ಸ್ಥಳೀಯ

ಗಾಯಕ ಜಗದೀಶ್ ಆಚಾರ್ಯ ಪುತ್ತೂರು ಅವರ ಶ್ರೀ ಆಂಜನೇಯ ಸ್ವಾಮಿ ಭಕ್ತಿಗೀತೆ ವಿಡಿಯೋ ಆಲ್ಬಂ ಅ.18 ರಂದು ಬಿಡುಗಡೆಗೊಳ್ಳಲಿದೆ

ಪುತ್ತೂರು: ತಾಲೂಕಿನ ಖ್ಯಾತ ಆರ್ಯಭಟ ಪ್ರಶಸ್ತಿ ಗಾಯಕರು ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಾಗಿರುವ ಜಗದೀಶ್ ಆಚಾರ್ಯ ಪುತ್ತೂರು ಅವರ ಶ್ರೀ ಆಂಜನೇಯ ಸ್ವಾಮಿ ಸತತ ಭಜನಾ ನಿರತಾ ಭಕ್ತಿಗೀತೆ ವಿಡಿಯೋ ಆಲ್ಬಂ ಸಾಂಗ್ ಅಕ್ಟೋಬರ್ 18 ರಂದು ಆಸ್ಟ್ರೇಲಿಯಾದ ಸಿಡ್ನಿಯ ಶ್ರೀ ವೆಂಕಟ ಕೃಷ್ಣ ವೃಂದಾವನ ದಲ್ಲಿ ನಾಳೆ ಬೆಳಗ್ಗೆ ಬಿಡುಗಡೆಗೊಳ್ಳಲಿದೆ.

 

 

ಜಗದೀಶ್ ಆಚಾರ್ಯ ಪುತ್ತೂರು ನಿರ್ದೇಶಿಸಿ ಹಾಗೂ ಸಂಗೀತ ನಿರ್ದೇಶನ ಮಾಡಿ ಹಾಡಿರುವ ಶ್ರೀ ಆಂಜನೇಯ ಸ್ವಾಮಿ ಸತತ ಭಜನಾ ನಿರತಾ ಭಕ್ತಿಗೀತೆ ಯು ಶ್ರೀ ವಜ್ರದೇಹಿ ಪ್ರಸಾದ ಧ್ವನಿ ಸುರುಳಿಯಲ್ಲಿ ಮೂಡಿ ಬಂದಿದೆ.

 

ಈ ಭಕ್ತಿಗೀತೆಯ ವಿಡಿಯೋ ಆಲ್ಬಂ ಚಿತ್ರೀಕರಣವು ಕಾರಿಂಜದಲ್ಲಿ ನಡೆಸಿದ್ದು, ಚೆನ್ನಾಗಿ ಮೂಡಿ ಬಂದಿದೆ. ಈ ಭಕ್ತಿಗೀತೆಯಲ್ಲಿ ರಾಮನ ಪಾತ್ರದಲ್ಲಿ ಬೇಬಿ ಚೈತನ್ಯ ಬಿ ಎನ್ ಉರುವಲು, ಹಾಗೂ ಬಾಲ ಹನುಮಂತನ ಪಾತ್ರದಲ್ಲಿ ಲಾಸ್ಯ ಎಕ್ಕೂರು ಮಂಗಳೂರು, ಸೀತೆಯ ಪಾತ್ರದಲ್ಲಿ ನಿಶ್ಮಾ ಎಸ್ ಶೆಟ್ಟಿ ಮಂಗಳೂರು, ಲಕ್ಷ್ಮಣನಾಗಿ ಚುಕ್ಕಿ ವಿಟ್ಲ, ಹಾಗೂ ಹನುಮಂತನ ಪಾತ್ರದಲ್ಲಿ ತ್ರಿಶೂಲ್ ಪಿ ಹೆಗ್ಡೆ ಮೂಡು ಬಿದ್ರೆ, ಹಾಗೂ ಜೊತೆಗೆ ಪುಟಾಣಿ ಮಕ್ಕಳು ಭಾಗವಹಿಸಿದ್ದಾರೆ.

ಹಾಗೆಯೇ ಅರುಣ್ ರೈ ಮತ್ತು ವಗ್ಗ ನಾಗೇಶ್ ಛಾಯಾಗ್ರಹಣ ಮಾಡಿದ್ದಾರೆ. ಸಂಕಲನ ಜೆಪಿ ಬಂದ್ಯೋಡ್ ಹಾಗೆಯೇ ವಸ್ತ್ರವಿನ್ಯಾಸ ಕಲೆ ಪ್ರೇಮ್ ರಾಜ್ ಆರ್ಲ ಪದವು ಅವರು ಸಹಕರಿಸಿದ್ದಾರೆ.

Related posts

ಭಾರೀ ಗಾಳಿ ಮಳೆ: ಕಾಸರಗೋಡು ಉಪಜಿಲ್ಲಾ ಕಲೋತ್ಸವದ ಪೆಂಡಾಲ್‌ ಕುಸಿತ, ಅದೃಷ್ಟವಶಾತ್‌ ತಪ್ಪಿದ ದುರಂತ

Upayuktha

‘ಘನವಸ್ತುಗಳ ಭೌತಶಾಸ್ತ್ರೀಯ ಗುಣಗಳು’ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ವಿಚಾರಸಂಕಿರಣ

Upayuktha

ಪ್ರತಿಯೊಬ್ಬರಿಗೂ ವಿಪತ್ತು ನಿರ್ವಹಣೆ ತರಬೇತಿ ಅಗತ್ಯ: ಡಾ. ಚೂಂತಾರು

Upayuktha

Leave a Comment