ರಾಜ್ಯ

ಮಾಸ್ತಿ ಪ್ರಶಸ್ತಿ ಗೆ ಸಾಹಿತ್ಯ ಕ್ಷೇತ್ರದ ಆರು ಸಾಧಕರು ಆಯ್ಕೆ

ಬೆಂಗಳೂರು: ಕನ್ನಡದ ಆಸ್ತಿ, ಮಾಸ್ತಿ ವೆಂಕಟೇಶ್ ಅಯ್ಯಂಗಾರ್‌ ಅವರ ಸ್ಮರಣಾರ್ಥ, ಮಾಸ್ತಿ ವೆಂಕಟೇಶ್‌ ಅಯ್ಯಂಗಾರ್‌ ಟ್ರಸ್ಟ್ ವತಿಯಿಂದ ನೀಡಲಾಗುವ ʼಮಾಸ್ತಿ ಪ್ರಶಸ್ತಿʼ ಗೆ ಆರು ಜನ ಸಾಹಿತ್ಯ ಕ್ಷೇತ್ರದ ಸಾಧಕರನ್ನು ಆಯ್ಕೆ ಮಾಡಲಾಗಿದೆ.

ಶಿಶು ಸಾಹಿತ್ಯಕ್ಕೆ ಸಂಬಂಧಿಸಿದಂತೆ ಸಂಧ್ಯಾ ಎಸ್‌ ಪೈ, ವಿಮರ್ಶಾ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಎಸ್.‌ ಆರ್.‌ ವಿಜಯ ಶಂಕರ್‌, ಸಂಶೋಧನೆಗೆ ಸಂಬಂಧಿಸಿದಂತೆ ಪುರುಷೋತ್ತಮ ಬಿಳಿಮಲೆ ಅವರನ್ನು ಆಯ್ಕೆ ಮಾಡಲಾಗಿದೆ. ಕಾವ್ಯಕ್ಕೆ ಸಂಬಂಧಿಸಿದಂತೆ ಸುಬ್ರಾಯ ಚೊಕ್ಕಾಡಿ, ಕಥೆ- ಕೇಶವ ರೆಡ್ಡಿ ಹಂದ್ರಾಳ, ಸೃಜನಶೀಲ ಸಾಹಿತ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸ. ರಘುನಾಥ ಅವರನ್ನು ಟ್ರಸ್ಟ್‌ ಆಯ್ಕೆ ಮಾಡಿದೆ.

ಮಾಸ್ತಿ ಪ್ರಶಸ್ತಿಯು 25 ಸಾವಿರ ರೂ. ನಗದು, ಮಾಸ್ತಿ ಪ್ರಶಸ್ತಿ ಫಲಕ, ಹಾಗೂ ಸಮ್ಮಾನವನ್ನು ಒಳಗೊಂಡಿದೆ. ಪ್ರಶಸ್ತಿ ಪ್ರದಾನ ಸಮಾರಂಭ ಮಾರ್ಚ್‌ 27 ರಂದು ಬೆಂಗಳೂರಿನ ಭಾರತೀಯ ವಿದ್ಯಾಭವನ ಸಭಾಂಗಣದಲ್ಲಿ ನಡೆಯಲಿದೆ.

Related posts

ದ.ಕ., ಕಾಸರಗೋಡು ಜಿಲ್ಲೆಯಲ್ಲಿ ಎರಡು, ಉಡುಪಿಯಲ್ಲಿ ಒಂದು ಕೊರೊನಾ ಪಾಸಿಟಿವ್

Upayuktha

ಬೆಳ್ತಂಗಡಿ: ನಕಲಿ, ಅನರ್ಹ ಪಡಿತರ ಚೀಟಿ ಹೊಂದಿರುವವರ ಪತ್ತೆ ಕಾರ್ಯಾಚರಣೆ ಚುರುಕು

Sushmitha Jain

ವನವಾಸಿ ಕಲ್ಯಾಣ ಅಖಿಲ ಭಾರತ ಅಧ್ಯಕ್ಷರಾಗಿ ರಾಮಚಂದ್ರ ಖರಾಡೆ

Upayuktha