ಕ್ಯಾಂಪಸ್ ಸುದ್ದಿ ಗ್ರಾಮಾಂತರ ಸ್ಥಳೀಯ

ಮಂಕುತಿಮ್ಮನ ಕಗ್ಗದಲ್ಲಿ ಜೀವನ ದರ್ಶನ: ಪುಂಜಾಲಕಟ್ಟೆಯಲ್ಲಿ ಆನ್‌ಲೈನ್‌ ವಿಶೇಷ ಉಪನ್ಯಾಸ

ಪುಂಜಾಲಕಟ್ಟೆ: ಮಂಗಳೂರು ವಿಶ್ವವಿದ್ಯಾಲಯ, ಸರಕಾರಿ ಪ್ರಥಮ ದರ್ಜೆ ಕಾಲೇಜು ಪುಂಜಾಲಕಟ್ಟೆ ಮತ್ತು ಆಂತರಿಕ ಗುಣಮಟ್ಟ ಭರವಸೆ ಕೋಶ, ಕನ್ನಡ ವಿಭಾಗ ಹಾಗೂ ರಾಷ್ಟ್ರೀಯ ಸೇವಾ ಯೋಜನೆ (ಘಟಕ 1 ಮತ್ತು 2) ಇದರ ಸಹಯೋಗದೊಂದಿಗೆ ಇಂದು (ಅ.17) “ಮಂಕುತಿಮ್ಮನ ಕಗ್ಗದಲ್ಲಿ ಜೀವನ ದರ್ಶನ” ಎಂಬ ಆನ್ ಲೈನ್ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಜಾವಳ್ಳಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಜಿ.ಎಸ್.‌ ನಟೇಶ್‌ ಆಗಮಿಸಿದ್ದು, ಮಂಕುತಿಮ್ಮನ ಕಗ್ಗದಲ್ಲಿ ಅಡಗಿರುವ ಮನುಷ್ಯನ ಜೀವನ ಮೌಲ್ಯಗಳ ಬಗ್ಗೆ ಕಗ್ಗದ ಹಾಡಿನ ಜೊತೆ ಸಭೆಗೆ ತಿಳಿಸಿಕೊಟ್ಟರು.

ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಗಣಪತಿ ಭಟ್ ಕುಳಮರ್ವ ಇವರು ಅಧ್ಯಕ್ಷತೆಯನ್ನು ವಹಿಸಿದ್ದು, IQAC  ಸಂಚಾಲಕರಾದ ಪ್ರೊ| ರವಿಶಂಕರ್‌ ಬಿ., ಹಾಗೂ ಎನ್.ಎಸ್.ಎಸ್ ನ ಸಂಯೋಜಕರಾದ ಪ್ರೊ| ಸಂತೋಷ್‌ ಪ್ರಭು, ಪ್ರೊ| ರಾಜೇಶ್ವರಿ ಮತ್ತು ಸಿಬ್ಬಂದಿ ವರ್ಗ ಹಾಗೂ ಪುಂಜಾಲಕಟ್ಟೆ ಕಾಲೇಜು ಸೇರಿದಂತೆ ವಿವಿಧ ಕಾಲೇಜುಗಳಿಂದ ಸುಮಾರು 89 ಮಂದಿ ಉಪಸ್ಥಿತರಿದ್ದರು.

ಈ ಕಾರ್ಯಕ್ರಮವನ್ನು ಕುಮಾರಿ ಜಯಶ್ರೀಯವರ ನಿರೂಪಣೆಯೊಂದಿಗೆ ಡಿವಿಜಿಯವರ ಕಗ್ಗದ ಹಾಡಿನ ಮೂಲಕ ಕುಮಾರಿ ಸಮೀಕ್ಷಾ ಆರಂಭಿಸಿದರು. ಕುಮಾರಿ ರಶ್ಮಿ ಎಲ್ಲರನ್ನೂ ಸ್ವಾಗತಿಸಿದರು. ಕುಮಾರಿ ತುಳಸಿ  ಅತಿಥಿಗಳ ಪರಿಚಯ ಮಾಡಿಕೊಟ್ಟರು. ಕಾರ್ಯಕ್ರಮದ ಕೊನೆಯಲ್ಲಿ ಗಣೇಶ್‌ ಎಲ್ಲರನ್ನೂ ವಂದಿಸಿದರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಅಮೃತ ಸಾಹಿತ್ಯ ವೇದಿಕೆ ಅಧ್ಯಕ್ಷರಾಗಿ ಡಾ| ಮಾಲತಿ ಶೆಟ್ಟಿ ಮಾಣೂರು ಆಯ್ಕೆ

Upayuktha

ಮೊಗ್ರ: ಕನ್ನಡ ದೇವತೆ ಯಾನೆ ಭೈರಜ್ಜಿ ನೇಮ, ಸಾವಿರಾರು ಭಕ್ತರಿಂದ ಹರಕೆ ಸಮರ್ಪಣೆ

Upayuktha

ವಿಶ್ವ ಪರಿಸರ ದಿನ: ಜೂನ್ 5 ರಂದು ಮಾತ್ರ ಪ್ರಕೃತಿಯ ನೆನಪಾಗಬೇಕಿಲ್ಲ…

Upayuktha

Leave a Comment