ನಗರ ಸ್ಥಳೀಯ

ಉಡುಪಿ: ಗರ್ಭಗುಡಿಯಲ್ಲಿದ್ದ ನಾಗರಹಾವಿನ ರಕ್ಷಣೆ

ಉಡುಪಿ: ಕುಂಜಿಬೆಟ್ಟು ಮೀನು ಮಾರುಕಟ್ಟೆ ರಸ್ತೆ ಬಳಿ ಇರುವ, ಚಾಮುಂಡಿಶ್ವೇರಿ ಗುಡಿಯ ಗರ್ಭಗುಡಿಯೊಳಗೆ, ಆಶ್ರಯ ಪಡೆದಿರುವ ನಾಗರಹಾವನ್ನು ರಕ್ಷಿಸಿರುವ ಘಟನೆ ಬುಧವಾರ ನಡೆದಿದೆ.

ಅರ್ಚಕ ವಿಘ್ನೇಶ್ ಅವರು ಪೂಜೆ ನೆರವೆರಿಸಲು ಗರ್ಭಗುಡಿಯೊಳಗೆ ಪ್ರವೇಶಿಸಿದಾಗ, ನಾಗರ ಹಾವು ವಿಗ್ರಹದ ಸನಿಹ ಮಲಗಿಕೊಂಡಿರುವುದು ಕಂಡುಬಂದಿದೆ. ತಕ್ಷಣ ಅರ್ಚಕರು, ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಅವರಿಗೆ ವಿಷಯ ಮುಟ್ಟಿಸಿದ್ದಾರೆ.

ತಕ್ಷಣ ಕಾರ್ಯಕರ್ತರು, ಹಾವು ಹಿಡಿಯಲು ಪರಿಣಿತಿ ಹೊಂದಿರುವ, ಅಂಬಾಗಿಲಿನ ಯು.ಬಿ.ನಾಗರಾಜ್ ಅವರ ಮೂಲಕ, ಮೂರು ಅಡಿ ಉದ್ದದ ನಾಗರಹಾವನ್ನು ಸೆರೆಹಿಡಿದು, ಸುರಕ್ಷಿತವಾಗಿ ಅರಣ್ಯ ಪ್ರದೇಶದಲ್ಲಿ ಬಿಡುಗಡೆಗೊಳಿಸಿದ್ದಾರೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ವಿವೇಕಾನಂದ ಕಾಲೇಜಿನಲ್ಲಿ ರಾಜ್ಯ ಮಟ್ಟದ ಐಟಿ-ಫೆಸ್ಟ್ ‘ಟೆಕ್ನೋತರಂಗ್ 2020’ಗೆ ಚಾಲನೆ

Upayuktha

ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದಿಂದ ಅಭಿನಂದನಾ ಸಮಾರಂಭ

Upayuktha

ಮುಖ್ಯ ಕೊಳವೆಯಲ್ಲಿ ಸೋರಿಕೆ: ಮಂಗಳೂರಿಗೆ ನಾಳೆ ನೀರಿಲ್ಲ

Upayuktha