ನಗರ ಸ್ಥಳೀಯ

ಒಡಿಯೂರು ಶ್ರೀಗಳ ಷಷ್ಟ್ಯಬ್ದಿ ಪ್ರಯುಕ್ತ ‘ಶ್ರೀರಾಮ- ಹನುಮ’ ತಾಳಮದ್ದಳೆ

ಮಂಗಳೂರು: ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಯವರ ಷಷ್ಠ್ಯಬ್ಧಿ ಪ್ರಯುಕ್ತ ಮಂಗಳೂರು ಸಮಿತಿ ವತಿಯಿಂದ ಸಪ್ತ ಕಾರ್ಯಕ್ರಮಗಳ ಆರಂಭೋತ್ಸವವನ್ನು ಮಂಗಳಾದೇವಿ ದೇವಸ್ಥಾನದ ಕಲಾಮಂಟಪದಲ್ಲಿ ಏರ್ಪಡಿಸಲಾಗಿತ್ತು.

ಈ ಸಂದರ್ಭ ಯಕ್ಷಾಂಗಣ ಮಂಗಳೂರು ಸಂಯೋಜನೆಯಲ್ಲಿ ‘ಶ್ರೀರಾಮ – ಹನುಮ’ ಯಕ್ಷಗಾನ ತಾಳಮದ್ದಳೆ ಜರಗಿತು. ಹಿಮ್ಮೇಳದಲ್ಲಿ ಭವ್ಯಶ್ರೀ ಕುಲ್ಕುಂದ (ಭಾಗವತರು), ಕೃಷ್ಣ ಪ್ರಕಾಶ್ ಉಳಿತ್ತಾಯ (ಮೃದಂಗ), ಮಯೂರ್ ನಾಯಗ (ಚೆಂಡೆ) ಭಾಗವಹಿಸಿದ್ದರು.

ಅರ್ಥಧಾರಿಗಳಾಗಿ ಡಾ.ಎಂ. ಪ್ರಭಾಕರ ಜೋಶಿ (ಹನುಮಂತ), ಭಾಸ್ಕರ ರೈ ಕುಕ್ಕುವಳ್ಳಿ (ಶ್ರೀರಾಮ), ಜಬ್ಬಾರ್ ಸಮೋ ಸಂಪಾಜೆ (ಸುಗ್ರೀವ), ಕದ್ರಿ ನವನೀತ ಶೆಟ್ಟಿ (ವಿಶ್ವಾಮಿತ್ರ), ಡಾ.ದಿನಕರ ಎಸ್.ಪಚ್ಚನಾಡಿ (ಸೀತೆ), ಉಮೇಶ ಆಚಾರ್ಯ ಗೇರುಕಟ್ಟೆ (ನಾರದ) ಪಾಲ್ಗೊಂಡರು.

ಯಕ್ಷಾಂಗಣದ ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳಕುಮಾರ್ ಕಲಾವಿದರನ್ನು ಪರಿಚಯಿಸಿದರು. ಕೆ. ಲಕ್ಷ್ಮೀನಾರಾಯಣ ರೈ ಹರೇಕಳ ವಂದಿಸಿದರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ಉಪಯುಕ್ತ ನ್ಯೂಸ್ ಸಿಗ್ನಲ್‌ ಗ್ರೂಪಿಗೆ ಜಾಯಿನ್ ಆಗಲು ಈ ಲಿಂಕ್‌ ಬಳಸಿ

Related posts

ಮಂಗಳೂರಿನ ಎ.ಜೆ. ಆಸ್ಪತ್ರೆಯಲ್ಲಿ ಮಧುಮೇಹಿಗಳ ಕ್ಷೇಮ ಕೇಂದ್ರ ಆರಂಭ

Upayuktha

ಸ್ವ ಉದ್ಯಮ ಬಗ್ಗೆ ಸಂಪೂರ್ಣ ಮಾಹಿತಿ: ವಿವೇಕಾನಂದ ವಿದ್ಯಾರ್ಥಿಗಳಿಗೆ ವೆಬಿನಾರ್

Upayuktha

ವಿವಿ ಕಾಲೇಜು: ರಾಷ್ಟ್ರೀಯ ವಿಜ್ಞಾನ ದಿವಸದ ವಿನೂತನ ಆಚರಣೆ

Upayuktha