ಕತೆ-ಕವನಗಳು

ಶ್ರೀ ರಾಮಚಂದ್ರನಿಗೆ ಆರತಿ ಬೆಳಗೋಣ

ಆರತಿ ಬೆಳಗೋಣ.. ನಾವು ಆರತಿ ಬೆಳಗೋಣ ದಶರಥ ನಂದನ ಶ್ರೀರಾಮಚಂದ್ರನಿಗೆ
ಕೌಸಲ್ಯ ಮಾತೆಯ ಪುತ್ರನಿಗೆ ||ಆರತಿ ಬೆಳಗೋಣ||

ತಂದೆಯ ಮಾತಿಗೆ ತಾನು ಕೈಕೆಯ ವರವ ಸಲ್ಲಿಸೋದಕ್ಕೆ
ಶ್ರೀರಾಮಚಂದ್ರ ಕಾಡಿಗೆ ಹೋದನಾ
ತಮ್ಮ ಲಕ್ಷ್ಮಣ ,ಮಡದಿ ಸೀತೆಯ ಕರೆದುಕೊಂಡು
ಹರಿವ ನದಿಯ ದಾಟಿ ಹೋದನಾ …‌
ನಮ್ಮ ಶ್ರೀ ರಾಮಚಂದ್ರ
|| ಆರತಿ||

ಮಡದಿ ಸೀತೆಯ ಹುಡಿಕಿಕೊಂಡು
ಮುದುಕಿ ಶಬರಿಯ ಕಂಡುಕೊಂಡು
ಸುಗ್ರೀವನಿಗೆ ಮಾತು ಕೊಟ್ಟು
ವಾಲಿಯನ್ನು ಕೊಂದು ಬಿಟ್ಟು
ಅಂಗದನಿಗೆ ಅಭಯವಿತ್ತನಾ ನಮ್ಮ ಶ್ರೀ ರಾಮ ಚಂದ್ರ…
||ಆರತಿ||

ಸಾಗರಕ್ಕೆ ಸೇತು ಕಟ್ಟಿ
ಮರ್ಕಟ ಸೇನೆಯ ಕೂಡಿಕೊಂಡು
ಲಂಕೆಯನ್ನು ಸೇರಿಬಿಟ್ಟಾನಾ ನಮ್ಮ ಶ್ರೀ ರಾಮಚಂದ್ರ….
||ಆರತಿ||

ರಾವಣನನ್ನು ನಾಶ ಮಾಡಿ
ಸೀತೆಯನ್ನು ಕರೆದುಕೊಂಡು
ಅಯ್ಯೋಧ್ಯೇಯನ್ನು ಸೇರಿಬಿಟ್ಟಾನಾ ನಮ್ಮ ಶ್ರೀ ರಾಮಚಂದ್ರ …||ಆರತಿ||

ಹುಟ್ಟಿದ ಊರಿಗೆ ರಾಜನಾಗಿ
ಪ್ರಜೆಗಳನ್ನು ಪಾಲಿಸುತ್ತಾ
ನಮ್ಮ ಶ್ರೀರಾಮಚಂದ್ರ ಅಮರನಾದನಾ…||ಆರತಿ||

✍️ಸಂಧ್ಯಾ ಕುಮಾರಿ ಎಸ್ ವಿಟ್ಲ.ಬಂಟ್ವಾಳ ತಾಲೂಕು.ದ.ಕ.ಜಿಲ್ಲೆ.

Related posts

ಕವನ: ಕನ್ನಡ ರತ್ನ

Upayuktha

ಸಣ್ಣಕಥೆ: ಕಾಣೆಯಾಗಿದ್ದಾರೆ

Upayuktha

ಭೂ ತಾಯ ಐಸಿರಿ

Harshitha Harish