ಕ್ಷೇತ್ರಗಳ ವಿಶೇಷ ರಾಜ್ಯ

ಶಿರಸಿ ಶ್ರೀ ಮಾರಿಕಾಂಬಾ ದೇವಿಯ ಜಾತ್ರೆಗೆ ಹರಿದು ಬಂದ ಜನಸಾಗರ

ಶಿರಸಿ: ನಾಡಿನಲ್ಲೆಲ್ಲ ಪ್ರಸಿದ್ಧವಾದ ಶಿರಸಿಯ ಶ್ರೀ ಮಾರಿಕಾಂಬಾ ದೇವಿಯ ದ್ವಿವಾರ್ಷಿಕ ಎಂಟು ದಿನಗಳ ಜಾತ್ರಾ ಮಹೋತ್ಸವಕ್ಕೆ ಈಗ ವಿಧ್ಯುಕ್ತ ನಾಂದಿಯಾಗಿದೆ. ನಗರದ ಬಿಡಕಿ ಬಯಲಿನ ಭವ್ಯವಾದ ಜಾತ್ರಾ ಮಂಟಪದ ಗದ್ದುಗೆಯಲ್ಲಿ ಶ್ರೀ ಮಾರಿಕಾಂಬೆ ವಿರಾಜಮಾನಳಾಗಿದ್ದಾಳೆ.

ಬುಧವಾರ ಸಂಜೆಯಿಂದಲೇ ಸಾವಿರಾರು ಭಕ್ತಾದಿಗಳು ಭೇಟಿ ನೀಡುತ್ತಿದ್ದಾರೆ. ಮೊದಲ ದಿನ ಮಧ್ಯರಾತ್ರಿಯವರೆಗೂ ಜಾತ್ರಾ ಗದ್ದುಗೆಯ ಎದುರಿನಿಂದ ಸಹಸ್ರ ಸಂಖ್ಯೆಯ ಭಕ್ತರು ದೇವಿಯ ದರ್ಶನ ಪಡೆದರು.

ಬೆಳ್ಳಂಬೆಳಗ್ಗೆಯೇ ಉದ್ದದ ಸಾಲು

ಇಂದು ಗುರುವಾರ ಬೆಳಗ್ಗೆ ಚುಮುಚುಮು ಚಳಿಯ ಮುಂಜಾನೆಯ ವಾತಾವರಣದ ಮಧ್ಯೆಯೇ ದೇವಿಯ ದರ್ಶನಕ್ಕೆ ಭಕ್ತರು ಸಾಲುಗಟ್ಟತೊಡಗಿದರು. ಬಿಸಿಲು ಏರುತ್ತಿದ್ದಂತೆಯೇ ಭಕ್ತಾದಿಗಳ ಭೇಟಿ ಕೊಡುವವರ ಸಂಖ್ಯೆಯೂ ಹೆಚ್ಚಾಯಿತು.

ಸರತಿ ಸಾಲಿನಲ್ಲಿ ನಿಲ್ಲುವವರಿಗೆ ಅರ್ಧ ಕಿಲೋಮೀಟರ್ ದೂರದವರೆಗೆ ನೆರಳಿನ ವ್ಯವಸ್ಥೆ ಮಾಡಲಾಗಿದೆ. ಕ್ಯೂನಲ್ಲಿ ನಿಂತವರಿಗೆ ಅಲ್ಲಲ್ಲಿ ತಂಪು ಪಾನೀಯ ಮತ್ತು ಕುಡಿಯುವ ನೀರಿನ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ.

ಹಣ್ಣು-ಕಾಯಿ, ಉಡಿ ತುಲಾಭಾರ ಹರಕೆಗಳು ಇಂದು ಪ್ರಾರಂಭವಾಗಿವೆ. ಭಕ್ತರು ಭಕ್ತಿ ಭಾವದಿಂದ ಸೇವೆ ಸಮರ್ಪಣೆ ಮಾಡುತ್ತಿದ್ದಾರೆ.

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ಡಿ. ವೀರೇಂದ್ರ ಹೆಗ್ಗಡೆಯವರ 53ನೇ ಪಟ್ಟಾಭಿಷೇಕ ವರ್ಧಂತಿಗೆ ಪೇಜಾವರ ಶ್ರೀ ಶುಭಾನುಗ್ರಹ

Upayuktha

ತುಲಾ ಸಂಕ್ರಮಣ: ಮುಜುಂಗಾವು ಕ್ಷೇತ್ರದಲ್ಲಿ ನಾಳೆ ಕಾವೇರಿ ತೀರ್ಥಸ್ನಾನ

Upayuktha

ತೆರಿಗೆದಾರರಾದ ನಮಗೆ ಸರ್ಕಾರಿ ಸೌಲಭ್ಯ ಪಡೆಯುವ ಹಕ್ಕಿದೆ: ಸಚ್ಚಿದಾನಂದ ಮೂರ್ತಿ

Upayuktha

Leave a Comment