ಜಿಲ್ಲಾ ಸುದ್ದಿಗಳು

ಸಿರಿಗನ್ನಡ ವೇದಿಕೆ ದಕ್ಷಿಣ ಕನ್ನಡ ಘಟಕದ ದೃಶ್ಯಕವನ ಸ್ಪರ್ಧೆ ೨೦೨೦.

 

 

ದೃಶ್ಯ ಕವನ ಸ್ಪರ್ಧೆ

ಸಿರಿಗನ್ನಡ ವೇದಿಕೆ ದಕ್ಷಿಣಕನ್ನಡ ಜಿಲ್ಲಾ ಘಟಕ ಮತ್ತು ಮಹಿಳಾ ಘಟಕ ಜಂಟಿಯಾಗಿ ದೃಶ್ಯ ಕವನ ಎಂಬ ವಿನೂತನ ಕವನ ಸ್ಪರ್ಧೆಯನ್ನು ಆಯೋಜಿಸುತ್ತಿದೆ. ಕವಿಗಳು ತಾವು ರಚಿಸಿರುವ ಕವನವನ್ನು ವಾಚಿಸಿ, ಅದಕ್ಕೆ ಸರಿಹೊಂದುವ ದೃಶ್ಯವನ್ನು ಸಂಯೋಜಿಸಿ, ಅದರ ವಿಡಿಯೋವನ್ನು ನಮಗೆ ಕಳುಹಿಸಿ ಕೊಡಬೇಕು.

ಬಳಿಕ ಅದನ್ನು ನಾವು Youtube ಗೆ ಸೇರಿಸಿ ಅದರ ಕೊಂಡಿಯನ್ನು ಕಳುಹಿಸುತ್ತೇವೆ. ಕವಿಗಳು ಅದನ್ನು ತಮ್ಮ ವಿವಿಧ ಸಾಮಾಜಿಕ ಜಾಲತಾಣಗಳ ಮೂಲಕ ಪ್ರಸರಿಸಬೇಕು. ನಾವು ನೀಡುವ ದಿನಾಂಕದ ಒಳಗೆ ಅತೀ ಹೆಚ್ಚು ಪ್ರಸಾರ ಗೊಂಡ ದೃಶ್ಯ ಕವನಗಳನ್ನು ಬಹುಮಾನಕ್ಕೆ ಆರಿಸಲಾಗುವುದು.

* ದೃಶ್ಯ ಕವನಗಳನ್ನು ಕಳುಹಿಸಲು ಕೊನೆಯ ದಿನಾಂಕ ಆಗಸ್ಟ್ 31.
* ಕವನಗಳು ಪರಿಸರ, ವನಸಿರಿ, ಕೃಷಿ, ರೈತ, ನೀರು ಇತ್ಯಾದಿಗಳಿಗೆ ಸಂಬಂಧಪಟ್ಟಿರಬೇಕು.
* ಗರಿಷ್ಠ ೫ ನಿಮಿಷಗಳು.
* ಭಾಗವಹಿಸುವ ಸ್ಪರ್ಧಿಗಳು ತಮ್ಮ ಹೆಸರು ಮತ್ತು ಊರನ್ನು ಹೇಳಿದ ಬಳಿಕ ಈ ಕೆಳಗಿನ ವಾಕ್ಯವನ್ನು ಆರಂಭದಲ್ಲಿ ಕಡ್ಡಾಯವಾಗಿ ಹೇಳಬೇಕು.

“ಸಿರಿಗನ್ನಡ ವೇದಿಕೆ ದಕ್ಷಿಣ ಕನ್ನಡ ಘಟಕದ ದೃಶ್ಯಕವನ ಸ್ಪರ್ಧೆ ೨೦೨೦.

ದೃಶ್ಯ ಕವನಗಳನ್ನು ಕಳುಹಿಸಬೇಕಾದ ವಾಟ್ಸಾಪ್ ಸಂಖ್ಯೆ
9448732414
ಡಾ ರಾಜೇಶ್ ಬೆಜ್ಜಂಗಳ. ಅಧ್ಯಕ್ಷರು, ಸಿರಿಗನ್ನಡ ವೇದಿಕೆ. ದಕ್ಷಿಣ ಕನ್ನಡ ಜಿಲ್ಲೆ

ಶ್ರೀಮತಿ ವಸಂತ ಲಕ್ಷ್ಮಿ, ಅಧ್ಯಕ್ಷರು,‌ಮಹಿಳಾ ಘಟಕ, ಸಿರಿಗನ್ನಡ ವೇದಿಕೆ , ದಕ್ಷಿಣ ಕನ್ನಡ ಜಿಲ್ಲೆ

Related posts

ಅವಳಿ-ಜವಳಿ ಮಕ್ಕಳಿಬ್ಬರ ಎಸ್ಎಸ್ಎಲ್ ಸಿ ಫಲಿತಾಂಶ ಸೇಮ್ ಟು ಸೇಮ್

Harshitha Harish

ಎಸ್‌ಎಸ್‌ಎಲ್‌ಸಿ : ದ.ಕ ಜಿಲ್ಲೆಯಲ್ಲಿ ಪರೀಕ್ಷೆ ಬರೆಯಲಿರುವ 30,835 ವಿದ್ಯಾರ್ಥಿಗಳು

Upayuktha

ಎಸ್ಎಸ್ಎಲ್‌ಸಿ ಪರೀಕ್ಷೆ: ದ.ಕ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿ

Upayuktha

Leave a Comment

error: Copying Content is Prohibited !!