ಕ್ಯಾಂಪಸ್ ಸುದ್ದಿ ನಗರ ಸ್ಥಳೀಯ

ಸ್ವ ಅಧ್ಯಯನವೆಂಬ ತಪಸ್ಸಿನಿಂದ ಬರವಣಿಗೆ ಸಾಧ್ಯ: ಗಣಪತಿ ಹೆಗಡೆ

‘ಸೃಷ್ಠಿ’ ಬರಹ, ಸಾಹಿತ್ಯ ಕಮ್ಮಟದ ಸಮಾರೋಪ

ಪುತ್ತೂರು: ಕವಿಗಳು, ಸಾಹಿತಿಗಳು, ಉದಯೋನ್ಮುಖ ಬರಹಗಾರರನ್ನು ನಾವು ಆದರ್ಶವಾಗಿ ಕಾಣುತ್ತೇವೆ. ಸ್ವ ಅಧ್ಯಯನವೆಂಬ ತಪಸ್ಸಿನ ಮೂಲಕ ಒಂದು ವಿಷಯಕ್ಕೆ ಗಮನಕೊಡಬೇಕು. ನಮ್ಮಲ್ಲಿರುವ ಸುಪ್ತ ಪ್ರತಿಭೆಗಳಿಗೆ ಚೈತನ್ಯವನ್ನು ನೀಡಿದರೆ ಗತಿ ಹೆಚ್ಚುತ್ತದೆ. ಓದದೇ ಗಮನಕೊಡದೆ ಬರೆಯಲು ಸಾಧ್ಯವಿಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ಪ್ರಾಂತ ಕಾರ್ಯಕಾರಣಿ ಸದಸ್ಯ ಗಣಪತಿ ಹೆಗಡೆ ಹೇಳಿದರು.

ಅವರು ಇಲ್ಲಿನ ವಿವೇಕಾನಂದ ವಿದ್ಯಾವರ್ಧಕ ಸಂಘ, ವಿವೇಕಾನಂದ ಕಾಲೇಜು ಮತ್ತು ಪದವಿ, ಸ್ನಾತಕೋತ್ತರ ಪತ್ರಿಕೋದ್ಯಮ ಹಾಗೂ ಭಾಷಾ ವಿಭಾಗಗಳ ಸಂಯುಕ್ತಾಶ್ರಯದಲ್ಲಿ ಸೋಮವಾರ ‘ಸೃಷ್ಠಿ’ ಎಂಬ ಸಹೃದಯ ಬರಹ ಮತ್ತು ಸಾಹಿತ್ಯಗಳನ್ನು ರೂಪಿಸುವ ಹಾಗೂ ಪ್ರೇರೇಪಿಸುವ ಒಂದು ದಿನದ ಕಮ್ಮಟದ ಸಮಾರೋಪ ಭಾಷಣವನ್ನು ಮಾಡಿದರು.

ಓದದೇ ಹೋದರೆ ಬರೆಯಲು ಸಾಧ್ಯವಿಲ್ಲ. ಓದಿನಿಂದ ಶಬ್ದ ಭಂಡಾರದೊಂದಿಗೆ ದೃಷ್ಟಿ, ಜ್ಞಾನವನ್ನು ವೃದ್ಧಿಸಬಹುದು. ಕುತೂಹಲದಿಂದ ಲೇಖನ, ಬರವಣಿಗೆ ಮೂಲಕ ಸಾಹಿತ್ಯವನ್ನು ಸೃಷ್ಟಿಸಲು ಸಾಧ್ಯ. ಪೂರ್ವಗ್ರಹವಿಲ್ಲದೆ ಬರೆಯಬೇಕು, ಲೇಖನವೂ ಪೂರ್ತಿ ಮಾಹಿತಿಯನ್ನು ತಿಳಿಸುವಂತಿರಬೇಕು ಎಂದು ಹೇಳಿದರು.

ಅಧ್ಯಯನ ಎಂಬುದು ಅಭ್ಯಾಸವಾಗಿ ಸದಾಕಾಲ ಬರವಣಿಗೆಯಲ್ಲಿ ತೊಡಗಿ ಚಿಂತಿಸಬೇಕು. ಸಾಹಿತ್ಯವು ಸಮಾಜಮುಖಿಯಾಗಿ ಸಮಾಜ ನಿರ್ಮಾಣದ ಕಾರ್ಯವಾಗಬೇಕು. ಉತ್ತಮ ಸಮಾಜಕ್ಕೆ ನಮ್ಮ ಅಕ್ಷರದ ಮೂಲಕ ಕಾಣಿಕೆಯನ್ನು ನೀಡಬೇಕು ಎಂದು ನುಡಿದರು.

ಪತ್ರಕರ್ತ, ಅಂಕಣಕಾರ ನಾ. ಕಾರಂತ ಪೆರಾಜೆ ಮಾತನಾಡಿ, ಬೌದ್ಧಿಕ ಜ್ಞಾನವನ್ನು ಗಟ್ಟಿಗೊಳಿಸಲು ಇಂತಹ ಕಾರ್ಯಾಗಾರ ಮುಖ್ಯ. ಸ್ಮಾರ್ಟ್ ಫೋನ್‍ನ ಹೊರತಾಗಿ ಓದಿನ ಮೂಲಕ ಜ್ಞಾನವನ್ನು ವೃದ್ಧಿಸಬೇಕು. ಇಂಟೆರ್ನೆಟ್‍ನಲ್ಲಿ ದೊರೆಯುವ ಮಾಹಿತಿ ನಮ್ಮ ಜ್ಞಾನವಾಗಬೇಕು ಎಂದು ಹೇಳಿದರು.

ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ರಾಕೇಶ್ ಕುಮಾರ್ ಕಮ್ಮಜೆ ಸ್ವಾಗತಿಸಿದರು. ಉಪನ್ಯಾಸಕಿ ಭವ್ಯಾ ಪಿ.ಆರ್. ನಿಡ್ಪಳ್ಳಿ ಕಾರ್ಯಕ್ರಮ ನಿರೂಪಿಸಿದರು.

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ಮಂಗಳೂರು- ಹೈದರಾಬಾದ್ ನಡುವೆ ಇನ್ನು ‘ಅಂಬಾರಿ ಡ್ರೀಮ್‍ಕ್ಲಾಸ್’ ಬಸ್

Upayuktha

ರಸ್ತೆ ನಿಯಮ ಕಡ್ಡಾಯವಾಗಿ ಪಾಲಿಸಿ: ಆರ್‌ಟಿಓ ರಾಮಕೃಷ್ಣ ರೈ

Upayuktha

ಭಕ್ತಿ ಹಾಗೂ ಭಾವುಕತೆಗೆ ಎಲ್ಲವನ್ನೂ ಸೆಳೆಯುವ ಶಕ್ತಿಯಿದೆ: ಮಾಣಿಲ ಶ್ರೀ

Upayuktha