ಇತರ ಕ್ರೀಡೆಗಳು ಗ್ರಾಮಾಂತರ ಸಮುದಾಯ ಸುದ್ದಿ ಸ್ಥಳೀಯ

ಕ್ರೀಡಾ ಚಟುವಟಿಕೆಗಳ ಮೂಲಕ ಸಮುದಾಯದ ಬಾಂಧವ್ಯ ವೃದ್ಧಿ: ಶ್ರೀಧರ್ ಗೌಡ

ನಾವೂರು: ಕ್ರೀಡಾ ಚಟುವಟಿಕೆಗಳ ಮೂಲಕ ಸಮುದಾಯ ಬಾಂಧವರ ನಡುವೆ ಬಾಂಧವ್ಯ ವೃದ್ಧಿಸುತ್ತದೆ ಎಂದು ರಾಜ್ಯ ಮಲೆಕುಡಿಯ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಧರ್ ಗೌಡ ಈದು ತಿಳಿಸಿದರು.
ನಾವೂರಿನಲ್ಲಿ ಶಿವಪಾರ್ವತಿ ಭಜನಾ ಮಂಡಳಿ ಪುಳಿತ್ತಡಿ ಶಿವ ಪ್ರೆಂಡ್ಸ್ ನಾವೂರು ಇದರ ಸಹಭಾಗಿತ್ವದಲ್ಲಿ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಹೊನಲು ಬೆಳಕಿನ ಮುಕ್ತ ಕಬಡ್ಡಿ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದ ಅವರು  ಸಮುದಾಯ ಎದುರಿಸುತ್ತಿರುವ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಕಾನೂನು ರೀತಿಯಲ್ಲಿ ಸೇರಿದಂತೆ ವಿವಿಧ ಆಯಾಮಗಳಲ್ಲಿ ಗಮನಸೆಳೆಯುವ ಪ್ರಯತ್ನ ಮಾಡಲಾಗುತ್ತಿದ್ದು, ಸಂವಿಧಾನ ನೀಡಿರುವ ಹಕ್ಕುಗಳನ್ನು ಪ್ರತಿಪಾದಿಸುವ ಜೊತೆಗೆ ಜವಾಬ್ದಾರಿಗಳನ್ನು ಅರಿತು ಕೆಲಸ ಮಾಡಿದಾಗ ಯಶಸ್ಸು ಸಾಧ್ಯ ಎಂದರು.
ಶಿವಪ್ರೆಂಡ್ಸ್ ನ ಅಧ್ಯಕ್ಷ ಕೊರಗು ಮಲೆಕುಡಿಯ ಅಧ್ಯಕ್ಷತೆ ವಹಿಸಿದ್ದರು. ಬಂಗಾಡಿ ಸಹಕಾರಿ ಸಂಘದ ಅಧ್ಯಕ್ಷ ಹರೀಶ್ ಮೋರ್ತಾಜೆ , ರಾಜ್ಯ ಮಲೆಕುಡಿಯ ಸಂಘದ ಅಧ್ಯಕ್ಷ ಅಣ್ಣಪ್ಪ ಎನ್, ಗ್ರಾ.ಪಂ.  ಅಧ್ಯಕ್ಷ ಗಣೇಶ್ ನಾವೂರು, ತಾ. ಪಂ. ಉಪಾಧ್ಯಕ್ಷೆ ವೇದಾವತಿ, ಡಾ. ಪ್ರದೀಪ್ ನಾವೂರು, ಮಲೆಕುಡಿಯ ಸಂಘ ತಾಲೂಕು ಸಮಿತಿ ಬೆಳ್ತಂಗಡಿಯ ಕಾರ್ಯದರ್ಶಿ ಜಯಾನಂದ ಸವಣಾಲು, ಬಿಜೆಪಿ ಎಸ್ಟಿ ಮೋರ್ಚಾದ ಅಧ್ಯಕ್ಷರು ಭೂ ನ್ಯಾಯ ಮಂಡಳಿಯ ಸದಸ್ಯರಾದ ಹರೀಶ್ ಎಳನೀರ್, ಶಿವಪ್ಪ ಪುಳಿತ್ತಡಿ, ಬಾಲಕೃಷ್ಣ ಕಾಸ್ರೋಳ್ಳಿ, ದೇವಪ್ಪ ಪುದುವೆಟ್ಟು, ಎ.ಬಿ ಉಮೇಶ್ ಅತ್ಯಡ್ಕ, ನಾವೂರು‌ ಸರಕಾರಿ ಶಾಲಾ  ಮುಖ್ಯೋಪಾಧ್ಯಾಯ ಪುಟ್ಟಣ್ಣ, ಗಂಗಾಧರ ಈದು, ದೇವಪ್ಪ ನಾವೂರು  ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕೃಷಿ ವಿಜ್ಞಾನಿ ಲಾವಣ್ಯಾ ಎಂ.ಕೆ, ಪ್ರಗತಿಪರ ಕೃಷಿಕರಾದ ಲೋಕಯ್ಯ ಪುಳಿತ್ತಡಿ, ಜಿನ್ನಪ್ಪ ಕೊಡಂಗೆ, ಪ್ರತಿಭಾನ್ವಿತ ವಿದ್ಯಾರ್ಥಿನಿಯರಾದ ಕುಸುಮಾ ಅಲ್ಯ, ಕುಮುದಾ ಅಲ್ಯ  ಅವರನ್ನು ಸನ್ಮಾನಿಸಲಾಯಿತು. ಪುಟ್ಟಣ್ಣ ಎಂ.ಜಿ ಸ್ವಾಗತಿಸಿ ವಂದಿಸಿದರು.
ಇನ್ನು ಕ್ರೀಡಾಕೂಟದಲ್ಲಿ ಯುವಶಕ್ತಿ ಆಲಂಗಾಯಿ ತಂಡ ಪ್ರಥಮ ಸ್ಥಾನ, ಸ್ಕಂದ ಶ್ರೀ ಸುಬ್ರಹ್ಮಣ್ಯ ತಂಡ ದ್ವಿತೀಯ ಸ್ಥಾನ, ಎಂ.ಕೆ ಫ್ರೆಂಡ್ಸ್ ಧರ್ಮಸ್ಥಳ ತಂಡ ತೃತೀಯ ಸ್ಥಾನ ಹಾಗೂ ಯುವಶಕ್ತಿ ಆಲಂಗಾಯಿ ‘ಬಿ ತಂಡ ಚತುರ್ಥ ಸ್ಥಾನವನ್ನು ಪಡೆದುಕೊಂಡರು.

Related posts

ಕಾರ್ಕಳ: ಎಸೆಸೆಲ್ಸಿ ವಿದ್ಯಾರ್ಥಿಗಳೊಂದಿಗೆ ಅಪರ ಜಿಲ್ಲಾಧಿಕಾರಿ ಸಂವಾದ

Upayuktha

ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿ ಗೆ- ಸ್ಕಾಲರ್ ಶಿಪ್ ಹಣ ನೀಡಿ ಪ್ರೋತ್ಸಾಹಿಸಿದ ಶಹನಾ ಮುಮ್ತಾಜ್

Harshitha Harish

ಡಾ. ಮಾಲತಿ ಶೆಟ್ಟಿ ಮಾಣೂರು ಅವರಿಗೆ ಗಡಿನಾಡ ಧ್ವನಿ ಸಾಹಿತ್ಯಭೂಷಣ ಪ್ರಶಸ್ತಿ

Upayuktha