ಕತೆ-ಕವನಗಳು

*ಸ್ಕಂದ ಮಾತೆ*

 

ಐದನೇ ದಿನವದು ಸ್ಕಂದಮಾತೆಗೆ ವಿವಿಧ ಬಗೆಯ ಹೂಗಳಿಂದ ಅರ್ಚಿಸುವರು


ಭಕ್ತಗಣವು..

ಕಾರ್ತಿಕೇಯನ ಮಾತೆಯು, ಸಿಂಹವಾಹನ ದೇವಿಯು, ಬುಧಗ್ರಹದ ಅಧಿಪತಿಯು, ಕೆಂಪು ಬಣ್ಣದ ಹೂವು ಇವಳಿಗೆ ಪ್ರಿಯವು..

ಸಂಪತ್ತಿನ ಅಧಿದೇವತೆ, ಪಂಚಮಿ ತಿಥಿಯಂದು
ಪೂಜಿಸಲ್ಪಡುವ
ದಿವ್ಯ ಮಾತೆ..

ಚತುರ್ಭುಜವ ಹೊಂದಿದಾಕೆ, ಒಂದು ಕೈಯಲ್ಲಿ ಸ್ಕಂದನನ್ನು, ಎರಡನೇ ಕೈಯಲ್ಲಿ ಕಮಲವನ್ನು ಹಿಡಿದಾಕೆ, ಒಂದು ಹಸ್ತದಲ್ಲಿ ಅಭಯವನ್ನು ನೀಡುವಾಕೆ..

ಹಾಲಿನಂತೆ ಬೆಳ್ಳಗಿನ ಶರೀರದಾಕೆ, ಪದ್ಮಾಸನಾ ದೇವಿ ಎಂದು ಹೆಸರು ಪಡೆದಾಕೆ, ಭಗವಂತ ಸ್ಕಂದನ ಮಾತೆಯಾಕೆ..

✍ *ನಾಗಶ್ರೀ. ಎಸ್. ಭಂಡಾರಿ* *ಮೂಡುಬಿದಿರೆ*
ಚಿತ್ರಕೃಪೆ : *ಮಾನಸ ಫೋಟೋಗ್ರಫಿ*

Related posts

ನಾಡ ಗೀತೆ: ಭಾರತ ಜನನಿ

Harshitha Harish

ಸಣ್ಣ ಕಥೆ: ಭಾವಗಳ ಅನುಕಂಪ

Upayuktha

ಸಮ್ಯಕ್ತ್ ಜೈನ್ ರಾಜ್ಯ ಮಟ್ಟದ ಕವಿಗೋಷ್ಠಿ ಯಲ್ಲಿ ಪ್ರಥಮ

Harshitha Harish

Leave a Comment