ಕ್ಯಾಂಪಸ್ ಸುದ್ದಿ ಗ್ರಾಮಾಂತರ ಸ್ಥಳೀಯ

‘ಕೊರೊನಾ ಕಾಲದಲ್ಲಿ ಪರಸ್ಪರ ಭಾವನಾತ್ಮಕ ಬೆಂಬಲ ಅಗತ್ಯ’

ಸ್ವಸ್ಥ ಸಮಾಜಕ್ಕಾಗಿ ಆರೋಗ್ಯಕರ ಅಭ್ಯಾಸಗಳು- ವಿಶೇಷ ಉಪನ್ಯಾಸ

ಉಜಿರೆ: ಕೊರೋನ ಸಂರ್ಭದಲ್ಲಿ ಎಲ್ಲರೂ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕುಗ್ಗಿದ್ದು, ನಾವು ಪರಸ್ಪರ ಭಾವನಾತ್ಮಕ ಬೆಂಬಲ ನೀಡುವುದರೊಂದಿಗೆ, ಸಹಾಯ ಹಸ್ತವನ್ನು ಚಾಚಬೇಕು. ಅಗತ್ಯವಿದ್ದಲ್ಲಿ ಆಪ್ತ ಸಮಾಲೋಚನೆಯ ನೆರವನ್ನು ಪಡೆದುಕೊಳ್ಳಲು ಹಿಂಜರಿಯಬಾರದು, ಎಂದು ಕೆಎಂಸಿಯ ಆರೋಗ್ಯ ಶಿಕ್ಷಕಿ ನಿಖಿತಾ ಸಿಬಿಲ್ ರೆಬೆಲ್ಲೋ ನುಡಿದರು.

ಅವರು ಶ್ರೀ.ಧ.ಮಂ ಕಾಲೇಜಿನಲ್ಲಿ ವಿಶ್ವ ಆರೋಗ್ಯ ದಿನದ ಪ್ರಯುಕ್ತ ಮನಃಶಾಸ್ತ್ರ ವಿಭಾಗ ಆಯೋಜಿಸಿದ ‘ಸ್ವಸ್ಥ ಸಮಾಜಕ್ಕಾಗಿ ಆರೋಗ್ಯಕರ ಅಭ್ಯಾಸಗಳು’ ಎಂಬ ವಿಷಯದ ಕುರಿತಾಗಿ ಆನ್‌ ಲೈನ್ ಅತಿಥಿ ಉಪನ್ಯಾಸದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ವಿದ್ಯರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ಮನಃಶಾಸ್ತ್ರ ವಿಭಾಗದ ಮುಖ್ಯಸ್ಥೆ ವಂದನಾ ಜೈನ್, ಸಹಾಯಕ ಪ್ರಾಧ್ಯಾಪಕ ಸುಧೀರ್ ಕೆ.ವಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾ ಧನ್ಯಾ ಪ್ರಭು ನಿರೂಪಿಸಿ, ಸಿಂಚನಾ ಶೆಟ್ಟಿ ಸ್ವಾಗತಿಸಿ, ಪ್ರತೀಕ್ಷಾ ವಂದಿಸಿದರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Related posts

ಬೆಳ್ತಂಗಡಿ: ಮುಳಿಯ ಜ್ಯುವೆಲ್ಸ್‌ನಲ್ಲಿ ವಿಷು ಹಬ್ಬ ಆಚರಣೆ

Upayuktha

ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ರಸ್ತೆ ಸುರಕ್ಷತಾ ಸಪ್ತಾಹ

Upayuktha

ಆಳ್ವಾಸ್ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ‘ಓರಿಯೆಂಟೇಷನ್ ಕಾರ್ಯಕ್ರಮ’

Upayuktha