ಪ್ರಮುಖ ಸ್ಥಳೀಯ

ಮೋದಿ, ಟ್ರಂಪ್ ಜತೆ ಸೆಲ್ಫಿ ತೆಗೆದು ಮಿಂಚಿದ ಶಿರಸಿಯ ಬಾಲಕ ಸಾತ್ವಿಕ್ ಹೆಗಡೆ

ಹೌಡಿ ಮೋದಿ ಕಾರ್ಯಕ್ರಮದಲ್ಲಿ ಪ್ರಧಾಣಿ ಮೋದಿ ಮತ್ತು ಅಧ್ಯಕ್ಷ ಟ್ರಂಪ್ ಜತೆ ಸೆಲ್ಫಿ ತೆಗೆಸಿಕೊಂಡ ಶಿರಸಿ ಮೂಲದ ಸಾತ್ವಿಕ್ ಹೆಗಡೆ

ಮಂಗಳೂರು:

ಹ್ಯೂಸ್ಟನ್‌ನಲ್ಲಿ ಭಾನುವಾರ ರಾತ್ರಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಭಾಗವಹಿಸಿದ್ದ ‘ಹೌಡಿ ಮೋದಿ’ ಮೆಗಾ ಇವೆಂಟ್‌ನಲ್ಲಿ ಕನ್ನಡದ ಹುಡುಗನೊಬ್ಬ ಮಿಂಚಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವಿಶ್ವದ ಇಬ್ಬರು ಬಲಿಷ್ಠ ನಾಯಕರ ಜತೆಗೆ ನಿಂತು ಸೆಲ್ಫಿ ತೆಗೆದುಕೊಂಡಿರುವ ಈ ಬಾಲಕ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಸಾತ್ವಿಕ್ ಹೆಗಡೆ. ಈತ ಶಿರಸಿ ಮೂಲದ ಪ್ರಭಾಕರ ಹೆಗಡೆ ಮತ್ತು ಮೇಧಾ ಹೆಗಡೆ ದಂಪತಿಯ ಪುತ್ರ.

ಹೌಡಿ ಮೋದಿ ಕಾರ್ಯಕ್ರಮದಲ್ಲಿ ಯೋಗ ಪ್ರದರ್ಶನ ನೀಡಿದ ಈ ಬಾಲಕ, ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಟ್ರಂಪ್ ಜತೆ ಸೆಲ್ಫಿ ತೆಗೆದುಕೊಳ್ಳಲು ಬಯಸಿದ. ಅದನ್ನು ಉಭಯ ನಾಯಕರ ಬಳಿ ಹೇಳಿಯೂ ಬಿಟ್ಟ. ಅವರಿಬ್ಬರೂ ಖುಷಿಯಾಗಿ ಬಾಲಕನ ಜತೆ ಸೆಲ್ಫಿ ತೆಗೆಸಿಕೊಂಡು ಅವನ ಖುಷಿಯನ್ನೂ ಹೆಚ್ಚಿಸಿದರು. ಇಬ್ಬರೂ ದಿಗ್ಗಜರು ಸಾತ್ವಿಕ್ ಹೆಗಡೆಯ ಹೆಗಲ ಮೇಲೆ ಕೈಹಾಕಿ ಪೋಸ್ ಕೊಟ್ಟಿರುವ ಫೋಟೋ ವೈರಲ್ ಆಗಿದೆ.

Related posts

ವಿವೇಕಾನಂದ ಸ್ನಾತಕೋತ್ತರ ವಾಣಿಜ್ಯ ವಿಭಾಗದಿಂದ ‘ಗಾಂಧಿ ಸ್ಮೃತಿ’ ಕಾರ್ಯಕ್ರಮ

Upayuktha

ವೈದ್ಯ ಲೋಕದ ಮೂರನೇ ಕಣ್ಣು-ಎಕ್ಸ್‌ರೇ: ಇಂದು (ನ.8) ವಿಶ್ವ ವಿಕಿರಣ ಶಾಸ್ತ್ರದಿನ

Upayuktha

ಉಚಿತ ವಿದ್ಯುತ್ ಸಂಪರ್ಕ ಉದ್ಘಾಟಿಸಿದ ಶಾಸಕ ಡಾ.ಭರತ್ ಶೆಟ್ಟಿ

Upayuktha