ಕ್ಯಾಂಪಸ್ ಸುದ್ದಿ ನಗರ ಸ್ಥಳೀಯ

ಫೆ. 17: ಫಿಲೋಮಿನಾ ಸ್ನಾತಕೋತ್ತರ ಗಣಿತಶಾಸ್ತ್ರ ವಿಭಾಗದಲ್ಲಿ ವಿಶೇಷ ಅತಿಥಿ ಉಪನ್ಯಾಸ

ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಸ್ನಾತಕೋತ್ತರ ಗಣಿತಶಾಸ್ತ್ರ ವಿಭಾಗ ಮತ್ತು ಐಕ್ಯುಎಸಿ ಸಹಯೋಗದಲ್ಲಿ ವಾಮಂಜೂರಿನ ಸೈಂಟ್ ಜೋಸೆಫ್ಸ್ ಇಂಜಿಯರಿಂಗ್ ಕಾಲೇಜಿನ ಜೊತೆ ನಡೆಯುವ ಒಡಂಬಡಿಕೆಯ ಭಾಗವಾಗಿ ಫೆಬ್ರವರಿ 17ರಂದು ಸ್ನಾತಕೋತ್ತರ ಸಭಾಂಗಣದಲ್ಲಿ ‘ಅಡ್ವಾನ್ಸ್‌ಡ್ ಟೆಕ್ನಾಲಜಿಸ್ ಅಂಡ್ ನ್ಯೂ ಏಜ್ ಸ್ಕಿಲ್ಸ್ ಫಾರ್ ಪರ್ಸನಾಲಿಟಿ ಡೆವಲಪ್‍ಮೆಂಟ್’ ಮತ್ತು ‘ಸಮ್ ರಿಸರ್ಚ್ ಏರಿಯಾಸ್ ಇನ್ ರಿಂಗ್ ಥಿಯರೀಸ್’ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಕಾಲೇಜಿನ ಕ್ಯಾಂಪಸ್ ನಿರ್ದೇಶಕ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮುಖ್ಯಸ್ಥ ವಂ. ಡಾ. ಆ್ಯಂಟನಿ ಪ್ರಕಾಶ್ ಮೊಂತೆರೊ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಪ್ರಾಚಾರ್ಯ ಪ್ರೊ. ಲಿಯೋ ನೊರೊನ್ಹಾ ಅಧ್ಯಕ್ಷತೆ ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಸಂತ ಫಿಲೋಮಿನಾ ಕಾಲೇಜು ಮತ್ತು ಸೈಂಟ್ ಜೋಸೆಫ್ಸ್ ಇಂಜಿಯರಿಂಗ್ ಕಾಲೇಜಿನ ಜೊತೆ ಏರ್ಪಟ್ಟ ಒಡಂಬಡಿಕೆಯ ದಾಖಲೆ ಪತ್ರಗಳ ಪರಸ್ಪರ ವಿನಿಮಯವು ಜರಗಲಿರುವುದು.

ಈ ಸಂದರ್ಭದಲ್ಲಿ ಸೈಂಟ್ ಜೋಸೆಫ್ಸ್ ಇಂಜಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಹಾಗೂ ವಿಭಾಗ ಮುಖ್ಯಸ್ಥ ಡಾ. ರಮಾನಂದ ಎಚ್ ಎಸ್ ಮತ್ತು ಸಹ ಪ್ರಾಧ್ಯಾಪಕ ಡಾ. ಜಗದೀಶ ಬಿ ಗೌರವ ಅತಿಥಿಗಳಾಗಿ ಪಾಲ್ಗೊಂಡು, ಎರಡು ವಿಶೇಷ ತಾಂತ್ರಿಕ ಗೋಷ್ಠಿಗಳನ್ನು ನಡೆಸಿಕೊಡಲಿದ್ದಾರೆ. ಸಾಯಂಕಾಲ ಸಮಾರೋಪ ಸಮಾರಂಭವು ಜರಗಲಿರುವುದು. ಸ್ನಾತಕೋತ್ತರ ಗಣಿತಶಾಸ್ತ್ರ ವಿಭಾಗದ ಸಂಯೋಜಕ ಪ್ರೊ. ಗಣೇಶ ಭಟ್ ಕೆ ಕಾರ್ಯಕ್ರಮವನ್ನು ಸಂಯೋಜಿಸಲಿದ್ದಾರೆ ಎಂದು ಕಾಲೇಜಿನ ಪಿಆರ್‍ಒ ಪ್ರಕಟಣೆ ತಿಳಿಸಿದೆ.

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿ

Related posts

ಸುಳ್ಯ: ಚಿತ್ರಕಲಾ ಶಿಕ್ಷಕ ಮಹಾಬಲ ಕುಳ ನಿಧನ

Harshitha Harish

ಮನಪಾ ಚುನಾವಣೆ: ಮಂದಗತಿಯ ಮತದಾನ

Upayuktha

ಮನಸ್ಸು ಮುದಗೊಂಡಾಗ ಬದುಕು ಅರ್ಥಪೂರ್ಣ: ಬಾಬು ಹಿರಣ್ಣಯ್ಯ

Upayuktha