ಆರೋಗ್ಯ ಮನೆ ಮದ್ದು

ಅಸಿಡಿಟಿ ನಿವಾರಣೆಗೆ ಸಿಂಪಲ್ ರೆಮೆಡಿ, ಇಲ್ಲಿದೆ ನೋಡಿ…

ಈಗಿನ ಬಿಜಿ ಲೈಫ್ ನಲ್ಲಿ ಎಲ್ಲರೂ ಆರೋಗ್ಯದ ಕಡೆ ಗಮನ ಕೊಡುವುದು ಕಡಿಮೆ ಆಗಿದೆ, ಅದರಿಂದ ಆರೋಗ್ಯದ ಮೇಲೆ ತುಂಬಾ ದುಷ್ಪರಿಣಾಮ ಆಗುತ್ತದೆ. ಮೊದಲೆಲ್ಲ ಎಲ್ಲರ ಆಹಾರ ಪದ್ದತಿ ಚೆನ್ನಾಗಿತ್ತು. ಜೊತೆಗೆ ದೈಹಿಕ ಶ್ರಮ ಇರುತ್ತಾ ಇತ್ತು. ಆದರೆ ಈಗ ಜನರ ಆಹಾರ ಪದ್ದತಿ ಬದಲಾಗಿದೆ, ಜಂಕ್ ಫುಡ್ ಹೆಚ್ಚಾಗಿದೆ, ಟೈಮ್ ಸರಿಯಾಗಿ ಊಟ ತಿಂಡಿ ಮಾಡುವುದಿಲ್ಲ. ಅಲ್ಲದೆ ದೈಹಿಕ ಶ್ರಮ ಕೂಡ ಏನು ಇರುವುದಿಲ್ಲ. ಹಾಗೆಯೇ ಎಲ್ಲಾ ಕೆಲಸಗಳಲ್ಲೂ ಒತ್ತಡ ಹೆಚ್ಚಾಗಿದೆ, ಇದೆಲ್ಲದರ ಪರಿಣಾಮ ಆರೋಗ್ಯದ ಮೇಲೆ ಆಗುತ್ತದೆ, ಅದರಲ್ಲಿ ಒಂದು ಕಾಮನ್ ಪ್ರಾಬ್ಲಮ್ ಅಂದ್ರೆ ಅಸಿಡಿಟಿ ಅಥವಾ ಗ್ಯಾಸ್ಟ್ರಿಕ್.

ಈ ಅಸಿಡಿಟಿ ಅನ್ನೋದು ಒಬ್ಬೊಬ್ಬರಿಗೆ ಒಂದೊಂದು ರೀತಿ ಕಾಣಿಸಿಕೊಳ್ಳುತ್ತೆ, ಕೆಲವರಿಗೆ ಹೊಟ್ಟೆ ಉಬ್ಬರಿಸಿದ ಹಾಗೆ ಆಗುತ್ತೆ, ಇನ್ನೂ ಕೆಲವರಿಗೆ ಹುಳಿ ತೇಗು ಬರುತ್ತೆ, ಮತ್ತೂ ಕೆಲವರಿಗೆ ಎದೆಯುರಿ ಆಗುತ್ತೆ. ಈ ತರಹ ಯಾವಾಗಲೂ ತೊಂದರೆ ಆದಾಗ ಬೇರೆ ಕೆಲಸ ಗಳಲ್ಲಿ ತೊಡಗಿಸಿ ಕೊಳ್ಳುವುದು ಕಷ್ಟ ಆಗುತ್ತದೆ.

ಈ ಅಸಿಡಿಟಿಯನ್ನು ಕಂಟ್ರೋಲ್ ಮಾಡಲು ಎಷ್ಟೊಂದು ಸಲ ಔಷಧಿಯನ್ನು ಉಪಯೋಗಿಸುತ್ತಾರೆ, ಔಷಧಿ ತಗೊಂಡಾಗ ಕಡಿಮೆ ಆಗಿರುತ್ತೆ ನಂತರ ಮತ್ತೆ ಕಾಣಿಸಿ ಕೊಳ್ಳುತ್ತದೆ, ಎಷ್ಟು ಅಂತ ಔಷಧಿ ಉಪಯೋಗಿಸೋದು ಅಲ್ವಾ..

ಅದಕ್ಕಾಗಿ ಮನೆಯಲ್ಲೇ ಒಂದು ಸಿಂಪಲ್ ಮದ್ದು ತಯಾರಿಸಬಹುದು, ಬನ್ನಿ ಹೇಗೆ ಅಂತ ನೋಡೋಣ.
ಅದಕ್ಕೆ ಬೇಕಾಗುವ ಪದಾರ್ಥಗಳು
1. ಮೆಂತ್ಯೆ 1 ಕಪ್ (100ಗ್ರಾಂ )
2. ಅಜ್ವಾನ 1/2ಕಪ್ ( 50ಗ್ರಾಂ )
3. ಜೀರಿಗೆ, 1/4ಕಪ್ (25ಗ್ರಾಂ )

ಎಲ್ಲವನ್ನೂ ಬೇರೆ ಬೇರೆಯಾಗಿ ಡ್ರೈ ಆಗಿ ಹುರಿದುಕೊಳ್ಳಬೇಕು, ಇದು ತಣ್ಣಗಾದ ನಂತರ ಮಿಕ್ಸಿಗೆ ಹಾಕಿ ನುಣ್ಣಗೆ ಪುಡಿ ಮಾಡಿ ಏರ್ ಟೈಟ್ ಡಬ್ಬಿಯಲ್ಲಿ ಹಾಕಿಡಬೇಕು.

ಈ ಪುಡಿಯನ್ನು ಪ್ರತಿ ರಾತ್ರಿ ಬಿಸಿ ನೀರಿಗೆ 1 ಚಮಚ ಹಾಕಿ ಕುಡಿಯಬೇಕು. ಇದನ್ನು ಊಟ ಅದ ನಂತರ ಕುಡಿಯಬೇಕು. ನಂತರ ಏನನ್ನೂ ತಿನ್ನಬಾರದು, ಕುಡಿಯಬಾರದು. ಇದರಿಂದ ಜೀರ್ಣ ಕ್ರಿಯೆ ಚೆನ್ನಾಗಿ ಆಗುತ್ತದೆ, ಹಾಗೆಯೇ ಅಸಿಡಿಟಿ ಕೂಡ ಹತೋಟಿಗೆ ಬರುತ್ತದೆ.

ಧನ್ಯವಾದಗಳು.
ಪ್ರೀತಿಯಿಂದ ಅನು ಶೃತಿ ಯೂಟ್ಯೂಬ್ ಚಾನಲ್

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಈಗ ಲಭ್ಯ. ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

‘ಹೃದಯದ ಜಾತಕ ಹೇಳುವ ಹೋಲ್ಟರ್ ಮೋನಿಟರ್’

Upayuktha

ನಮ್ಮ ಆಹಾರ ಎಷ್ಟು ಸುರಕ್ಷಿತ?

Upayuktha

ಕೊರೊನಾ ಮತ್ತು ಡಯಾಬಿಟಿಸ್: ಎರಡೂ ಜತೆಯಾದರೆ ಅಪಾಯ ಹೆಚ್ಚು

Upayuktha

Leave a Comment

error: Copying Content is Prohibited !!