹೋಬಳಿಯ ಮೂರು ಮಂಡಲಗಳ ಅಧ್ಯಕ್ಷರಾದ ಗಣೇಶ್ ಮೋಹನ ಕಾಶಿಮಠ, ಬಾಲಸುಬ್ರಹ್ಮಣ್ಯ ಭಟ್, ಹೇರಂಭ ಶಾಸ್ತ್ರಿ ಉಪಸ್ಥಿತರಿದ್ದರು, ಸೇವಾ ಸಮಿತಿ ಅಧ್ಯಕ್ಷ ಹಾರಕೆರೆ ನಾರಾಯಣ ಭಟ್ ಸ್ವಾಗತಿಸಿದರು. ಉದಯಶಂಕರ ನೀರ್ಪಾಜೆ ಮತ್ತು ಸತ್ಯ ಸಿಗಂದೂರು ಕಾರ್ಯಕ್ರಮ ನಿರೂಪಿಸಿದರು.

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ಡ್ರಗ್ಸ್ ಮಾಫಿಯಾ ; ಆದಿತ್ಯ ಆಳ್ವ ನಿವಾಸಕ್ಕೆ ಸಿಸಿಬಿ ಪೋಲಿಸರು ದಾಳಿ

Harshitha Harish

ಚಂದನ ಸಾಹಿತ್ಯ ವೇದಿಕೆ ; ಕನ್ನಡ ರಾಜ್ಯೋತ್ಸವ ಕವಿಗೋಷ್ಠಿ ಕಾರ್ಯಕ್ರಮ

Harshitha Harish

ಫಿಲೋಮಿನಾದಲ್ಲಿ ಸಾವಯವ ಕಸ ನಿರ್ವಹಣೆ ಕುರಿತು ಕಾರ್ಯಾಗಾರ

Upayuktha

Leave a Comment