ಪ್ರಮುಖ ರಾಜ್ಯ ಶಿಕ್ಷಣ

ಸಹಜ ಸುಗಂಧ: ಮನೆ ಕೆಲಸ ಮಾಡಿಕೊಂಡು ಓದಿಸಿದ ತಾಯಿ ಮಲ್ಲಮ್ಮನಿಗೆ ಹೆಮ್ಮೆ ತಂದ ಮಗ ಮಹೇಶ

ಎಸ್‌ಎಸ್‌ಎಲ್‌ಸಿಯಲ್ಲಿ ಶೇ 98.56 ಅಂಕ ಪಡೆದ ಸರಕಾರಿ ಶಾಲೆಯ ವಿದ್ಯಾರ್ಥಿ

ಹುಡುಗನ ಗುಡಿಸಲಿಗೆ ತೆರಳಿ ಅಭಿನಂದಿಸಿದ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌

ಬೆಂಗಳೂರು: ಓದುವ ಮಕ್ಕಳು ಯಾವ ಶಾಲೆಯಲ್ಲಿ ಕಲಿತರೂ ಚೆನ್ನಾಗಿ ಸಾಧನೆ ಮಾಡುತ್ತಾರೆ ಎಂಬುದಕ್ಕೆ ಮತ್ತೊಂದು ಉದಾಹರಣೆಯಾಗಿ ನಿಂತವನು ಈ ಹುಡುಗ.

ಬೆಂಗಳೂರಿನ ಜೀವನ್‌ಬಿಮಾ ನಗರದ ಕರ್ನಾಟಕ ಪಬ್ಲಿಕ್‌ ಶಾಲೆಯಲ್ಲಿ ಓದಿದ ಬಿ. ಮಹೇಶ್‌ ಎಸ್‌ಎಸ್‌ಎಲ್‌ಸಿಯಲ್ಲಿ ಶೇ 98.56ರಷ್ಟು ಅಂಕ ಗಳಿಸಿ ಕಠಿಣ ಪರಿಶ್ರಮಕ್ಕೆ ಬೆಲೆಯಿದೆ ಎಂಬುದನ್ನು ತೋರಿಸಿಕೊಟ್ಟಿದ್ದಾನೆ.

ದೂರದ ಯಾದಗಿರಿಯಿಂದ ಹೊಟ್ಟೆಪಾಡಿಗಾಗಿ ಕೂಲಿ ಅರಸಿಕೊಂಡು 6 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದ ಮಲ್ಲಮ್ಮ ಎಂಬವರ ಪುತ್ರ ಈತ. ಸದ್ಯ ಬೆಂಗಳೂರಿನ ಮಲ್ಲೇಶಪಾಳ್ಯದಲ್ಲಿ ವಾಸಿಸುತ್ತಿರುವ ಈ ಕುಟುಂಬಕ್ಕೆ ಮನೆ ಕೆಲಸದ ಕೂಲಿಯೇ ಜೀವನಾಧಾರ.

ಎಂತಹ ಕಠಿಣ ಪರಿಸ್ಥಿತಿ ಎದುರಾದರೂ ಮಗನನ್ನು ಚೆನ್ನಾಗಿ ಓದಿಸಿ ವಿದ್ಯಾವಂತನಾಗಿ ಮಾಡಬೇಕೆಂಬ ತಾಯಿಯ ಕನಸನ್ನು ಮಹೇಶ್‌ ವಿಫಲಗೊಳಿಸಿಲ್ಲ.

ಚಿಕ್ಕವನಿದ್ದಾಗಲೇ ತಂದೆಯನ್ನು ಕಳೆದುಕೊಂಡ ನನಗೆ ತಾಯಿಯೇ ಸರ್ವಸ್ವ. ನಾನು ಮುಂದೆ ದೊಡ್ಡವನಾಗಿ ಸ್ವಂತ ಕಾಲಮೇಲೆ ನಿಂತು ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂಬ ಕನಸು ಹೊಂದಿದ್ದೇನೆ. ಅದಕ್ಕೆ ಶಿಕ್ಷಣವೊಂದೇ ದಾರಿ ಎಂಬ ಅರಿವಾಗಿತ್ತು. ಹಾಗಾಗಿ ಕಷ್ಟಪಟ್ಟು ಅಧ್ಯಯನದಲ್ಲಿ ತೊಡಗಿದೆ. ಅದಕ್ಕೆ ತಕ್ಕ ಫಲಿತಾಂಶ ಬಂದಿದೆ ಎಂಬ ಖುಷಿಯಿದೆ’ ಎನ್ನುತ್ತಾನೆ ಮಹೇಶ್.

ನಾನು ಓದಿದ ಈ ಸರಕಾರಿ ಪಬ್ಲಿಕ್‌ ಶಾಲೆ ಯಾವ ಖಾಸಗಿ ಶಾಲೆಗೂ ಕಡಿಮೆಯಿಲ್ಲ. ವಿದ್ಯಾರ್ಥಿಗಳಿಗೆ ಯಾವುದೇ ಅನುಮಾನ ಬಂದರೂ ತಕ್ಷಣ ಅದನ್ನು ಪರಿಹರಿಸುವ ಉತ್ತಮ ಅಧ್ಯಾಪಕರು ಇಲ್ಲಿದ್ದಾರೆ ಎಂದು ಮಹೇಶ್‌ ಹೆಮ್ಮೆಯಿಂದ ಹೇಳುತ್ತಾನೆ.

ಗಣಿತ, ಹಿಂದಿ ಮತ್ತು ಕನ್ನಡದಲ್ಲಿ ಪೂರ್ಣ ಅಂಕಗಳನ್ನು (ಕ್ರಮವಾಗಿ 100, 100 ಮತ್ತು 125) ಈತ ಗಳಿಸಿರುವುದು ವಿಶೇಷವಾಗಿದೆ.

ಶಿಕ್ಷಣ ಸಚಿವ ಸುರೇಶ್ ಕುಮಾರ್‌ ಅವರಿಂದ ಅಭಿನಂದನೆ:

ಸರಕಾರಿ ಶಾಲೆಯಲ್ಲಿ ಓದಿ ಉತ್ತಮ ಅಂಕ ಪಡೆದು ಸಾಧನೆ ಮಾಡಿದ ಬಾಲಕ ಮಹೇಶ್‌ನ ಗುಡಿಸಲಿಗೆ ತೆರಳಿ ಶಿಕ್ಷಣ ಸಚಿವ ಸುರೇಶ್‌ ಕುಮಾರ್ ಅವರು ಇಂದು ಅಭಿನಂದನೆ ಸಲ್ಲಿಸಿದರು. ಅಲ್ಲದೆ 5,000 ರೂ.ಗಳ ನಗದು ಪುರಸ್ಕಾರ ನೀಡಿ ಗೌರವಿಸಿದರು. ಜತೆಗೆ ಆತನ ಮುಂದಿನ ವಿದ್ಯಾಭ್ಯಾಸಕ್ಕೆ ಅಗತ್ಯ ನೆರವು ನೀಡುವುದಾಗಿಯೂ ಭರವಸೆ ನೀಡಿದರು.

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್  App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ರೋಗಿಗಳ ಸಂಕಷ್ಟಕ್ಕೆ ನೆರವಾಗಿ- ವೈದ್ಯಕೀಯ ಸಚಿವ ಟ್ವೀಟ್

Harshitha Harish

ಉದ್ಯೋಗ ಮಾಹಿತಿ: ದ.ಕ ಜಿಲ್ಲೆ ಅಂಗನವಾಡಿ ಹುದ್ದೆಗಳಿಗೆ ನೇಮಕಾತಿ ಅರ್ಜಿ ಆಹ್ವಾನ

Upayuktha

ಗಣೇಶ ಬಂದ… ಕಾಯಿಕಡುಬು ತಿಂದ… ಚೌತಿಗೆ ಬಂದು ಹೋಗುವ ‘ಗಣಪತಿ’: ಆರಾಧನೆಯ ಪೂರ್ವಾಪರ

Upayuktha

Leave a Comment

error: Copying Content is Prohibited !!