ಕ್ಷೇತ್ರಗಳ ವಿಶೇಷ ಗ್ರಾಮಾಂತರ ಸ್ಥಳೀಯ

ಶ್ರೀನಿವಾಸಪುರ ಶ್ರಿ ವಿಠೋಬ ರುಕುಮಾಯಿ ದೇವಸ್ಥಾನದ ಪ್ರತಿಷ್ಠಾ ಬ್ರಹ್ಮಕುಂಭಾಭಿಷೇಕ ಮಾರ್ಚ್ 1ರಿಂದ 5ರವರೆಗೆ

ಮಂಗಳೂರು: ಮೂಡುಬಿದಿರೆ ತಾಲೂಕು ಪುತ್ತಿಗೆ ಗ್ರಾಮದ ಶ್ರೀನಿವಾಸಪುರದಲ್ಲಿರುವ ಶ್ರೀ ವಿಠೋಬ ರುಕುಮಾಯಿ ದೇವಸ್ಥಾನದ ಪುನಃ ಪ್ರತಿಷ್ಠಾ ಬ್ರಹ್ಮಕುಂಭಾಭಿಷೇಕ ಮಾರ್ಚ್‌ 1ರಿಂದ 5ರ ವರೆಗೆ ಜರಗಲಿದೆ.

ಶೃಂಗೇರಿ ಜಗದ್ಗುರು ಶ್ರೀ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳವರು ಮತ್ತು ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳವರ ಪರಮಾನುಗ್ರಹದೊಂದಿಗೆ ಈ ಕಾರ್ಯಕ್ರಮ ನಡೆಯಲಿದೆ.

ನೂತನವಾಗಿ ನಿರ್ಮಿಸಿರುವ ಶಿಲಾಮಯ ಮಂದಿರದಲ್ಲಿ ಶ್ರೀ ವಿಠೋಬ ರುಕುಮಾಯಿ ದೇವರ ಪುನಃ ಪ್ರತಿಷ್ಠಾ ಬ್ರಹ್ಮಕುಂಭಾಭಿಷೇಕವನ್ನು ಶೃಂಗೇರಿ ಶಾರದಾಪೀಠದ ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳವರು ಸಂಪನ್ನಗೊಳಿಸಲಿದ್ದಾರೆ. ವೇ.ಮೂ ಸುಧೀರ ಪುರುಷೋತ್ತಮ ದೇವ್‌ಜಿ ಕಾಂತಾವರ ಅವರು ಆಚಾರ್ಯತ್ವ ವಹಿಸಲಿದ್ದಾರೆ.

ಮಂಗಳೂರಿನ ವಿದ್ವಾನ್ ಡಾ| ಸತ್ಯಕೃಷ್ಣ ಭಟ್ ಪರಾಡ್ಕರ್ ಹಾಗೂ ತಂತ್ರರತ್ನ ಎಂ. ರಾಧೇಶ್ಯಾಮ ಭಟ್ ಕಾಪಾಟು ಅವರು ಈ ಮಂಗಳೋತ್ಸವಕ್ಕೆ ಮಾರ್ಗದರ್ಶನ ಮಾಡಲಿದ್ದಾರೆ ಎಂದು ದೇವಸ್ಥಾನದ ಆಡಳಿತ ಮಂಡಳಿ, ಬ್ರಹ್ಮಕುಂಭಾಭಿಷೇಕ ಸಮಿತಿ ಮತ್ತು ಜೀಣೋದ್ಧಾರ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ.

ಪ್ರತಿದಿನ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲದೆ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯಲಿವೆ. ಮಾರ್ಚ್ 3ರಂದು ಅಪರಾಹ್ನ 2:30ಕ್ಕೆ ಡಾ| ಕಬ್ಬಿನಾಲೆ ಬಾಲಕೃಷ್ಣ ಭಾರದ್ವಾಜ್ ಅವರಿಂದ ಅಷ್ಟಾವಧಾನ ಕಾರ್ಯಕ್ರಮವಿದೆ.

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

‘ಬಿಗ್ ಡಾಟಾ ಅಂಡ್ ಆರ್ಟಿಫೀಶಿಯಲ್ ಇಂಟೆಲಿಜೆನ್ಸ್’: ಫಿಲೋಮಿನಾದಲ್ಲಿ ಕಾಲೇಜಿನಲ್ಲಿ ವಿಶೇಷ ಉಪನ್ಯಾಸ

Upayuktha

ಮೃತ ಬಾಲಕನ ಸ್ಮರಣಾರ್ಥ ನಿರ್ಮಾಣ ವಾದ ಪ್ರಯಾಣಿಕರ ತಂಗುದಾಣ ಉದ್ಘಾಟನೆ

Harshitha Harish

ಉಳ್ಳಾಲ ಬೀಚ್‍ನಲ್ಲಿ ಯೋಗ ಮತ್ತು ಸ್ವಚ್ಚತಾ ಅಭಿಯಾನ

Upayuktha