ಕ್ರಿಕೆಟ್ ನಗರ ಸ್ಥಳೀಯ

ಸ್ಪಾರ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಮೆಂಟ್: ಕುಡ್ಲ ಕ್ರಿಕೆಟರ್ಸ್ ಗೆ ಪ್ರಶಸ್ತಿ

ಮಂಗಳೂರು: ಸ್ಪಾರ್ ಹೈಪರ್ ಮಾರ್ಕೆಟ್ ವತಿಯಿಂದ ಸ್ಪಾರ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿ ಶುಕ್ರವಾರ ಸಮಾಪನಗೊಂಡಿತು. ಅಂತಿಮ ಸುತ್ತಿನ ಹಣಾಹಣಿಯಲ್ಲಿ ಕುಡ್ಲ ಕ್ರಿಕೆಟರ್ಸ್ ತಂಡವು ‘ಥಂಡರ್ ಗಯ್ಸ್’ ತಂಡವನ್ನು ಮಣಿಸಿ 2021ನೇ ಸಾಲಿನ ಟ್ರೋಫಿಯನ್ನು ನಗದು ಪುರಸ್ಕಾರದೊಂದಿಗೆ ತನ್ನದಾಗಿಸಿಕೊಂಡಿತು.

ರಾಜು ಕಡಬ ಅವರು ಅತ್ಯುತ್ತಮ ಎಸೆತಗಾರ ಪ್ರಶಸ್ತಿ, ಇಸಾರ್ ಅವರು ಅತ್ಯುತ್ತಮ ದಾಂಡಿಗ ಪ್ರಶಸ್ತಿ ಪಡೆದರೆ ಸತೀಶ್ ಕಡಬ ಅವರು ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪಡೆದುಕೊಂಡರು.

ಸ್ಪಾರ್ ಹೈಪರ್ ಮಾರ್ಕೆಟ್ ಸಿಟಿಸೆಂಟರ್ ನ ಹಿರಿಯ ವ್ಯವಸ್ಥಾಪಕ ಗುರುಪ್ರಸಾದ್ ಕಡಂಬಾರ್ ಪಂದ್ಯಾವಳಿಯನ್ನು ಉದ್ಘಾಟಿಸಿದರು. ಕಾರ್ಯನಿರ್ವಾಹಕ ವ್ಯವಸ್ಥಾಪಕರಾದ ಕಾ.ವೀ.ಕೃಷ್ಣದಾಸ್ ವಿಜೇತ ತಂಡಕ್ಕೆ ಪ್ರಶಸ್ತಿ ಪ್ರದಾನ ಮಾಡಿದರು. ಮಾನವ ಸಂಪನ್ಮೂಲ ವ್ಯವಸ್ಥಾಪಕಿ ಸ್ನಿಗ್ಧ ರಾಜ್ ವಿಜೇತ ತಂಡದ ಸದಸ್ಯರಿಗೆ ಪದಕ ವಿತರಿಸಿದರು.

ಸ್ಪಾರ್ ಸಿಟಿಸೆಂಟರ್ ನ ವ್ಯವಸ್ಥಾಪಕರುಗಳಾದ ಜನಾರ್ಧನ್, ವಿಶ್ವನಾಥ್, ಪ್ರದೀಪ್, ಸುಕೇಶ್ ಶೆಟ್ಟಿ, ಸುನಿಲ್ ಮತ್ತಿತರರು ಉಪಸ್ಥಿತರಿದ್ದರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ಉಪಯುಕ್ತ ನ್ಯೂಸ್ ಸಿಗ್ನಲ್‌ ಗ್ರೂಪಿಗೆ ಜಾಯಿನ್ ಆಗಲು ಈ ಲಿಂಕ್‌ ಬಳಸಿ

Related posts

ಯುವಾಬ್ರಿಗೇಡ್ ನಿರ್ಮಿಸಿದ ಮನೆ ಬೆಳ್ತಂಗಡಿಯ ಬಡ ಕುಟುಂಬಕ್ಕೆ ನಾಳೆ ಹಸ್ತಾಂತರ

Upayuktha

ಜನವರಿ ಮೊದಲ ವಾರದಲ್ಲಿ ಕರಾವಳಿ ಉತ್ಸವ, ಸಾಂಸ್ಕೃತಿಕ ವೈಭವ

Upayuktha

ಸರಯೂ ಬಾಲ ಯಕ್ಷ ವೃಂದ ವತಿಯಿಂದ ‘ತುಳುವೆರೆ ಏಳಾಟೊ’ ಡಿ.26ರಿಂದ ಜ.1ರ ವರೆಗೆ

Upayuktha