ನಿಧನ ಸುದ್ದಿ

ಸಿರಿಗನ್ನಡ ವೇದಿಕೆಯ ರಾಜ್ಯಾಧ್ಯಕ್ಷ ಎಂ.ಎಸ್ ವೆಂಕಟರಾಮಯ್ಯ ನಿಧನ

ಬೆಂಗಳೂರು: ಸಿರಿಗನ್ನಡ ವೇದಿಕೆಯ ರಾಜ್ಯಾಧ್ಯಕ್ಷರಾದ ಎಂ.ಎಸ್ ವೆಂಕಟರಾಮಯ್ಯ ಅವರು ವಿಧಿವಶರಾಗಿದ್ದಾರೆ.

ಅವರೊಂದಿಗೆ ಆತ್ಮೀಯ ಒಡನಾಟ ಹೊಂದಿದ್ದ ಕಾಸರಗೋಡಿನ ಸಾಹಿತಿ ವಿ.ಬಿ ಕುಳಮರ್ವ ಅವರು ವೆಂಕಟರಾಮಯ್ಯ ಅವರನ್ನು ಈ ರೀತಿ ಸ್ಮರಿಸಿಕೊಂಡಿದ್ದಾರೆ.
*****
ಆತ್ಮೀಯ ಬಂಧುಗಳಾದ ಎಂ.ಎಸ್.ವೆಂಕಟರಾಮಯ್ಯನವರು ಕನ್ನಡದ ಒಬ್ಬ ಶಕಪುರುಷರು. ಅವರಂಥವರು ವಿರಳ. ಅವರು ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತರಾದವರಲ್ಲ. ನಮ್ಮ ಕೇರಳದ ಗಡಿನಾಡು ಕಾಸರಗೋಡಿನೊಂದಿಗೆ ಅವರಿಗಿದ್ದ ಸಂಬಂಧ ಅವಿನಾಭಾವವೇ ಸರಿ. ಕಾಸರಗೋಡು ಕನ್ನಡನಾಡಿನ ಹೃದಯ.ಆ ಹೃದಯವೇ ಇಂದು ಕೇರಳದ ಪಾಲಾಗಿದೆ ಎಂದು ಹಲುಬುತ್ತಾ ಇದ್ದವರು. ನನ್ನ ಒಬ್ಬ ಹಿರಿಯಣ್ಣನಾಗಿದ್ದ ಶ್ರೀಯುತರು ಅದೆಷ್ಟೋ ಸಲ ಕಾಸರಗೋಡಿನ ಕುಂಬ್ಳೆಯಲ್ಲಿರುವ ನಮ್ಮ ಮನೆಗೆ ಬಂದು ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಮಾರ್ಗದರ್ಶನ ಮಾಡುತ್ತಿದ್ದರು. ನನ್ನ ಮಕ್ಕಳ ಮೇಲೂ ಅವರಿಗೆ ಬಹಳ ಮಮತೆ. ಅವರ ನುಡಿ- ನಡೆ ನೇರವಾಗಿತ್ತು. ಮೃದು ಹೃದಯದ ಸರಳ ಸಜ್ಜನಿಕೆ ಅವರ ವ್ಯಕ್ತಿತ್ವ.

ಕಾಸರಗೋಡು ಎಂದರೆ ಅವರ ಸ್ವಂತ ಮನೆಯಿದ್ದ ಹಾಗೆ ಎನ್ನುತ್ತಿದ್ಷ ಅವರು ಕಾಸರಗೋಡಿನ ಕುರಿತು ಮೂರ್ನಾಲ್ಕು ಗ್ರಂಥಗಳನ್ನೇ ರಚಿಸಿದ್ದಾರೆ. ಒಂದೇ ಮಾತಿನಲ್ಲಿ ಹೇಳುವುದಾದರೆ ಅವರು ನಮ್ಮ ಕಾಸರಗೋಡಿನ ಕನ್ನಡಿಗರ ಕಣ್ಮಣಿಯಾಗಿದ್ದರು. ನಮ್ಮ ಗುರುಗಳಾದ ನಾಡೋಜ ಡಾ. ಕಯ್ಯಾರ ಕಿಞ್ಞಣ್ಣ ರೈಗಳೊಂದಿಗೆ ಶ್ರೀಯುತರಿಗೆ ನಿಕಟವಾದ ಬಾಂಧವ್ಯವಿತ್ತು. ಸದಾಕಾಲ ಕನ್ನಡಕ್ಕಾಗಿ ಮಿಡಿಯುತ್ತಿದ್ದ ಅವರ ಹೃದಯ ಇಂದು ಸ್ತಬ್ದವಾಗಿದೆ.
-ವಿ.ಬಿ ಕುಳಮರ್ವ, ಕುಂಬಳೆ

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Related posts

ಹೃದಯಾಘಾತ: ದುಬೈನಲ್ಲಿ ವಾಮಂಜೂರು ಮೂಲದ 28 ವರ್ಷದ ಯುವಕ ಸಾವು

Upayuktha

ಆಕಸ್ಮಿಕ ಬೆಂಕಿಗೆ ರೈತ ಸಜೀವ ದಹನ

Harshitha Harish

ಮಲಯಾಳಂ ಚಿತ್ರರಂಗ ದ ಖ್ಯಾತ ಸಾಹಿತಿ ಮತ್ತು ಕವಿ ಅನಿಲ್ ಪಣಚೂರನ್ ನಿಧನ

Harshitha Harish