ಉಡುಪಿ: ಜಗದ್ಗುರು ಶ್ರೀ ಮಧ್ವಾಚಾರ್ಯ ಸಂಸ್ಥಾನ ಶ್ರೀ ಸೋಸಲೆ ವ್ಯಾಸರಾಜ ಮಠಾಧೀಶರೂ ಜ್ಞಾನಿ ಶ್ರೇಷ್ಠರೂ ತಪೋನಿಧಿಗಳೂ ಆಗಿರುವ ಪರಮಪೂಜ್ಯ ಶ್ರೀ ಶ್ರೀ ವಿದ್ಯಾಶ್ರೀಶ ತೀರ್ಥ ಶ್ರೀಪಾದರು ಇಂದು ಉಡುಪಿ ನಗರಕ್ಕೆ ಸಮೀಪದ ಶಿವಳ್ಳಿ ಗ್ರಾಮದ ಪ್ರಾಚೀನವಾದ ಪೆರಂಪಳ್ಳಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ವರ್ಷಾವಧಿ ಉತ್ಸವದ ಸಂದರ್ಭದಲ್ಲಿ ಚಿತ್ತೈಸಿ ಶ್ರೀ ಮಹಾಲಿಂಗೇಶ್ವರ ದೇವರಿಗೆ ಮಂಗಳಾರತಿ ಬೆಳಗಿ ಬಳಿಕ ಶ್ರೀ ದೇವಳದ ವತಿಯಿಂದ ಅರ್ಪಿಸಲಾದ ಗುರುಪೂಜೆಯನ್ನು ಸ್ವೀಕರಿಸಿ ಶುಭಾನುಗ್ರಹ ಸಂದೇಶ ನೀಡಿ ಹರಸಿದರು.
ದೇವಳದ ವತಿಯಿಂದ ಶ್ರೀಗಳವರನ್ನು ಸಾಂಪ್ರದಾಯಿಕ ಗೌರವಗಳೊಂದಿಗೆ ಸ್ವಾಗತಿಸಲಾಯಿತು. ಬಳಿಕ ಶ್ರೀ ಮಠದ ಭಕ್ತರಾದ ಶ್ರೀ ವಾಸುದೇವ ಭಟ್ ಪೆರಂಪಳ್ಳಿ ಅವರ ಮನೆಗೂ ಭೇಟಿ ನೀಡಿ ಗೋಪೂಜೆ, ವೇದ ಗೀತೆ, ಮಹಾಭಾರತ ತಾತ್ಪರ್ಯ ನಿರ್ಣಯ, ಉಪನಿಷತ್ತು ಶ್ರೀ ಭಾಗವತ ಮೊದಲಾದಿ ಗ್ರಂಥಗಳಿಗೆ ಮಂಗಳಾರತಿ ಬೆಳಗಿ, ಮನೆಯ ವತಿಯಿಂದ ನೀಡಲಾದ ಗುರುಪೂಜೆಯನ್ನು ಸ್ವೀಕರಿಸಿ ಅನುಗ್ರಹಿಸಿದರು.
ರಾಘವೇಂದ್ರ ಭಟ್ ದಂಪತಿ ಬಾಲಕೃಷ್ಣ ಭಟ್ ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು.
(ಉಪಯುಕ್ತ ನ್ಯೂಸ್)
‘ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ಉಪಯುಕ್ತ ನ್ಯೂಸ್ ಸಿಗ್ನಲ್ ಗ್ರೂಪಿಗೆ ಜಾಯಿನ್ ಆಗಲು ಈ ಲಿಂಕ್ ಬಳಸಿ