ಇತರ ಕ್ರೀಡೆಗಳು ಪ್ರತಿಭೆ-ಪರಿಚಯ

ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗ್ರಾಮೀಣ ಯುವ ಪ್ರತಿಭೆ ಚಿತ್ರಾ ಕುಲಾಲ್

ಕ್ರೀಡೆ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ. ಕೆಲವರಿಗೆ ಬೆಳಿಗ್ಗೆ ಬೇಗನೆ ಎದ್ದು ಓಡುವ ಹವ್ಯಾಸ ಇನ್ನೂ ಕೆಲವರಿಗೆ ನಡೆದಾಡುವ ಹವ್ಯಾಸ ಒಟ್ಟಾರೆ ಯಾಗಿ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಕ್ರೀಡೆಯಲ್ಲಿ ಆಸಕ್ತಿ ಇರುವುದು ಸಹಜ. ಹೀಗೆ ಆಡುವುದರಿಂದ ನರ ನಾಡಿಗಳಿಗೂ ಒಂದು ರೀತಿಯ ಉಲ್ಲಾಸ ದೇಹ ಮತ್ತು ಮನಸ್ಸಿನ ಮೇಲೆ ಒಂದು ರೀತಿಯ ಪ್ರಭಾವ ಬೀರುತ್ತದೆ. ಹಾಗೆಯೇ ಇಲ್ಲೊಬ್ಬರು ಅಂಥವರ ಸಾಲಿನಲ್ಲಿ ಇರುವ ಕ್ರೀಡಾ ಪ್ರತಿಭೆ. ಅವರೇ ಚಿತ್ರಾ ಕುಲಾಲ್.

Advertisement
Advertisement

ಇವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮದ ಶ್ರೀ ರಾಮ ನಗರದವರು. ಈಕೆಯ ತಂದೆ ಶ್ರೀ ಕೆಂಚಪ್ಪ ಕುಲಾಲ್ ಮತ್ತು ಶ್ರೀಮತಿ ಹರಿಣಾಕ್ಷಿ ದಂಪತಿಗಳ ಪುತ್ರಿ. ಇವರ ಪ್ರಾಥಮಿಕ ಹಾಗೂ ಫ್ರೌಢ ಶಿಕ್ಷಣ ವನ್ನು ಶತಾಬ್ದಿ  ಶಾಲೆಯಲ್ಲಿ ಮುಗಿಸಿದರು. ಪ್ರಸ್ತುತ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಿದ್ಯಾಲಯ ಉಜಿರೆ ಇಲ್ಲಿ ಪದವಿ ಶಿಕ್ಷಣ ವನ್ನು ಮುಂದುವರಿಸುತ್ತಿದ್ದಾರೆ.

ಈಕೆ ತನ್ನ ಸಣ್ಣ ವಯಸ್ಸಿನಲ್ಲಿಯೇ ಕ್ರೀಡೆಯಲ್ಲಿ ಬೆಳಗಿದ ಪ್ರತಿಭೆ ಏಳನೇ ತರಗತಿಯಲ್ಲಿ ಓದುತ್ತಿರುವಾಗಲೇ ಜಮ್ಮು ಮತ್ತು ಕಾಶ್ಮೀರ ದಲ್ಲಿ ನಡೆದ 2013-14ನೇ ಸಾಲಿನ 59ನೇ ರಾಷ್ಟ್ರ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಭಾಗವಹಿಸಿ 9ನೇ ತರಗತಿಯಲ್ಲಿ ಉತ್ತರ ಪ್ರದೇಶ ದ ಅಲಹಾಬಾದ್ ನಲ್ಲಿ ನಡೆದ 2015-16 ನೇ ಸಾಲಿನ 61ನೇ ರಾಷ್ಟ್ರ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಭಾಗವಹಿಸಿ ದ್ವೀತಿಯ ಸ್ಥಾನ ಪಡೆದರು.

ಹಾಗೆಯೇ ಪ್ರಥಮ ಪಿಯುಸಿಯಲ್ಲಿ ತೆಲಂಗಾಣದಲ್ಲಿ ನಡೆದ 2017-18ನೇ ಸಾಲಿನ 63ನೇ ರಾಷ್ಟ್ರ ಮಟ್ಟದ ಟೆನ್ನಿಸ್ ವಾಲಿಬಾಲ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಗಳಿಸಿ  ರಾಜಸ್ಥಾನದಲ್ಲಿ ನಡೆದ  2017-18ನೇ ಸಾಲಿನ 63ನೇ ರಾಷ್ಟ್ರ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಭಾಗವಹಿಸಿ ತಮಿಳುನಾಡಿನಲ್ಲಿ ನಡೆದ ರಾಷ್ಟ್ರ ಮಟ್ಟದ ಒಪನ್ ವಾಲಿಬಾಲ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಗಳಿಸಿದ ಹೆಮ್ಮೆ ಇವರಿಗಿದೆ.

ದ್ವಿತೀಯ ಪಿಯುಸಿ ಯಲ್ಲಿ  ವಿದ್ಯಾಭ್ಯಾಸ ಮಾಡುತ್ತಿರುವಾಗ ತೆಲಂಗಾಣದಲ್ಲಿ ನಡೆದ 2018-19ನೇ ಸಾಲಿನ 64ನೇ ರಾಷ್ಟ್ರ ಮಟ್ಟದ ಟೆನ್ನಿಸ್ ವಾಲಿಬಾಲ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆದು ಮಂಡ್ಯ ದಲ್ಲಿ ನಡೆದ ರಾಜ್ಯ ಮಟ್ಟದ ಫುಟ್ಬಾಲ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಗಳಿಸಿದ ಇವರು ಬಿಜಾಪುರ ದಲ್ಲಿ ನಡೆದ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಇವರ ಪಾಲಿಗೆ ಒದಗಿ ಬಂದಿದೆ.

ರಾಷ್ಟ್ರ ಮಟ್ಟದ ಕ್ರೀಡಾ ಪಟುವಾಗಿ ಈಗಾಗಲೇ ಆಯ್ಕೆ ಯಾಗಿದ್ದಾರೆ. ಪ್ರತಿಯೊಂದು ಕ್ರೀಡೆಯಲ್ಲಿಯೂ ಬಹುಮಾನ ತನ್ನದಾಗಿಸಿಕೊಳ್ಳಬೇಕೆನ್ನುವ ಛಲ ಹೊಂದಿರುವ ಈಕೆಗೆ ಪ್ರತಿಯೊಂದು ಹೆಜ್ಜೆಯಲ್ಲಿಯೂ ಬಹುಮಾನ ಎನ್ನುವುದು ಕಟ್ಟಿಟ್ಟ ಬುತ್ತಿ.

ಹಾಗೆಯೇ 2019/2020 ನೇ ಸಾಲಿನ ಸರ್ಕಾರಿ ಪ್ರಥಮ‌ ದರ್ಜೆ ಮಹಿಳಾ ಕಾಲೇಜು ಪುತ್ತೂರು ಇದರ ಆಶ್ರಯದಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯ ದ ಅಂತರ್ ಕಾಲೇಜು ಗುಡ್ಡ ಗಾಡು ಓಟದಲ್ಲಿ ತೃತೀಯ ಸ್ಥಾನವನ್ನು ಪಡೆದು ಕೊಂಡ ಈಕೆ  ತಮಿಳುನಾಡಿನಲ್ಲಿ ನಡೆದ ಅಂತರ್ ಕಾಲೇಜು ವಾಲಿಬಾಲ್ ಪಂದ್ಯಾಟದಲ್ಲಿ ಭಾಗವಹಿಸಿದರು.

ಹಾಗೆಯೇ ಡಾ.ಬಿ.ಬಿ. ಪ್ರಥಮ ದರ್ಜೆ ಕಾಲೇಜು ಕುಂದಾಪುರದ ನೇತೃತ್ವದಲ್ಲಿ ನಡೆದ ಅಂತರ್ ಕಾಲೇಜು ಸಾಫ್ಟ್‌ ಬಾಲ್ ಪಂದ್ಯಾಟ ದಲ್ಲಿ ತೃತೀಯ ಸ್ಥಾನವನ್ನು ಗಳಿಸಿರುತ್ತಾರೆ. ಹಾಗೆಯೇ ಪುತ್ತೂರಿನಲ್ಲಿ‌ ನಡೆದ ಮಂಗಳೂರು ವಿಶ್ವವಿದ್ಯಾನಿಲಯದ ಅಂತರ್ ಕಾಲೇಜು ಈಜು ಸ್ಪರ್ಧೆಯಲ್ಲಿ ಭಾಗವಹಿಸಿರುತ್ತಾರೆ.

ಹಾಗೂ ಮಂಗಳೂರಿನಲ್ಲಿ ನಡೆದ ಜಿಲ್ಲಾಮಟ್ಟದ ದಸರಾ ಕ್ರೀಡಾಕೂಟದಲ್ಲಿ ದ್ವಿತೀಯ ಸ್ಥಾನವನ್ನು ಗಳಿಸಿದ ಇವರು ಜೈ ಶ್ರೀ ರಾಮ್ ಗೆಳೆಯರ ಬಳಗದ ಸದಸ್ಯ ಹಾಗೂ ಶ್ರೀ ರಾಮ್ ಕಲಾ ತಂಡದಲ್ಲೂ ತನ್ನನ್ನು ತಾನೂ ತೊಡಗಿಸಿಕೊಂಡಿದ್ದಾರೆ.

ಇಷ್ಟೆಲ್ಲಾ ಸಾಧನೆ ಯ ಶಿಖರಕ್ಕೆ ಏರಿದ ಇವರ ಕ್ರೀಡಾ ಸಾಧನೆಯು ಸಮಾಜಕ್ಕೆ ದೊರಕಿದ ಹಿರಿಮೆಯಾಗಿದೆ. ಇವರ ಸಾಧನೆಗೆ ಪ್ರೋತ್ಸಾಹಿದ ಇವರ ಹೆತ್ತವರಿಗೆ ಕ್ರೀಡಾ ಕ್ಷೇತ್ರದಲ್ಲಿ ಸದಾ ಜೊತೆಗಿದ್ದು ಗುರುತಿಸುವಂತೆ ಮಾಡಿದ ಗುರುವಿಗೆ ಧನ್ಯವಾದಗಳು ಹಾಗೂ ಊರಿನವರಿಗೂ ಕೃತಜ್ಞತೆ ಸಲ್ಲಿಸಿ ಇವರು ಇನ್ನೂ ಹೆಚ್ಚಿನ ಕೀರ್ತಿ ತಂದು ಕೊಡಲಿ ಇವರ ಪಾಲಿಗೆ ಇನ್ನೂ ಅವಕಾಶ ದೊರಕಲಿ.

🖋ಹರ್ಷಿತಾ ಹರೀಶ ಕುಲಾಲ್

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್  App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Advertisement
Advertisement

Related posts

ಐ.ಎಂ. ವಿಜಯನ್: ಸೋಡಾ ಬಾಟಲ್ ಮಾರುತ್ತಿದ್ದವ ಫುಟ್ಬಾಲ್ ತಾರೆಯಾದ

Upayuktha

ಹುಟ್ಟು ಹಬ್ಬದ ಸಂಭ್ರಮದಲ್ಲಿ ಸಿನಿಮಾ ರಂಗದ ಪುಟಾಣಿ ಶ್ಲಾಘ ಸಾಲಿಗ್ರಾಮ

Harshitha Harish

ಫಿಲೋಮಿನಾದಲ್ಲಿ ಹಿರಿಯ ವಿದ್ಯಾರ್ಥಿ, ಶಿಕ್ಷಕ-ರಕ್ಷಕ-ಸಂಘದ ಕ್ರೀಡಾಕೂಟಕ್ಕೆ ಚಾಲನೆ

Upayuktha
error: Copying Content is Prohibited !!