ಕ್ಯಾಂಪಸ್ ಸುದ್ದಿ ನಗರ ಸ್ಥಳೀಯ

ಫಿಲೋಮಿನಾ ಸ್ನಾತಕೋತ್ತರ ಭೌತಶಾಸ್ತ್ರ ವಿಭಾಗದಲ್ಲಿ ಅತಿಥಿ ಉಪನ್ಯಾಸ


ಪುತ್ತೂರು: ಗಣಿತಶಾಸ್ತ್ರವು ಭೌತಶಾಸ್ತ್ರವನ್ನು ಸಮೀಕರಣದ ಮೂಲಕ ವಿವರಿಸುವ ಒಂದು ಭಾಷೆ. ಪ್ರಕೃತಿಯಲ್ಲಿ ಹದುಗಿರುವ ಭೌತಶಾಸ್ತ್ರದ ಪರಿಕಲ್ಪನೆಗಳನ್ನು ಗಣಿತದ ಮೂಲಕ ವಿವರಿಸಲಾಗಿದೆ ಎಂದು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಪ್ರಸಾದ್ ಎನ್ ಬಾಪಟ್ ಹೇಳಿದರು.

ಸಂತ ಫಿಲೋಮಿನಾ ಕಾಲೇಜಿನಸ್ನಾತಕೋತ್ತರ ಭೌತಶಾಸ್ತ್ರ ವಿಭಾಗದ ಆಶ್ರಯದಲ್ಲಿ ಮಾರ್ಚ್ 10 ರಂದು ಸ್ನಾತಕೋತ್ತರ ಸಭಾಂಗಣದಲ್ಲಿ ಆಯೋಜಿಸಲಾದ ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಮಾತನಾಡಿದರು.

ಗಣಿತಶಾಸ್ತ್ರದ ಮೂಲಭೂತ ತಳಪಾಯವು ಮಾನವನ ಬುದ್ಧಿಶಕ್ತಿ ಹಾಗೂ ವೈಚಾರಿಕತೆಯಿಂದ ಉಗಮವಾಗಿದ್ದು, ಪ್ರಾಕೃತಿಕ ವಿದ್ಯಮಾನಗಳಿಂದ ಪ್ರಭಾವಿತವಾಗಿಲ್ಲ. ಪ್ರಾಕೃತಿಕ ವಿದ್ಯಮಾನಗಳು ತನ್ನಷ್ಟಕ್ಕೆ ಗಣಿತಶಾಸ್ತ್ರದ ಪರಿವೆಯೇ ಇಲ್ಲದೆ ಘಟಿಸುತ್ತಿರುತ್ತವೆ. ಹೀಗೇ ಪ್ರಾಕೃತಿಕ ವಿದ್ಯಮಾನಗಳನ್ನು ಭೌತಶಾಸ್ತ್ರದ ಮೂಲಕ ವಿವರಿಸುವಾಗ ಎರಡು ಸ್ವತಂತ್ರ ಕ್ಷೇತ್ರಗಳು ಒಂದಕ್ಕೊಂದು ಹೊಂದಿಕೊಂಡು ಹೊಸ ನಿರೂಪಣೆಯನ್ನು ನೀಡುವುದು ನಿಜವಾಗಿಯೂ ಅಚ್ಚರಿಯ ವಿಷಯವಾಗಿದೆ ಎಂದರು.

ಈ ಸಂದರ್ಭದಲ್ಲಿ ಶೈಕ್ಷಣಿಕ ವರ್ಷ2018-19 ರಲ್ಲಿ ನಡೆಸಿದ ಭಿತ್ತಿಪತ್ರ ಸ್ಪರ್ಧೆಯಲ್ಲಿ ವಿಜೇತರಾದ ವಿಭಾಗದ ವಿದ್ಯಾರ್ಥಿಗಳನ್ನು ಬಹುಮಾನ ನೀಡಿ, ಗೌರವಿಸಲಾಯಿತು.

ಈ ಕಾರ್ಯಕ್ರಮದಲ್ಲಿ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಪ್ರವೀಣ್ ಪ್ರಕಾಶ್ ಡಿ’ಸೋಜ, ಅಶ್ವಿತ ಎಸ್, ಸವಿತಾ ಮೊಂತೆರೊ, ಆಶಿತ್ ವಿ ಕೆ ಮತ್ತು ಜೋಯ್ಲಿನ್ ಮ್ಯಾಕ್ಸಿಮ ರೋಡ್ರಿಗಸ್ ಉಪಸ್ಥಿತರಿದ್ದರು.

ಪ್ರಮಿತಾ ಮತ್ತು ತಂಡದವರು ಪ್ರಾರ್ಥಿಸಿದರು. ವಿಭಾಗದ ಸಂಯೋಜಕ ಡಾ. ಇ ದೀಪಕ್ ಡಿ’ಸಿಲ್ವ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಕಾಲೇಜಿನ ಭೌತಶಾಸ್ತ್ರ ವಿಭಾಗ ಮುಖ್ಯಸ್ಥ ಡಾ. ಎ ಪಿ ರಾಧಾಕೃಷ್ಣ ವಂದಿಸಿದರು.

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ಐಎಂಎ ಕಾಸರಗೋಡು ವತಿಯಿಂದ ವಿಶ್ವ ಏಡ್ಸ್‌ ದಿನಾಚರಣೆ ಜಾಥಾ

Upayuktha

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ- ಮಾನವ ಸಂಪನ್ಮೂಲ ವಿಭಾಗದ ಯೂಟ್ಯೂಬ್ ಚಾನೆಲ್‌ ಉದ್ಘಾಟನೆ

Upayuktha

ಧರ್ಮಸ್ಥಳದಲ್ಲಿ ನೇತ್ರಾವತಿ ನದಿ ಸ್ವಚ್ಛತಾ ಕಾರ್ಯ

Upayuktha